
ತೀರ್ಥಹಳ್ಳಿ[ಮೇ. 28] ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕುಡುಮಲ್ಲಿಗೆ ಸಮೀಪದ ಬಾಳಗಾರು ಬಳಿ ಕಾರೊಂದು ರಸ್ತೆಯಿಂದ ಮನೆ ಮೇಲೆ ಹಾರಿ ನಿಂತಿದೆ.
ಮುಡುಬ ಬಳಿಯ ಉಳ್ಳೋಡಿ ಬಸ್ ಸ್ಟಾಪ್ ಹತ್ತಿರವಿರುವ ಮನೆಯೊಂದರ ಮಾಡಿನ ಮೇಲೆ ಕಾರೊಂದು ಅಪ್ಪಳಿಸಿ ನಿಂತಿದೆ. ಈ ಕಾರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣದ ತಪ್ಪಿದ ಕಾರು ಮನೆಗೆ ಹಾರಿ ಕಂಬದ ಮೇಲಿಂದ ನೇತು ಹಾಕಿಕೊಂಡಂತೆ ಸಿಲುಕಿದೆ. ಮನೆಯ ಮುಂದೆ ಯಾರೂ ಇಲ್ಲದಿದ್ದರಿಂದ ಅಪಾಯ ಆಗಿಲ್ಲ.
ಮಲೆನಾಡಿಗರೇ ಎಚ್ಚರ, ಈ ಸೈಕೋ ನಿಮ್ಮ ಮನೆ ಹತ್ತಿರವೂ ಬರಬಹುದು!
ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೂ ಕೂಡ ಯಾವುದೇ ಗಂಭೀರ ಗಾಯವಾಗಿಲ್ಲ. ಕಾರು ಮೇಲಿನಿಂದ ಹಾರಿಬಿದ್ದ ರಭಸಕ್ಕೆ ಹಂಚಿನ ಮಾಡು, ಕಾಂಪೌಂಡ್, ಗೇಟು ಹಾನಿಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.