
ಲಂಡನ್(ಮೇ.12): ಜೂನ್ 8ರಂದು ನಡೆಯಲಿರುವ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್‌ನ ಲ್ಯಾಂಬೆತ್ ನಗರದ ಮಾಜಿ ಮಹಾಪೌರ, ಕನ್ನಡಿಗ ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ ಹುರಿಯಾಳಾಗಿ ಕಣಕ್ಕಿಳಿಯಲಿದ್ದಾರೆ. ನೈಋುತ್ಯ ಲಂಡನ್‌ನ ಪುಟ್ನಿ ಎಂಬ ಕ್ಷೇತ್ರದಿಂದ ನೀರಜ್ ಪಾಟೀಲ್ ಅವರು ಬ್ರಿಟನ್‌ನ ಹಾಲಿ ಶಿಕ್ಷಣ ಮಂತ್ರಿ, ಕನ್ಸರ್ವೇಟಿವ್ ಪಕ್ಷದ ಜಸ್ಟಿನ್ ಗ್ರೀನಿಂಗ್ ಅವರ ವಿರುದ್ಧ ಸೆಣಸಲಿದ್ದಾರೆ.
ನೀರಜ್ ಪಾಟೀಲ್ ಅವರು ಕಲಬುರಗಿ ಜಿಲ್ಲೆಯ ಕಮಲಾಪುರದವರಾಗಿದ್ದು, ಅಪಘಾತ ಮತ್ತು ತುರ್ತು ವೈದ್ಯಕೀಯ ಸೇವೆಯ ಸಲಹೆಗಾರರಾಗಿದ್ದಾರೆ. ಗ್ರೀನ್‌ಬರ್ಗ್ ಅವರು ಈ ಕ್ಷೇತ್ರದ ಪುಟ್ನಿ ಕ್ಷೇತ್ರದಿಂದ 2005ರಿಂದ ಆಯ್ಕೆಯಾಗುತ್ತಿದ್ದು, ಪಾಟೀಲ್ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.
ಪಾಟೀಲ್ ಅವರು ಲ್ಯಾಂಬೆತ್ ಮೇಯರ್ ಆಗಿ ಸಾಕಷ್ ಟುಹೆಸರುವಾಸಿಯಾಗಿದ್ದಾರೆ. ಅಲ್ಲದೆ, ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಯನ್ನು ಬ್ರಿಟನ್‌ನಲ್ಲಿ ಸ್ಥಾಪಿಸಿ ಜನಾನುರಾಗಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಪುತ್ಥಳಿಯನ್ನು ನ.14, 2015ರಂದು ಅನಾವರಣ ಗೊಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.