ಮಾಲೀಕರೆ ಹುಶಾರ್: ಒಂದು ಮಹಡಿ ಹೆಚ್ಚು ಕಟ್ಟಿದರೂ ಬಿಬಿಎಂಪಿಗೆ ಬರೆದುಕೊಡಬೇಕಾಗುತ್ತದೆ !

By Suvarna Web DeskFirst Published Mar 26, 2017, 4:55 AM IST
Highlights

ಇನ್ನುಮುಂದೆನೆಲಮಹಡಿಯೂಸೇರಿದಂತೆ 4 ಅಂತಸ್ತಿನಅಥವಾಅದಕ್ಕೂಹೆಚ್ಚಿನಅಂತಸ್ತಿನಕಟ್ಟಡನಿರ್ಮಿಸುವಾಗಮಾಲೀಕರುನೆಲಅಂತಸ್ತನ್ನುಪಾಲಿಕೆಗೆಕ್ರಯಕ್ಕೆನೀಡುವಕರಾರುಮಾಡಿಕೊಳ್ಳಬೇಕು

ಬೆಂಗಳೂರು(ಮಾ.26):ನೆಲಮಹಡಿ ಬರೆದು ಕೊಡಿ ಕಟ್ಟಡ ಉಪನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ವಿನೂತನ ನೀತಿಯೊಂದನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

 

 ಇನ್ನು ಮುಂದೆ ನೆಲಮಹಡಿಯೂ ಸೇರಿದಂತೆ 4 ಅಂತಸ್ತಿನ ಅಥವಾ ಅದಕ್ಕೂ ಹೆಚ್ಚಿನ ಅಂತಸ್ತಿನ ಕಟ್ಟಡ ನಿರ್ಮಿಸುವಾಗ ಮಾಲೀಕರು ನೆಲ ಅಂತಸ್ತನ್ನು ಪಾಲಿಕೆಗೆ ಕ್ರಯಕ್ಕೆ ನೀಡುವ ಕರಾರು ಮಾಡಿಕೊಳ್ಳಬೇಕು. ಕಟ್ಟಡ ನಿರ್ಮಾಣ ಬಳಿಕ ಕಟ್ಟಡ ನಿಯಮ ಬದ್ಧವಾಗಿದೆಯೇ ಎಂಬುದನ್ನು ಪಾಲಿಕೆ ಪರಿಶೀಲಿಸಲಿದೆ. ಕ್ರಮ ಬದ್ಧವಾಗಿದ್ದರೆ, ಕರಾರು ರದ್ದುಪಡಿಸಲಾ ಗುತ್ತದೆ. ಇಲ್ಲದ್ದಿದರೆ, ಬಿಬಿಎಂಪಿಯೇ ನೆಲ ಮಹಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ.

click me!