ತೆಲಂಗಾಣ: ಬಸ್ ಕಂದಕಕ್ಕೆ ಉರುಳಿ 54 ಭಕ್ತರ ಸಾವು

By Web DeskFirst Published Sep 11, 2018, 4:13 PM IST
Highlights

ಬಸ್ಸಿನಲ್ಲಿ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದು ಅರಣ್ಯ ಪ್ರದೇಶದ ತಿರುವಿನಲ್ಲಿ ಚಲಿಸುವಾಗ ಅಪಘಾತವುಂಟಾಗಿದೆ. ಅಗ್ನಿ ಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹೈದರಾಬಾದ್[ಸೆ.11]: ತೆಲಂಗಾಣ ಸಾರಿಗೆ ಸಂಸ್ಥೆ ಬಸ್  ಕಂದಕಕ್ಕೆ ಉರುಳಿ 54 ಭಕ್ತರು ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡ ಘಟನೆ ಜಗ್ತಿಯಾಳ್ ಜಿಲ್ಲೆಯ ಕೋಂಡಾಗಟ್ಟು ಬಳಿ ನಡೆದಿದೆ.

ಬಸ್ಸಿನಲ್ಲಿ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದು ಅರಣ್ಯ ಪ್ರದೇಶದ ತಿರುವಿನಲ್ಲಿ ಚಲಿಸುವಾಗ ಅಪಘಾತವುಂಟಾಗಿದೆ. ಅಗ್ನಿ ಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರವನ್ನು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಮೃತರೆಲ್ಲರೂ ಕೋಂಡಾಗಟ್ಟು ಬೆಟ್ಟದಲ್ಲಿರುವ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. 

"

click me!