ದಂಡ ಕಟ್ಟಿ ಎಂದ ಎಸ್ಐಗೆ ಯುವತಿಯರ ಧಮ್ಕಿ

Published : Jan 12, 2018, 08:47 AM ISTUpdated : Apr 11, 2018, 12:43 PM IST
ದಂಡ ಕಟ್ಟಿ ಎಂದ ಎಸ್ಐಗೆ ಯುವತಿಯರ ಧಮ್ಕಿ

ಸಾರಾಂಶ

ಸಂಚಾರ ನಿಯಮ ಉಲ್ಲಂಘಿಸಿದನ್ನು ಪ್ರಶ್ನಿಸಿ ದಂಡ ವಿಧಿಸಲು ಮುಂದಾದ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಮೇಲೆ ಇಬ್ಬರು ಯುವತಿಯರು ಕೂಗಾಡಿ ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು (ಜ.12): ಸಂಚಾರ ನಿಯಮ ಉಲ್ಲಂಘಿಸಿದನ್ನು ಪ್ರಶ್ನಿಸಿ ದಂಡ ವಿಧಿಸಲು ಮುಂದಾದ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಮೇಲೆ ಇಬ್ಬರು ಯುವತಿಯರು ಕೂಗಾಡಿ ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯ ದೇವಾಂಗ ಜಂಕ್ಷನ್ ಸಮೀಪ ಬುಧವಾರ ಸಂಜೆ ನಡೆದಿದೆ. ಸಂಚಾರ ಠಾಣೆ ಪಿಎಸ್‌ಐ ಬೋಪಯ್ಯ ಅವರು ಬಿಬಿಎಂಪಿ ಕೇಂದ್ರ ಕಚೇರಿ ಹಿಂಭಾಗದ ದೇವಾಂಗ ಜಂಕ್ಷನ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಹೋದರಿಯರಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಪಿಎಸ್‌ಐ ವಾಹನ ತಡೆದು ಪರಿಶೀಲಿಸಿದ್ದಾರೆ.

ವಾಹನ ತಪಾಸಣೆ ವೇಳೆ ಯುವತಿಯರ ಬಳಿ ವಾಹನ ವಿಮೆ ಇರಲಿಲ್ಲ. ಅಲ್ಲದೆ, ಈ ಹಿಂದೆ ನೋ ಪಾರ್ಕಿಂಗ್ ಕಡೆ ವಾಹನ ನಿಲ್ಲಿಸಿರುವ ಪ್ರಕರಣವಿತ್ತು. ಹೀಗಾಗಿ ಪಿಎಸ್‌ಐ ಹಳೆ ಪ್ರಕರಣದ ದಂಡ ಕಟ್ಟಿ ಎಂದು ಸಹೋದರಿಯರಿಗೆ ಹೇಳಿದ್ದರು.

ಇಷ್ಟಕ್ಕೆ ಪಿಎಸ್‌ಐ ವಿರುದ್ಧ ರಸ್ತೆಯಲ್ಲಿ ಕೂಗಾಡಿದ ಸಹೋದರಿಯರು ನಾವು ಏಕೆ ದಂಡ ಕಟ್ಟಬೇಕು? ದಂಡ ಕಟ್ಟಲು ಸಾಧ್ಯವಿಲ್ಲ. ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ. ನಾವು ನೋಡ್ತೀವಿ ಎಂದು ಕೂಗಾಡಿದ್ದಾರೆ. ನಿಮ್ಮ ಮುಖ ತೋರಿಸಿ ಅಂತ ಪಿಎಸ್‌ಐ ಬೋಪಯ್ಯ ಅವರ ವಿಡಿಯೋ ಮಾಡಿಕೊಂಡಿದ್ದು, ನಿಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹಾಕುವ ಬೆದರಿಕೆ | ಬಳಿಕ ಮಕ್ಕಳ ಜತೆ ಬಂದು ದಂಡ ಕಟ್ಟಿದ ತಂದೆ ಹೆದರಿಸಿದ್ದಾರೆ.

ಯುವತಿಯರಿಬ್ಬರೂ ಉತ್ತರ ಭಾರತದ ಮೂಲದವರಾಗಿದ್ದು, ಇಲ್ಲಿಯೇ ಬೆಳೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಕೂಡ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದು, ಯುವತಿಯರು ‘ಹಾಲೋ, ಹಾಯ್’ ಎಂದು ಗೇಲಿ ಮಾಡಿದ್ದಾರೆ. ಯುವತಿಯರ ವರ್ತನೆ ಕಂಡು ತಾಳ್ಮೆಯಿಂದಲೇ ಪ್ರತಿಕ್ರಿಯಿಸಿರುವ ಪಿಎಸ್‌ಐ ಆಯ್ತು ಹೋಗಿ ಎಂದು ಹೇಳಿದ್ದಾರೆ. ಬಳಿಕ ಕೂಗಾಡುತ್ತಾಲೇ ಸಹೋರಿಯರಿಬ್ಬರು ಆಟೋ ಹತ್ತಿ ಸ್ಥಳದಿಂದ ತೆರಳಿದ್ದರು.

ನಂತರ ತಮ್ಮ ತಂದೆಯ ಜತೆ ಹಲಸೂರು ಗೇಟ್ ಸಂಚಾರ ಠಾಣೆಗೆ ಬಂದಿದ್ದರು. ಈ ವೇಳೆ ಯುವತಿಯರ ತಂದೆ ಪಿಎಸ್‌ಐ ಬಳಿ ಕ್ಷಮೆಯಾಚಿಸಿ 700 ದಂಡ ಕಟ್ಟಿ ವಾಹನ ಪಡೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.

ಎಂದಿನಂತೆ ದೇವಾಂಗ ಜಂಕ್ಷನ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದೆ. ಈ ವೇಳೆ ಯುವತಿಯರಿದ್ದ ವಾಹನ ತಡೆದು ತಪಾಸಣೆ ನಡೆಸಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದೆ. ಇಷ್ಟಕ್ಕೆ ಯುವತಿಯರು ಕೂಗಾಡಿದರು ಎಂದು ಸಬ್‌ಇನ್ಸ್‌ಪೆಕ್ಟರ್ ಬೋಪಯ್ಯ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Photos: ಕಾರವಾರ ಕರಾವಳಿ ಉತ್ಸವದಲ್ಲಿ ಶ್ವಾನಗಳ ದರ್ಬಾರ್: 25 ತಳಿ ನಾಯಿಗಳಿಂದ ಅದ್ಭುತ ಸಾಹಸ ಪ್ರದರ್ಶನ!
ಪರ್ಸನಲ್ ಲೋನ್ ಮರುಪಾವತಿ ಮುನ್ನವೇ ಮೃತಪಟ್ಟರೆ ಬ್ಯಾಂಕ್ ನಿಯಮವೇನು?