ಹಾಸಿಗೆ, ದಿಂಬು, ಹೊದಿಕೆ, ತಿಂಡಿ-ತಿನಿಸು ಮುಂತಾದ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು ನೀವು ಕೊಡುವ ಪ್ರತಿ ವಸ್ತುಗಳನ್ನು ಸಂತ್ರಸ್ತರ ಕೈ ಸೇರಲು ಸುವರ್ಣ ನ್ಯೂಸ್ ಸಹಾಯ ಮಾಡಲಿದೆ.
ಬೆಂಗಳೂರು[ಆ.17]: ಜಲಪ್ರಳಯಕ್ಕೆ ಕಾಫಿ ನಾಡು ಕೊಡಗು ತತ್ತರಿಸುತ್ತಿದ್ದು ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗಲು ಸುವರ್ಣ ನ್ಯೂಸ್ .ಕಾಂ ಹಾಗೂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ಸದಾ ಸಿದ್ಧವಾಗಿದೆ.
ತೊಂದರೆಯಲ್ಲಿರುವ ಜನರಿಗೆ ನಮ್ಮ ಜೊತೆ ನೀವು ಕೈ ಜೋಡಿಸಲು ಸಂಸ್ಥೆ ವೇದಿಕೆ ಕಲ್ಪಿಸಿಕೊಡುತ್ತಿದೆ. ಹಾಸಿಗೆ, ದಿಂಬು, ಹೊದಿಕೆ, ತಿಂಡಿ-ತಿನಿಸು ಮುಂತಾದ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು ನೀವು ಕೊಡುವ ಪ್ರತಿ ವಸ್ತುಗಳನ್ನು ಸಂತ್ರಸ್ತರ ಕೈ ಸೇರಲು ಸುವರ್ಣ ನ್ಯೂಸ್ ಸಹಾಯ ಮಾಡಲಿದೆ. ಸಂಸ್ಥೆಯ ಜೊತೆ ಅಭಯ ಹಸ್ತ ಫೌಂಡೇಶನ್ ಸಹ ಕೈ ಜೊಡಿಸಿದೆ.
ಬೆಂಗಳೂರಿನ ಶಿವಾನಂದ ಸರ್ಕಲ್ ಸಮೀಪವಿರುವ ಸುವರ್ಣ ನ್ಯೂಸ್ .ಕಾಂ ಹಾಗೂ ಸೋದರ ಸಂಸ್ಥೆ ಸುವರ್ಣ ನ್ಯೂಸ್'ಗೆ ನಾಳೆ ಮಧ್ಯಾಹ್ನ12 ಗಂಟೆಯೊಳಗೆ ನೀವು ನೀಡಬಹುದಾದ ವಸ್ತುಗಳನ್ನು ತಲುಪಿಸಿ. ನೀವು ನೀಡಿರುವ ವಸ್ತುಗಳು ನಾಳೆ ಮಧ್ಯಾಹ್ನ 1 ಗಂಟೆಯ ನಂತರ ಕೊಡಗಿಗೆ ತಲುಪಿಸಲಾಗುತ್ತದೆ.
ನಿಮ್ಮ ವಸ್ತುಗಳನ್ನು ತಲುಪಿಸಬಹುದಾದ ವಿಳಾಸ
ನಂ.36, ಕ್ರೆಸೆಂಟ್ ರಸ್ತೆ, ಮಲ್ಲಿಗೆ ಆಸ್ಪತ್ರೆ ಎದುರು, ಶಿವಾನಂದ ಸರ್ಕಲ್, ಬೆಂಗಳೂರು, ಕರ್ನಾಟಕ - 560001
ನೆರವನ್ನು ತಲುಪಿಸುವವರು ಕರೆ ಮಾಡಬೇಕಾದ ಸಂಖ್ಯೆ : 080 - 33101426
ಕ್ಲಿಕ್ಕಿಸಿ : ಕೊಡಗು ಪ್ರವಾಹ: ಸಂಕಷ್ಟದಲ್ಲಿರುವವರಿಗೆ ಹೆಲ್ಪ್‌ಲೈನ್