ಪೇದೆ ನೆರವಿಂದ ಸಿಕ್ತು ಕೆಲ್ಸ: ಪೊಲೀಸ್‌ ಮುಂದೆ ಕಣ್ಣೀರಾದ್ಲು ಕಾಶ್ಮೀರಿ ಹುಡುಗಿ

By Suvarna News  |  First Published Jan 10, 2020, 12:41 PM IST

ಇನ್ನೇನು ಸಂದರ್ಶನಕ್ಕೆ ಹೋಗಬೇಕಾದಾಗ ಎಲ್ಲ ದಾಖಲೆಗಳನ್ನೂ ಅಪರಿಚಿತ ನಗರವೊಂದರಲ್ಲಿ ಕಳೆದುಕೊಂಡರೆ ಹೇಗಾಗಬಹುದು..? ಎಷ್ಟು ಅಸಹಾಯಕರಾಗಿ ಬಿಡಬಹುದಲ್ಲ..? ಅದೇ ದಾಖಲೆಗಳು ಮರಳಿ ಸಿಕ್ಕಿದರೆ..? ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏನಿದು ಘಟನೆ..? ನೀವೇ ಓದಿ.


ಬೆಂಗಳೂರು(ಜ.10): ಕೆಲಸಕ್ಕಾಗಿ ಎಲ್ಲ ದಾಖಲೆಗಳೊಂದಿಗೆ ಸಿಲಿಕಾನ್‌ ಸಿಟಿಗೆ ಬಂದ ಕಾಶ್ಮೀರದ ಹುಡುಗಿ ನಗರದ ಮಧ್ಯೆ ದಾಖಲೆಗಳೆಲ್ಲವನ್ನೂ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ ಅದೃಷ್ಟವಶಾತ್ ಕಳೆದುಕೊಂಡ ದಾಖಲೆಗಳೆಲ್ಲವೂ ಸುರಕ್ಷಿತವಾಗಿ ಆಕೆಯ ಕೈ ಸೇರಿದೆ.

ಕಾಶ್ಮೀರಿ ಟೆಕ್ಕಿ ಯುವತಿ ಪಾಲಿಗೆ ಬೆಂಗಳೂರಿನ ಪೊಲೀಸ್ ಪೇದೆ ಆಪತ್ಬಾಂಧವನಾಗಿದ್ದಾನೆ. ಪೊಲೀಸ್ ಪೇದೆಯ ಸಹಾಯದಿಂದ ಕಾಶ್ಮೀರಿ ಟೆಕ್ಕಿ ಯುವತಿಗೆ ಬೆಂಗಳೂರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಕಾಶ್ಮೀರದ ಯುವತಿ ಮರಿಯಾ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನ ಖಾಸಗಿ ಕಂಪನಿಗೆ ಇಂಟರ್‌ವ್ಯೂಗೆ ಬಂದಿದ್ರು. ಇಂಟರ್ ವ್ಯೂಗೆ ಹೋಗುವ ತರಾತುರಿಯಲ್ಲಿ ಮರಿಯಾ ದಾಖಲಾತಿಗಳನ್ನ ಕಳೆದುಕೊಂಡಿದ್ರು.

Latest Videos

ಮಡಿಕೇರಿಯಲ್ಲಿ ಮಗುಚಿ ಬಿದ್ದ ಬೆಂಗಳೂರು-ಎರ್ನಾಕುಲಂ ಐರಾವತ ಬಸ್..!

ಮರಿಯಾ ಮಾರ್ಕ್ಸ್ ಕಾರ್ಡ್ಸ್, ಆಧಾರ್ ಕಾರ್ಡ್, ಪಾಸ್ ಪೊರ್ಟ್ ಸಮೇತ ಬ್ಯಾಗ್ ಕಳೆದುಕೊಂಡಿದ್ದರು. ಇದೇ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ಸದಾಶಿವ ಬೆಳಗಲಿ ಅವರಿಗೆ ಈ ಡಾಕ್ಯುಮೆಂಟ್‌ಗಳು ಸಿಕ್ಕಿವೆ. ಯುವತಿ ಮರಿಯಾ ಕಳೆದುಕೊಂಡಿದ್ದ ಬ್ಯಾಗನ್ನು ಸ್ಥಳೀಯರು ಸಂಪಿಗೆಹಳ್ಳಿ ಠಾಣೆ ಪೊಲೀಸ್ ಪೇದೆ ಸದಾಶಿವ ಬೆಳಗಲಿಗೆ ನೀಡಿದ್ದರು.

ಯುವತಿಯ ಫೊನ್ ನಂಬರ್ ಸಿಗದೇ ಅಕ್ಕಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿದ್ದ ಪೊಲೀಸ್ ಪೇದೆ ಮರುದಿನ ಯುವತಿ ಇ- ಲಾಸ್ಟ್ ನಲ್ಲಿ ದೂರು ದಾಖಲಿಸ್ತಿದ್ದಂತೆ ಯುವತಿ ನಂಬರ್ ಪಡೆದಿದ್ದಾರೆ. ಕೂಡಲೇ ಯುವತಿಗೆ ಕರೆ ಮಾಡಿ ಕಳೆದುಕೊಂಡಿದ್ದ ದಾಖಲಾತಿಗಳನ್ನ ಹಿಂದಿರುಗಿಸಿದ್ದಾರೆ.

PSI ನಿಂದಿಸಿದ ಮಾಜಿ ಶಾಸಕನ ಸಹೋದರರ ವಿರುದ್ಧ FIR

ನಂತರ ಓರಿಜಿನಲ್ ಡಾಕ್ಯುಮೆಂಟ್ಸ್ ಸಬ್ಮಿಟ್ ಮಾಡೋ ಮೂಲಕ ಇಂಟರ್‌ವ್ಯೂನಲ್ಲಿ ಮರಿಯಾ ಆಯ್ಕೆಯಾಗಿದ್ದಾರೆ. ಕಳೆದುಕೊಂಡಿದ್ದ ದಾಖಲೆಗಳು ಮತ್ತೆ ಸಿಕ್ಕಿದ್ದನ್ನ ಕಂಡು ಯುವತಿ ಕಣ್ಣೀರಿಟ್ಟಿದ್ದಾಳೆ. ಸಂಪಿಗೆಹಳ್ಳಿ ಠಾಣೆ ಪೊಲೀಸರ ಸಹಾಯಕ್ಕೆ ಕಾಶ್ಮೀರಿ ಯುವತಿಯ ಧನ್ಯವಾದ ತಿಳಿಸಿದ್ದಾಳೆ.

ಜನವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!