ಕೈ ರಣತಂತ್ರ: ಇಂದಿನಿಂದ ಕಾಂಗ್ರೆಸ್ ಮುಖಂಡರ ಸರಣಿ ಸಭೆ

By Suvarna Web DeskFirst Published May 22, 2017, 9:35 AM IST
Highlights

ಆಡಳಿತರೂಢ ಕಾಂಗ್ರೆಸ್ ಮುಂದಿನ ಚುನಾವಣೆಯನ್ನ ಚಾಲೆಂಜ್​ ಆಗಿ ಸ್ವೀಕರಿಸಿದ್ದು, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡ್ತಿದೆ. ಸೋಮವಾರದಿಂದ ಐದು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಪಕ್ಷದ ಮುಖಂಡರ ಸಭೆ ನಡೆಯಲಿದೆ. ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸಾಥ್ ನೀಡಲಿದ್ದಾರೆ.

ಬೆಂಗಳೂರು(ಮೇ.22): ಆಡಳಿತರೂಢ ಕಾಂಗ್ರೆಸ್ ಮುಂದಿನ ಚುನಾವಣೆಯನ್ನ ಚಾಲೆಂಜ್​ ಆಗಿ ಸ್ವೀಕರಿಸಿದ್ದು, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡ್ತಿದೆ. ಸೋಮವಾರದಿಂದ ಐದು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಪಕ್ಷದ ಮುಖಂಡರ ಸಭೆ ನಡೆಯಲಿದೆ. ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸಾಥ್ ನೀಡಲಿದ್ದಾರೆ.

ಮೊದಲು ಉತ್ತರ ಕನ್ನಡ,ಬಾಗಲಕೋಟೆ,ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ಮುಖಂಡರ ಸಭೆ ಬೆಳಗ್ಗೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಗದಗ,ಹಾವೇರಿ, ಹುಬ್ಬಳ್ಳಿ-ಧಾರವಾಡ ನಗರ ಮತ್ತು ಧಾರವಾಡ ಗ್ರಾಮೀಣ ಭಾಗದ ಮುಖಂಡರ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷ ಸಂಘಟನೆ, ಆಯಾ ಭಾಗದಲ್ಲಿ ಕಾಂಗ್ರೆಸ್ ಸ್ಥಿತಿ-ಗತಿ ಹೇಗಿದೆ ಅನ್ನೋದರ ಬಗ್ಗೆ ಮುಖಂಡರು ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್​ ಹಾಗೂ ಎಐಸಿಸಿ ನಾಲ್ಕು ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಆಡಳಿತರೂಢ ಪಕ್ಷವಾಗಿ ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದರಿಂದಲೇ ಮುಂದೆಯೂ ಅಧಿಕಾರ ಚುಕ್ಕಾಣಿ ಪಕ್ಷದ್ದೇ ಆಗಬೇಕು. ಇದಕ್ಕೆ ಸರ್ಕಾರ ಮತ್ತು ಪಕ್ಷ ಯಾವ ರೀತಿ ತಂತ್ರಗಳನ್ನ ಹೆಣೆಯಬೇಕು ಅನ್ನೋದರ ಬಗ್ಗೆ ರಾಜ್ಯದ ಮುಖಂಡರಿಂದ ಅಭಿಪ್ರಾಯಗಳನ್ನ ರಾಜ್ಯ ನಾಯಕರು ಪಡೆಯಲಿದ್ದಾರೆ. ಈ ಮೂಲಕ ಜೆಡಿಎಸ್, ಬಿಜೆಪಿಗೆ ಚುನಾವಣೆಲೀ ತಕ್ಕ ಉತ್ತರ ನೀಡುವುದು ಪಕ್ಷದ ಉದ್ದೇಶವಾಗಿದೆ.

click me!