
ಚಿಕ್ಕಬಳ್ಳಾಪುರ(ಮೇ.22): ಆಕೆಗೆ ಬಿಪಿ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದಳು. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಈಕೆಗೆ ಸರಿ ಹೋಗಿರಲಿಲ್ಲಾ ಹಾಗಾಗ ಮೈಮೇಲೆ ದೆವ್ವ ಗಾಳಿ ರೀತಿ ಬರುತ್ತೆ ಅಂತಾ ಹೇಳುತ್ತಿದ್ದರು, ದೆವ್ವ ಗಾಳಿ ಬಿಡಿಸಬೇಕು ಅಂತಾ ನಾಟಿ ವೈದ್ಯನ ಬಳಿ ಹೋದ ಆಕೆ ವಾಪಸ್ಸು ಬಂದಿದ್ದು ಮಾತ್ರ ಶವವಾಗಿ ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.
ಶವದ ಮುಂದೆ ರೋದಿಸುತ್ತಿರುವ ಕುಟುಂಬಸ್ಥರು. ಮತ್ತೊಂದೆಡೆ ಶವವನ್ನು ಟೆಂಪೊಗೆ ಹಾಕುತ್ತಿರುವ ನಾಟಿ ವೈದ್ಯ ಹಾಗೂ ಸ್ಥಳೀಯರು. ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಅಲಗುರ್ಕಿ ಗ್ರಾಮದಲ್ಲಿ. ಗುಡಿಬಂಡೆ ತಾಲೂಕಿನ ದಿನ್ನಹಳ್ಳಿ ಗ್ರಾಮದ ಸುಜಾತ ಎಂಬಾಕೆ ಮೇಲೆ ದೆವ್ವ ಬರುತ್ತೆ ಎಂದು ಮಂತ್ರವಾದಿ ವೆಂಕಟೇಶಪ್ಪ ಬಳಿ ಮಂತ್ರ ಹಾಕಿಸಿಕೊಳ್ಳಲು ಬಂದಿದ್ದರು, ಈ ವೇಳೆ ಮಂತ್ರವಾದಿ ಮನೆಯಲ್ಲೇ ಸುಜಾತಮ್ಮ ಸಾವನ್ನಪ್ಪಿದ್ದಾಳೆ.
ಈಕಗೆ ಕಳೆದ 15 ವರ್ಷಗಳ ಹಿಂದೆ ಗೋವಿಂದಪ್ಪ ಎಂಬುವರ ಜೊತೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಆದರೆ ಈಕೆಗೆ ಕಳೆದ 4 ವರ್ಷಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಪಿ, ಶುಗರ್, ಕಾಯಿಲೆಯಿಂದ ಬಳಲುತ್ತಿದ್ದಳಂತೆ. ಈ ಕಾಯಿಲೆ ಒಂದು ಕಡೆ ಆದರೆ ಮತ್ತೊಂದೆಡೆ ಈಕೆಯ ಮೈಮೇಲೆ ದೆವ್ವ, ಗಾಳಿ ಬರುತ್ತಿತ್ತಂತೆ.
ಇನ್ನೂ ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯರು ನಡೆಸುವ ಶವಪರೀಕ್ಷೆಯ ವರದಿಯಿಂದ ಈ ಸಾವಿಗೆ ಕಾರಣ ಏನು ಎಂದು ತಿಳಿಯಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.