ಹೆಬ್ಬಾಳ್ಕರ್‌ಗೆ ಅಕ್ರಮ ಲೋನ್, ಕ್ಷಮೆ ಕೇಳಿದ ರ‍್ಯಾಪರ್ ಚಂದನ್; ಇಲ್ಲಿವೆ ಅ.5ರ ಟಾಪ್ 10 ಸುದ್ದಿ!

Published : Oct 05, 2019, 05:41 PM ISTUpdated : Oct 05, 2019, 05:43 PM IST
ಹೆಬ್ಬಾಳ್ಕರ್‌ಗೆ ಅಕ್ರಮ ಲೋನ್, ಕ್ಷಮೆ ಕೇಳಿದ ರ‍್ಯಾಪರ್ ಚಂದನ್; ಇಲ್ಲಿವೆ ಅ.5ರ ಟಾಪ್ 10 ಸುದ್ದಿ!

ಸಾರಾಂಶ

ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮತ್ತೊಂದು ಅಕ್ರಮ ಬಯಲಾಗಿದೆ. ಪ್ರಭಾವ ಬಳಸಿ ಕೋಟಿ ಕೋಟಿ ರೂಪಾಯಿ ಲೋನ್ ಪಡೆದಿರುವ ಸ್ಫೋಟಕ ಮಾಹಿತಿಯನ್ನು ಸುವರ್ಣನ್ಯೂಸ್ ಬಿಚ್ಚಿಟ್ಟಿದೆ. ದಸಾರ ವೇದಿಕೆಯಲ್ಲಿ ರ್ಯಾಪರ್ ಸಿಂಗರ್ ಚಂದನ್ ಶೆಟ್ಟಿ ಪ್ರಪೋಸ್ ವಿವಾದಕ್ಕೆ ಕಾರಣವಾಗಿದೆ. ಸೌತ್ ಅಫ್ರಿಕಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಮೇಲುಗೈ, ಮಜಾ ಟಾಕೀಸ್‌ಗೆ ಫುಲ್ ಸ್ಟಾಪ್ ಸೇರಿದಂತೆ ಅ.04ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ. 

1) ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಂದು ಅಕ್ರಮ ಬಯಲಿಗೆ!

ಸುವರ್ಣನ್ಯೂಸ್ ವೀಕ್ಷಕರ ಮುಂದೆ ಮತ್ತೊಂದು ದೊಡ್ಡ ಸುದ್ದಿಯನ್ನು ಬಿಚ್ಚಿಡುತ್ತಿದೆ. ಕಳೆದೊಂದು ತಿಂಗಳಿನಿಂದ ಭಾರೀ ಸುದ್ದಿಯಲ್ಲಿರುವ ಪ್ರಕರಣವೊಂದನ್ನು ಸುವರ್ಣನ್ಯೂಸ್ ತಂಡ ಬೆನ್ನತ್ತಿದಾಗ, ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಬಗ್ಗೆ ಸ್ಪೋಟಕ ಮಾಹಿತಿಯೊಂದು  ಬಯಲಾಗಿದೆ. ಆ ರಾಜಕಾರಣಿ ಬೇರಾರೂ ಅಲ್ಲ, ಕೈ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್! 

2) ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ಆಘಾತ: 'ಕೈ' ತೊರೆದ ಮಾಜಿ ರಾಜ್ಯಾಧ್ಯಕ್ಷ!


ಹರಿಯಾಣದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಎಲೆಕ್ಷನ್ ರಂಗೇರುತ್ತಿದೆ. ಆದ್ರೆ ಕಾಂಗ್ರೆಸ್‌ಗೆ ಆರಂಭಿಕ ಆಘಾತವಾಗಿದೆ. ಹರಿಯಾಣ ವಿಧಾನಸಭೆ ಚುನಾವಣೆ ಗಲಾಟೆಯೇ ಕಾಂಗ್ರೆಸ್‌ ಆರಂಭಿಕ ಹಿನ್ನಡೆಯಾಗಿದೆ. ಹರಿಯಾಣ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


3) ಅಧಿಕಾರಿ ಮನೆಯಲ್ಲಿ ಸಿಕ್ತು 13 ಟನ್‌ ಚಿನ್ನ, ಬ್ಯಾಂಕ್‌ ಖಾತೆಯಲ್ಲಿ 2.61 ಲಕ್ಷ ಕೋಟಿ!

ಭ್ರಷ್ಟ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಮನೆಯಲ್ಲಿ ಬಚ್ಚಿಟ್ಟಿಕೊಂಡಿದ್ದನ್ನು ನೋಡಿದ್ದೇವೆ. ಆದರೆ, ಕಮ್ಯುನಿಸ್ಟ್‌ ರಾಷ್ಟ್ರ ಚೀನಾದಲ್ಲಿ ಉನ್ನತ ಹುದ್ದೆಯಲ್ಲಿದ್ದ ಭ್ರಷ್ಟಅಧಿಕಾರಿಯೊಬ್ಬನ ಮನೆಯನ್ನು ಶೋಧಿಸಲು ಹೋದ ಅಧಿಕಾರಿಗಳೇ ಒಮ್ಮೆ ಬೇಸ್ತು ಬಿದ್ದಿದ್ದಾರೆ. ಆತನ ಮನೆಯಲ್ಲಿ ಸಿಕ್ಕಿದ್ದು ಒಂದೆರಡು ಕೆ.ಜಿ. ಚಿನ್ನ ಅಲ್ಲ. ಬರೋಬ್ಬರಿ 13.5 ಟನ್‌ನಷ್ಟುಚಿನ್ನದ ಬಿಸ್ಕಟ್‌ಗಳು ಮತ್ತು ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

4) 2ನೇ ಇನಿಂಗ್ಸ್‌ನಲ್ಲೂ ರೋಹಿತ್ ಶತಕ; ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸತತ 2 ಸೆಂಚುರಿ ಸಿಡಿಸೋ ಮೂಲಕ ಹಲಲವು ದಾಖಲೆ ಪುಡಿ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್ ಸಿಡಿಸಿದ್ದ ರೋಹಿತ್ ಇದೀಗ ಸೆಂಚುರಿ ಬಾರಿಸಿ ಅಬ್ಬರಿಸಿದ್ದಾರೆ. 

