ಸಣ್ಣ ಉದ್ಯಮಿಗಳಿಗೆ ಕನ್ನಡಪ್ರಭ - ಸುವರ್ಣ ಉಜ್ವಲ ಪ್ರಶಸ್ತಿ ಪ್ರದಾನ

By Suvarna Web DeskFirst Published Mar 26, 2017, 5:13 AM IST
Highlights

ಬೆಂಗಳೂರುಗ್ರಾಮಾಂತರಜಿಲ್ಲೆಯನೆಲಮಂಗಲತಾಲೂಕಿನಲ್ಲಿರುವದಾಬಸ್ಪೇಟೆಕೈಗಾರಿಕಾಪ್ರದೇಶದಲ್ಲಿವಸತಿಸೌಲಭ್ಯಕಲ್ಪಿಸುವಂತೆಉದ್ಯಮಿಗಳುಮನವಿಮಾಡಿದ್ದಾರೆ. ಮನವಿಯನ್ನುಪರಿಶೀಲಿಸಿವಸತಿಸೌಲಭ್ಯಕಲ್ಪಿಸಲುಸರ್ಕಾರವುಬದ್ಧವಿದೆ. ಆದರೆ, ಉದ್ಯಮಿಗಳುಇದನ್ನುಪಡೆಯಲುಬದ್ಧತೆತೋರಬೇಕು

