
ಬಂಡೀ ರಾಷ್ಟ್ರೀಯ ಉದ್ಯಾನವನಕ್ಕೆ ಬಿದ್ದಿರೋ ಬೆಂಕಿ ಹಿಂದೆ ಭಾರೀ ಮಾಫಿಯಾದ ಕೈವಾಡ ಇದೆ. ಕೇರಳಾ ಭಾಗದಿಂದ ಬಂದ ಮಾಫಿಯಾ ಮಂದಿ ಕರುನಾಡಿಗೆ ಕಿಚ್ಚು ಹಚ್ಚಿದ್ದಾರೆ. ಈ ಆಘಾತಕಾರಿ ಅಂಶ ಸುವರ್ಣ ನ್ಯೂಸ್ ಕವರ್'ಸ್ಟೋರಿ ತಂಡ ಬಯಲು ಮಾಡಿದೆ.
ಬಂಡೀಪುರದಲ್ಲಿ ಬೆಂಕಿ ಬಿದ್ದಿರೋ ಗುಂಡ್ರೆ, ಕಲ್ಕೆರೆ ಅರಣ್ಯ ಪ್ರದೇಶ ಕೇರಳ ಗಡಿ ಭಾಗದಲ್ಲಿ ಇದೆ. ಕೇರಳ ಭಾಗದವರೇ ಬಂದು ಇಲ್ಲಿ ಬೆಂಕಿ ಹಚ್ಚಿದ್ದಾರೆ ಅನ್ನೋ ಅನುಮಾನ ಅರಣ್ಯ ಅಧಿಕಾರಿಗಳಿಗೂ ಇದೆ. ಹಾಗಾದ್ರೆ ಅವರು ಯಾರು? ಅವರಿಗೆ ನಮ್ಮ ಕರುನಾಡಿನ ಕಾಡಿನ ಮೇಲೆ ಅದೇನು ದ್ವೇಷ? ಈ ಪ್ರಶ್ನೆಗೆ ಉತ್ತರವೇ ದನದ ಮಾಫಿಯಾ.
ಎನ್ ಬೇಗೂರಿಂದ ಗುಂಡ್ರೆ ಅರಣ್ಯ ಪ್ರದೇಶದೊಳಗೆ 8-9 ಕಿ.ಮೀ ನಡೆದು ಹೋದ್ರೆ ಸಾಕು ಕೇರಳ ಸೇರಬಹುದು. ಆದರೆ ಈಗ ಈ ದಾರಿಯಲ್ಲಿ ಲಾಂಟಾನ ಕಾಟ ಹೆಚ್ಚಾಗಿದೆ. ಲಾಂಟಾನ ಕಾಟ ನಿವಾರಿಸಲು ಅಕ್ರಮ ದನ ಸಾಗಾಟ ಮಾಫಿಯಾ ಕಾಡಿಗೆ ಬೆಂಕಿ ಹಾಕಿರಬಹುದು ಅನ್ನೋ ಅನುಮಾನ ಸ್ಥಳೀಯರದ್ದು.
ಈ ಭಾಗದಲ್ಲಿ ವಾರಕ್ಕೆ ಎರಡರಿಂದ ಮೂರು ದಿನ ನೂರಾರು ದನಕರುಗಳನ್ನು ರಾಜಾರೋಷವಾಗಿಯೇ ಕೇರಳಾ ಗಡಿ ದಾಟಿಸುತ್ತಾರೆ. ಇಲ್ಲಿ ಕೆಲ ಕಟುಕರು ದನಗಳನ್ನ ಸಾಲಾಗಿ ಕಟ್ಟಿ ಕೊನೆ ತುದಿಯಲ್ಲಿರೋ ಎರಡು ಹಸುಗಳ ಬಾಲ ಕಡಿದು ಅದಕ್ಕೆ ಖಾರದ ಪುಡಿ, ಗಾಜಿನ ಪುಡಿ ಹಾಕಿ ಕಪಿಲಾ ನದಿಯಲ್ಲಿ ಕೇರಳಾಕ್ಕೆ ಸಾಗಿಸೋ ಕರಾಳ ಸಂಗತಿಯನ್ನೂ ಕವರ್ಸ್ಟೋರಿ ಬಯಲಿಗೆಳೆದಿತ್ತು.
ಈ ಎಲ್ಲಾ ಸಮಸ್ಯೆಗಳು ಇವತ್ತು ಅರಣ್ಯ ನಾಶಕ್ಕೆ ಕಾರಣಗಳಾಗಿವೆ. ಆದ್ರೆ ನಮ್ಮ ಅರಣ್ಯ ಸಚಿವರಾಗಲೀ, ಅರಣ್ಯ ಅಧಿಕಾರಿಗಳಾಗಲಿ ಇಲ್ಲಿನ ಸಮಸ್ಯೆ ಪರಿಹರಿಸಲು ಮುಂದಾಗದಿರೋದು ದುರಂತವೇ ಸರಿ.
ಈ ಅನುಮಾನಗಳ ಮಧ್ಯೆ ಅರಣ್ಯ ಸಿಬ್ಬಂದಿ ನಡುವಿನ ಸಂಘರ್ಷವೂ ಬೆಂಕಿಗೆ ಕಾರಣ ಇರಬಹುದು ಅಂತ ಶಂಕಿಸಲಾಗುತ್ತಿದೆ. ಆದರೆ ಈ ಸಂಶಯಗಳು ಪರಿಹಾರ ಆಗಬೇಕಾದರೆ ಸರಿಯಾದ ತನಿಖೆ ನಡೆಯಲೇ ಬೇಕು.
ವರದಿ: ರಂಜಿತ್ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.