ಜಿಯೋ ಗ್ರಾಹಕರಿಗೆ ಹೊಸ ವರ್ಷಕ್ಕೆ 2 ಬೊಂಬಾಟ್ ಹೊಸ ಆಫರ್..!

By Suvarna Web DeskFirst Published Dec 23, 2017, 1:30 PM IST
Highlights

ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಹೊಸದಾದ 2 ಪ್ಲಾನ್'ಗಳನ್ನು ಘೊಷಿಸಿದೆ.

ನವದೆಹಲಿ (ಡಿ.23): ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಹೊಸದಾದ 2 ಪ್ಲಾನ್'ಗಳನ್ನು ಘೊಷಿಸಿದೆ.

ಪ್ರೀಪೇಯ್ಡ್ ಗ್ರಾಹಕರು  ಒಂದು ಪ್ಲಾನ್ನಲ್ಲಿ 199 ರು. ರಿಚಾರ್ಜ್ ಮಾಡಬೇಕು. ಇದರಲ್ಲಿ  ಉಚಿತ ವಾಯ್ಸ್ ಕಾಲ್ ಹಾಗೂ ಅನಿಯಮಿತ ಡೇಟಾ ಸೌಲಭ್ಯ ದೊರೆಯಲಿದೆ. (ಒಂದು ದಿನಕ್ಕೆ 1.2 ಜಿಬಿ  4ಜಿ ಡೇಟಾ ಸೌಲಭ್ಯ ಸಿಗಲಿದೆ). 28 ದಿನಗಳ ಕಾಲ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ.

ಇನ್ನೊಂದು ಪ್ಲಾನ್'ನಲ್ಲಿ 299 ರು. ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿಯೂ ಕೂಡ ಉಚಿತ ವಾಯ್ಸ್ ಕಾಲ್ ಹಾಗೂ ದಿನಕ್ಕೆ 2 ಜಿಬಿ 4ಜಿ ಡೇಟಾ ಸೌಲಭ್ಯ ಸಿಗಲಿದೆ.  ಅನಿಯಮಿತ ಎಸ್'ಎಂಎಸ್ ಸೌಲಭ್ಯವೂ ದೊರೆಯುತ್ತದೆ. 28 ದಿನಗಳ ಕಾಲ ಇದರ ವಾಯಿದೆ ಇದೆ.

click me!