ಬೆಂಗಳೂರು(ಮಾ.26): ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿ ಮತ್ತು ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರವು ಬದ್ಧವಾಗಿದ್ದು, ಉದ್ಯಮಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಕರೆ ನೀಡಿದ್ದಾರೆ. 
ಕನ್ನಡಪ್ರಭ-ಸುವರ್ಣನ್ಯೂಸ್‌, ಎಸ್‌ಬಿಐ ಮತ್ತು ಕಾಸಿಯಾ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಕಾಸಿಯಾ ಉದ್ಯೋಗ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾವಂತ ಉದ್ಯಮಿಗಳಿಗೆ ‘ಉಜ್ವಲ ಉದ್ಯಮಿ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿರುವ ದಾಬಸ್‌ಪೇಟೆ ಕೈಗಾ ರಿಕಾ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಉದ್ಯ ಮಿಗಳು ಮನವಿ ಮಾಡಿದ್ದಾರೆ. ಮನವಿಯನ್ನು ಪರಿ ಶೀಲಿಸಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರವು ಬದ್ಧವಿದೆ. ಆದರೆ, ಉದ್ಯಮಿಗಳು ಇದನ್ನು ಪಡೆಯಲು ಬದ್ಧತೆ ತೋರಬೇಕು ಎಂದು ತಿಳಿಸಿದರು. 
ರಾಜ್ಯ ಸರ್ಕಾರವು ರಾಜ್ಯದಲ್ಲಿ ಆರು ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಸ್ಲಂ ನಿವಾಸಿಗಳಲ್ಲದ ಕಾರ್ಮಿಕರಿಗೆ ಒಂದು ಲಕ್ಷ ಮನೆ ಗಳನ್ನು ಮತ್ತು ಕೊಳಚೆ ಪ್ರದೇಶಗಳಲ್ಲಿ ಐದು ಸಾವಿರ ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಹಾಗೂ ದುರ್ಬಲ ವರ್ಗದವರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯ ಮಿಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ಮಹಿಳಾ ಉದ್ಯಮಿಗಳಿಗೆ ಶೇ.2ರಿಂದ ಶೇ.4ರಷ್ಟುಬಡ್ಡಿದರದಲ್ಲಿ ಮತ್ತು ಯುವ ಉದ್ಯಮಿಗಳಿಗೆ ಶೇ.8ರಷ್ಟುಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು. 
ಸಣ್ಣ ಕೈಗಾರಿಕಾ ಸಚಿವ ರಮೇಶ್‌ ಜಾರಕಿಹೊಳಿ ಮಾತನಾಡಿ, ಬೆಂಗಳೂರು ನಗರಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿ, ಆಸ್ತಿ ಸೇರಿದಂತೆ ಇತರೆ ತೆರಿಗೆಗಳು ಹೆಚ್ಚಿವೆ ಎಂಬುದು ಗಮನ ಬಂದಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ತೆರಿಗೆ ವ್ಯತ್ಯಾಸ ತಾರತಮ್ಯ ನಿವಾರಣೆ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು. 
ಈ ಹಿಂದೆ ಕೈಗಾರಿಕಾ ನಿವೇಶನಗಳನ್ನು 99 ವರ್ಷಕ್ಕೆ ಭೋಗ್ಯಕ್ಕೆ ನೀಡಲಾಗುತ್ತಿತ್ತು. ಭೂಮಿ ನೀಡುವ ಬಗ್ಗೆ ಇದ್ದ ಈ ನಿಯಮ ಸಡಿಲಿಸಿ ಇದೀಗ 10 ವರ್ಷಕ್ಕೆ ಇಳಿಸಲಾಗಿದೆ. ಕೆಐಎಡಿಬಿ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಭೂಮಿ ಹಂಚಿಕೆ ಮಾಡುವಾಗ 99 ವರ್ಷ ಭೋಗ್ಯಕ್ಕೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದರಿಂದ ಸಣ್ಣ ಕೈಗಾರಿಕೆಗಳ ಮೇಲೆ ಅಡ್ಡಪರಿಣಾಮ ಉಂಟಾಗಿ, ಬಂಡವಾಳ ಹೂಡಿಕೆಗೆ ಹಿನ್ನಡೆಯಾಗಿತ್ತು. ಬಜೆಟ್‌ನಲ್ಲಿ ಈ ನಿಯಮ ಸಡಿಲಿಸಲಾಗಿದೆ ಎಂದು ತಿಳಿಸಿದರು. 
‘ಕನ್ನಡಪ್ರಭ'ದ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಸಣ್ಣ ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸುವರ್ಣನ್ಯೂಸ್‌-ಕನ್ನಡಪ್ರಭ ಆರಂಭಿಸಿರುವ ‘ಉಜ್ವಲ ಉದ್ಯಮಿ ಪ್ರಶಸ್ತಿ'ಯನ್ನು ಮುಂದಿನ ದಿನದಲ್ಲಿ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳ ಸಾಲಿನಲ್ಲಿ ನಿಲ್ಲಿಸಲಾಗುವುದು. ಪ್ರಶಸ್ತಿ ಪಡೆದವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಪ್ರಶಸ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದರು. 
ಸಣ್ಣ ಕೈಗಾರಿಕೋದ್ಯಮಿಗಳಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂದು ಎನಿಸಿದಾಗ ಇಂತಹದೊಂದು ಪ್ರಶಸ್ತಿ ನೀಡಬೇಕು ಎಂಬ ಯೋಚನೆ ಬಂದಿದ್ದು, ನಂತರ ಅದನ್ನು ಕಾರ್ಯರೂಪಕ್ಕೆ ತರಲಾಯಿತು ಎಂದರು. ಇದೇ ವೇಳೆ, ಕಾಸಿಯಾ ಸಂಸ್ಥಾಪಕ ದಿವಂಗತ ಪದ್ಮಶ್ರೀ ಪುರಸ್ಕೃತ ಆರ್‌.ಎಸ್‌.ಆರಾಧ್ಯ ಅವರಿಗೆ ಕಾಸಿಯಾ ರತ್ನ ಪ್ರಶಸ್ತಿ ಸೇರಿದಂತೆ ಎಂಟು ಮಂದಿಗೆ ವಿಶೇಷ ಪ್ರಶಸ್ತಿ ಮತ್ತು 16 ವಿಭಾಗಗಳಲ್ಲಿ 32 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯ ಕ್ರಮದಲ್ಲಿ ಕಾಸಿಯಾದ ಅಧ್ಯಕ್ಷ ಎ. ಪದ್ಮನಾಭ, ಉದ್ಯಮಿ ಡಾ.ಪಿ. ಸದಾನಂದ ಮಯ್ಯ, ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸಾವಿತ್ರಿ, ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ವೈ. ವಿಜಯಕುಮಾರ್‌ ಇತರರು ಉಪಸ್ಥಿತರಿದ್ದರು.

(ಕನ್ನಡಪ್ರಭ ವಾರ್ತೆ)

click me!