
ಬೆಂಗಳೂರು(ಮಾ.03): ಕಟ್ಟಿಕೊಂಡವನು ಬೇರೆ ಮದ್ವೆ ಆಗ್ತಿದ್ದಾನೆ ಆಂತಾ ಗೃಹಿಣಿಯೊಬ್ಬಳು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಗಾಯತ್ರಿನಗರದಲ್ಲಿ ನಡೆದಿದೆ.
ಎರಡು ವರ್ಷದ ಹಿಂದೆ ಉಮಾ ಎಂಬಾಕೆ ವಿನಯ್'ನೊಂದಿಗೆ ಮದ್ವೆಯಾಗಿತ್ತು. ನಂತರ ಆತ ಪರಸ್ತ್ರಿಯನ್ನು ವರಿಸುವ ಸಲುವಾಗಿ ಉಮಾಳಿಗೆ ಕಿರುಕುಳ ನೀಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಇವರಿಬ್ಬರು ಮದ್ವೆಯಾಗಿರುವ ವಿಷಯ ಸ್ವತಃ ವಿನಯ್'ನ ತಂದೆ ತಾಯಿಗೂ ಗೊತ್ತಿರಲಿಲ್ಲವಂತೆ. ಇನ್ನು ಪತಿ ವಿನಯ್ ಈಗ ಮತ್ತೊಬ್ಬಳನ್ನು ಮದ್ವೆಯಾಗ್ತಿದ್ದಾನೆ ಎಂದು ಆರೋಪಿಸಿ ಉಮಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಘಟನೆ ಸಂಬಂಧ ವನಿತಾ ಸಹಾಯವಾಣಿಗೂ ಉಮಾ ದೂರು ನೀಡಿದ್ರೂ ಎನೂ ಪ್ರಯೋಜನವಾಗಿಲ್ಲ. ಹೀಗಾಗಿ ತನಗೆ ಆದಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ಅವಲತ್ತುಕೊಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.