ಹಂಗಾರೆ ಅಯೋಧ್ಯೆಯಲ್ಲಿ ಮಂದಿರವೇ ಪಕ್ಕಾನಾ?

By Web DeskFirst Published Sep 27, 2018, 3:04 PM IST
Highlights

ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಎಲ್ಲ ಎಂದ ಸುಪ್ರೀಂ! ಪ್ರಾರ್ಥನೆಗೆ ಮಸೀದಿಯೇ ಆಗಬೇಕೆಂದಿಲ್ಲ ಎಂದ ಸುಪ್ರೀಂ! ಭವಿಷ್ಯದ ಅಯೋಧ್ಯೆ ತೀರ್ಪಿನ ಮೇಲೆ ಪ್ರಭಾವ ಬೀರುತ್ತಾ?! ತೀರ್ಪಿನ ಬಗ್ಗೆ ಕಾನೂನು ತಜ್ಞರು ಹೇಳೊದೇನು ಗೊತ್ತಾ?! ಅಕ್ಟೋಬರ್ 29 ರಿಂದ ಅಯೋಧ್ಯೆ ವಿಚಾರಣೆ ಪ್ರಾರಂಭ

ನವದೆಹಲಿ(ಸೆ.27): ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂಬ ಇಂದಿನ ಸುಪ್ರೀಂ ಕೋರ್ಟ್ ತೀರ್ಪು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಾಧ್ಯತೆಯನ್ನು ಹೆಚ್ಚಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಮಸೀದಿಯೇ ಆಗಬೇಕೆಂದಿಲ್ಲ ಎಂಬ 1994ರ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಎಲ್ಲ ಎಂಬ ವಾದವನ್ನು ಸರ್ವೋಚ್ಛ ನ್ಯಾಯಾಲಯ ಒಪ್ಪಿಕೊಂಡಿದೆ.

ಇನ್ನು ಇಂದಿನ ಸುಪ್ರೀಂ ತೀರ್ಪು ಭವಿಷ್ಯದ ಅಯೋಧ್ಯೆ ರಾಮ ಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಾರ್ಥನೆಗೆ ಮಸೀದಿಯೇ ಆಗಬೇಕೆಂದಿಲ್ಲ ಎಂದಾದ ಮೇಲೆ ಅಯೋದ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣದಲ್ಲಿ ಅರ್ಥವಿಲ್ಲ ಎಂಬುದು ಕೆಲವರ ವಾದ.

ಆದರೆ ಕಾನೂನು ತಜ್ಞರ ಪ್ರಕಾರ ಸುಪ್ರೀಂ ಕೋರ್ಟ್ ನ ಇಂದಿನ ತೀರ್ಪು ಭವಿಷ್ಯದ ಅಯೋಧ್ಯೆ ತೀರ್ಪಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾರಣ ಅಯೋಧ್ಯೆ ವಿವಾದ ನಿಶ್ಷಿತವಾಗಿ ಭೂ ವಿವಾದವಾಗಿದ್ದು, ನಂಬಿಕೆ ಮೇಲೆ ತೀರ್ಪು ನೀಡಲು ಬರುವುದಿಲ್ಲ ಎಂಬುದು ಇವರ ವಾದ.

Supreme Court to begin hearing on Ayodhya matter from October 29, 2018 to decide the suit on merit. pic.twitter.com/du5499fGvs

— ANI (@ANI)

ಅಂದರೆ ಇಂದಿನ ಸುಪ್ರೀಂ ಕೋರ್ಟ್ ತೀರ್ಪಿಗೂ ಭವಿಷ್ಯದ ಅಯೋಧ್ಯೆ ತೀರ್ಪಿಗೂ ಸಂಬಂಧವೇ ಇಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯ. ಇದೇ ವೇಳೆ ಅಕ್ಟೋಬರ್ 29ರಂದು ಅಯೋಧ್ಯೆ ವಿಚಾರಣೆ ಆರಂಭಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ಈ ಮಧ್ಯೆ ಇಂದಿನ ಸುಪ್ರೀಂ ಕೋರ್ಟ್ ತೀರ್ಪನ್ನು ವಿಹೆಚ್ ಪಿ ಸೇರಿದಂತೆ ಹಿಂದೂ ಸಂಘಟನೆಗಳು ಸ್ವಾಗತಿಸಿದ್ದು, ರಾಮ ಮಂದಿರ ನಿರ್ಮಾಣದ ತಮ್ಮ ದೃಢ ಸಂಕಲ್ಪದತ್ತ ಇದು ನಮ್ಮ ಮೊದಲ ಜಯ ಎಂದು ಹೇಳಿವೆ.

click me!