5) ಭಾರತದ ಬಿಗಿ ಹಿಡಿತದಲ್ಲಿ ಆಫ್ರಿಕಾ; ಹರಿಣಗಳ ಗೆಲುವಿಗೆ 395 ಟಾರ್ಗೆಟ್!

ಟೀಂ ಇಂಡಿಯಾ ರೋಹಿತ್ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 323 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆಫ್ರಿಕಾ ತಂಡಕ್ಕೆ ಗೆಲ್ಲಲು 395 ರನ್‌ಗಳ ಗುರಿ ನೀಡಿದೆ. 

6) ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ಮನರಂಜಿಸುವ ಉದ್ದೇಶಕ್ಕಾಗಿ?

ಯುವ ದಸರಾ ವೇದಿಕೆ ಮೇಲೆ ಗೆಳತಿ ನಿವೇದಿತಾಗೆ ಪ್ರಪೋಸ್ ಮಾಡಿ, ವಿವಾದ ಮೈಮೇಲೆ ಎಳೆದುಕೊಂಡಿರುವ ಚಂದನ್ ಶೆಟ್ಟಿ ಕೊನೆಗೂ ಕ್ಷಮೆ ಯಾಚಿಸಿದರು. ಸುವರ್ಣನ್ಯೂಸ್ ಜೊತೆ ಮಾತನಾಡಿದ ಚಂದನ್-ನಿವೇದಿತಾ ಜೋಡಿ, ಸರ್ಕಾರಿ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದು ಎಂದು ಗೊತ್ತಿರಲಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದರು.

7) ಮಜಾ ಟಾಕೀಸ್‌ಗೆ ಫುಲ್‌ ಸ್ಟಾಪ್; ಸೃಜನ್ ಕಾಮಿಡಿ ಮುಗೀತು!

ತಮಾಷೆಗಳಿಂದಾಗಿಯೇ ಜನರ ಮನ ಗೆದ್ದಿದ್ದ ಮಜಾ ಟಾಕೀಸ್‌ ಪ್ರೇಕ್ಷಕರನ್ನು ನಗಿಸಿ ಒಂದೊಳ್ಳೆಯ ವಾತಾವರಣ ಸೃಷ್ಟಿಸುತ್ತಿತ್ತು. ನೋಡುಗರು ನಕ್ಕು ಹಗುರಾಗುತ್ತಿದ್ದರು. ಆದುದರಿಂದಲೇ ಮಜಾ ಟಾಕೀಸ್‌ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಜನರನ್ನು ತಲುಪಿತ್ತು. ಮಜಾ ಟಾಕೀಸ್‌ ಕಾರ್ಯಕ್ರಮ ಕೊನೆಯಾಗುತ್ತಿದೆ. ಅಕ್ಟೋಬರ್‌ 6ರಂದು ಈ ಕಾರ್ಯಕ್ರಮದ ಕೊನೆಯ ಸಂಚಿಕೆ ಪ್ರಸಾರವಾಗುತ್ತಿದೆ.


8) ಮಂಡ್ಯ: 'ಮೋದಿ- ಬಿಎಸ್‌ವೈ ಸಂಬಂಧ ಹಳಸಿದೆ'..!

ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿದೆ. ಮೂರು ಬಾರಿ ದೆಹಲಿಗೆ ಹೋದರೂ ಪ್ರಧಾನಿಗಳು ಸಮಯಾವಕಾಶ ಕೊಡಲಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಪ್ರಧಾನಿಗೆ ಯಡಿಯೂರಪ್ಪ ಅವ್ರನ್ನು ಕಂಡರೆ ಅಸಮಾಧಾನವಿದೆ ಎಂದಿದ್ದಾರೆ.

9) ಮದ್ಯ ಮಾರಾಟ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಆದೇಶ!

ಹೊಳೆನರಸೀಪುರದ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ ಆಚರಿಸಿಕೊಂಡು ಬಂದಿರುವ 62ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಮಹೋತ್ಸವವು ಅ.5 ಮತ್ತು ಅ.6ರಂದು ನಡೆಯಲಿದೆ. ಈ ಕಾರಣದಿಂದ ಕಾನೂನು ಮತ್ತು ಸುವ್ಯವಸ್ಥೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಧಿಕಾರಿಗಳು ಈ ಎರಡು ದಿನ ಪಟ್ಟಣದ ವ್ಯಾಪ್ತಿಯಲ್ಲಿ ಸಂಪೂರ್ಣ ಪಾನನಿಷೇಧ ವಿಧಿಸಿದ್ದಾರೆ. 

10) ಲೋಕಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕ ಆತ್ಮಹತ್ಯೆ!

 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ, ಹನುಮಂತನ ವೇಷಧಾರಿಯಾಗಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ನಿಭಾಸ್ ಸರ್ಕಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.  2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಂಗ್ಲಾದೇಶದ ನಾದಿಯಾ ಜಿಲ್ಲೆಯಲ್ಲಿ ಹನುಮಂತ ವೇಷಧಾರಿಯಾಗಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ನಿಭಾಸ್ ಕೊನೆಯುಸಿರೆಳೆದಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!