'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ನಿಜ ಜೀವನದಲ್ಲೂ ಕಿರಿಕ್ ನೀಡಿದ್ದಾರೆ.
ಬೆಂಗಳೂರು(ಮೇ.08): ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ನಿಜ ಜೀವನದಲ್ಲೂ ಕಿರಿಕ್ ನೀಡಿದ್ದಾರೆ. ಕನ್ನಡ ಚಿತ್ರಗಳಾದ ಕಾಲೇಜ್ ಕುಮಾರ್ ಹಾಗೂ ವಾಸು ಚಿತ್ರಗಳಿಗೆ ಕೈಕೊಟ್ಟು ತಮಿಳಿನಲ್ಲಿ ನಟ ಪ್ರಭುದೇವ ಅವರ ಜೊತೆ ನಟಿಸಲು ಅವಕಾಶ ಬಂದ ಹಿನ್ನಲೆಯಲ್ಲಿ ಇವೆರೆಡು ಚಿತ್ರಗಳಿಗೆ ಕೈಕೊಟ್ಟು ತಮಿಳುನಾಡಿಗೆ ಹಾರಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಲ್ಲದೆ ಆಂಗ್ಲ ಮನರಂಜನಾ ವಾಹಿನಿಯ ರಿಯಾಲಿಟಿ ಶೋ ಎಂಟಿವಿ ರೋಡಿಸ್'ನಲ್ಲೂ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು.