
ನವದೆಹಲಿ(ಮೇ.12): ಇಸ್ರೇಲ್'ನ ಸರ್ಕಾರಿ ಟಿವಿ ವಾಹಿನಿಯೊಬ್ಬಳು ವಾರ್ತೆ ವಾಚಿಸುತ್ತಿದ್ದ ಸಂದರ್ಭದಲ್ಲಿ 'ತಮ್ಮ ಚಾನೆಲ್ ಇನ್ಮುಂದೆ ಸ್ಥಗಿತಗೊಳ್ಳಲಿದೆ' ಎಂಬ ಬ್ರೇಕಿಂಗ್ ನ್ಯೂಸ್ ಓದಿ ಗದ್ಗದಿತಳಾದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಗೆವುಲಾ ಎವೆನ್ ಹೆಸರಿನ ವಾರ್ತಾ ವಾಚಕಿ ವಾರ್ತೆ ಓದುತ್ತಿದ್ದ ವೇಳೆ ತಮ್ಮ ವಾಹಿನಿ ಬಂದ್ ಆಗುತ್ತಿದೆ ಎಂಬ ಬ್ರೇಕಿಂಗ್ ಸುದ್ದಿಯನ್ನು ಓದಿದಾಕೆ. ಈ ಸುದ್ದಿ ಓದುತ್ತಿದ್ದಂತೆಯೇ ಮುಖದಲ್ಲಿದ್ದ ಗಾಂಭಿರ್ಯ ಮಾಸಿ, ಲೈವ್'ನಲ್ಲಿ ಈಕೆಯ ಕಣ್ಣಿನಿಂದ ಕಂಬನಿ ಮಿಡಿದಿದೆ. ಮೇ 9 ರಂದು ಚಾನೆಲ್ ವನ್'ನ ಅಫೀಷಿಯಲ್ ಫೇಸ್'ಬುಕ್ ಅಕೌಂಟ್'ನಿಂದ ಶೇರ್ ಆಗಿರುವ 55 ನಿಮಿಷದ ವಿಡಿಯವನ್ನು ಈವರೆಗೂ 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿದ್ದಾರೆ(https://www.facebook.com/iba.channel11/videos/1552219794810386/?pnref=story).
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಈ ಸುದ್ದಿ ತಿಳಿಯುತ್ತಿದ್ದಂತೆಯೇ ಖುದ್ದು ವಾಚಕಿಗೇ ಶಾಕ್ ತಗುಲಿದಂತಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಸುದ್ದಿ ಓದಿದ ವಾರ್ತಾ ವಾಚಕಿ 'ಈಗಷ್ಟೇ ಬ್ರೇಕಿಂಗ್ ನ್ಯೂಸ್ ಒಂದು ಬಂದಿದ್ದು, ಸಂಸತ್ ನೀಡಿರುವ ಸ್ಪಷ್ಟನೆಯ ಅನ್ವಯ ಇಂದು ರಾತ್ರಿ ನಮ್ಮ ವಾಹಿನಿಯ ಕೊನೆಯ ಕಾರ್ಯಕ್ರಮವಾಗಲಿದೆ ಹಾಗೂ ಇದೇ ನಮ್ಮ ಕೊನೆಯ ಕಾರ್ಯಕ್ರಮವಾಗಿದೆ. ಹೀಗಾಗಿ ಮುಂದಿನ ವಾರ್ತೆಯನ್ನು ವಾಚಿಸುವುದು ವ್ಯರ್ಥವಾಗುತ್ತದೆ' ಎಂದಿದ್ದಾರೆ.
ಸುದ್ದಿ ಓದಿ ಭಾವುಕರಾದ ವಾಚಕಿ 'ಕೊನೆಯದಾಗಿ ಹೇಳುವುದೇನೆಂದರೆ, ಈ ನಿರ್ಧಾರದಿಂದ ಹಲವಾರು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಅವರೆಲ್ಲರಿಗೂ ಬೇರೆ ಕೆಲಸ ಸಿಗಲೆಂದು ಆಶಿಸುತ್ತೇನೆ' ಎಂದಿದ್ದಾರೆ.
ಮಾಧ್ಯಮವೊಂದರಲ್ಲಿ ಪ್ರಸಾರವಾದ ಸುದ್ದಿಯನ್ವಯ ವಾಹಿನಿಯಲ್ಲಿ ಕೆಲಸ ನಿರ್ವಹಿಸುವ ಕರ್ಮಚಾರಿಗಳಿಗೆ ತಮ್ಮ ಸುದ್ದಿ ವಾಹಿನಿಯನ್ನು ಸರ್ಕಾರ ರದ್ದುಗೊಳಿಸುತ್ತದೆ ಎಂಬ ಮಾಹಿತಿ ಇತ್ತು. ಆದರೆ ಅವರೆಲ್ಲಾ ಇಷ್ಟು ಶೀಘ್ರವಾಗಿ ರದ್ದು ಮಾಡುತ್ತಾರೆಂದು ಅಂದಾಜಿಸಿರಲಿಲ್ಲ. ಮೇ 15ರಂದು ಕೊನೆಯ ಕಾರ್ಯಕ್ರಮ ಪ್ರಸಾರ ಮಾಡುತ್ತೇವೆ ಎಂದು ಅವರು ಯೋಚಿಸಿದ್ದರು' ಎಂದು ತಿಳಿದು ಬಂದಿದೆ. ಇನ್ನು ಸುದ್ದಿ ವಾಹಿನಿಯು ಅಂತಿಮವಾಘಿ ರಾಷ್ಟ್ರಗೀತೆ ಹಾಡುವ ಮೂಲಕ ತಮ್ಮ ವಾಹಿನಿಯನ್ನು ಸ್ಥಗಿತಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.