
ಶಿವಮೊಗ್ಗ[ಮೇ. 28] ಅತ್ತ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಸಿದ್ಧತೆ ಮಾಡಿಕೊಂಡಿದ್ದರೆ ಇತ್ತ ಶಿವಮೊಗ್ಗ ಬಿಜೆಪಿ ಕಾರ್ಯಕರ್ತರ ಬಾಯಿ ಸಿಹಿ ಮಾಡುತ್ತಿದೆ.
150 ಬಾಣಸಿಗರು ಮೂರು ಕಡೆಗಳಲ್ಲಿ ಲಾಡು ತಯಾರು ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ 300 ಬೂತ್‌ಗಳಲ್ಲಿ ತಲಾ 300 ಲಾಡುಗಳು ಹಂಚಲಾಗುತ್ತದೆ. ನರೇಂದ್ರ ಮೋದಿ ಅವರು ಮೇ 30ರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದರೆ ಇತ್ತ ಶಿವಮೊಗ್ಗದ ಕಾರ್ಯಕರ್ತರು ಬಾಯಿ ಸಿಹಿ ಮಾಡಿಕೊಳ್ಳಲಿದ್ದಾರೆ.
ದೀದಿಗೆ ಮೋದಿ ಏಟು, ಟಿಎಂಸಿ ತೊರೆದ ಇಬ್ಬರು ಶಾಸಕರು, 50 ಮುಖಂಡರು
ಮೋದಿ ಪ್ರಮಾಣಕ್ಕೆ ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ನೇಪಾಳ, ಭೂತಾನ್ ಸೇರಿದಂತೆ ವಿವಿಧ ದೇಶದ ನಾಯಕರು ಆಗಮಿಸಲಿದ್ದಾರೆ. ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಮೋದಿ ಪದಗ್ರಹಣವನ್ನು ವಿಶಿಷ್ಟವಾಗಿ ಸಂಭ್ರಮಿಸಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.