
ಬೆಂಗಳೂರು (ಮಾ.26): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಂಧಿತ ಅರೋಪಿ ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಭಾಷೆಯ ತೊಡಕು ಉಂಟಾಗಿದೆ. ಅಹಮದಾಬಾದ್ ಎಫ್ಎಸ್ಎಲ್’ಗೆ ನವೀನ್ ಕುಮಾರ್ ಕರೆದೊಯ್ಯಲು ಭಾಷೆ ತೊಡಕು ಉಂಟಾಗಿದೆ.
ಮಂಪರು ಪರೀಕ್ಷೆ ಸಮಯದಲ್ಲಿ ನವೀನ್ ಕುಮಾರ್ ಕನ್ನಡದಲ್ಲಿ ಉತ್ತರ ನೀಡುತ್ತಾನೆ. ಅಹಮದಾಬಾದ್ ಎಫ್ಎಸ್ಎಲ್ ಅಧಿಕಾರಿಗಳಿಗೆ ಕನ್ನಡ ಭಾಷೆ ಅರ್ಥವಾಗದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಗುಜರಾತಿ ಭಾಷೆ ಗೊತ್ತಿರುವಂತ ವ್ಯಕ್ತಿಗಾಗಿ ಎಸ್’ಐಟಿ ಹುಡುಕಾಟ ನಡೆಸುತ್ತಿದೆ. ಭಾಷಾಂತರ ಜೊತೆಗೆ ಮನೋವಿಜ್ಞಾನ ಗೊತ್ತಿರುವ ವ್ಯಕ್ತಿಗಾಗಿ ಎಸ್’ಐಟಿ ಹುಡುಕಾಟ ನಡೆಸುತ್ತಿದೆ. ಮಂಪರು ಪರೀಕ್ಷೆ ವೇಳೆ ಅಧಿಕಾರಿಗಳು ಗುಜರಾತಿ, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪ್ರಶ್ನೆ ಕೇಳಿದರೆ ನವೀನ್ ಉತ್ತರಿಸಲು ಕಷ್ಟಪಡಬೇಕಾಗುತ್ತದೆ. ಹಾಗೂ ನವೀನ್ ಕನ್ನಡದಲ್ಲಿ ಉತ್ತರ ನೀಡಿದರೆ ಅಧಿಕಾರಿಗಳು ಅದನ್ನ ಗ್ರಹಿಸಲು ಕಷ್ಟವಾಗುತ್ತದೆ.
ಸದ್ಯ ನವೀನ್ ಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೂಕ್ತ ಭಾಷಾಂತರ ವ್ಯಕ್ತಿ ಸಿಕ್ಕ ನಂತರ ಕೋರ್ಟ್ ಗಮನಕ್ಕೆ ತಂದು ಎಫ್ಎಸ್ಎಲ್ ಗೆ ಕರೆದೊಯ್ಯಲು ಎಸ್ಐಟಿ ನಿರ್ಧಾರ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.