ಹೆಣ್ಣು ಮಗುವಿನ ಜನನವನ್ನೇ ತಡೆಯುವುದಾಗಿ ಸುಪ್ರೀಂಕೋರ್ಟ್‌ಗೇ ಬೆದರಿಕೆ

By Suvarna Web DeskFirst Published Feb 10, 2018, 11:05 AM IST
Highlights

ವಯಸ್ಕರ ವಿವಾಹದಲ್ಲಿ ಖಾಪ್‌ ಪಂಚಾಯತ್‌ ಸೇರಿದಂತೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಮಧ್ಯಪ್ರವೇಶ ಮಾಡುವಂತಿಲ್ಲ ಎಂಬ ಸುಪ್ರೀಂಕೋರ್ಟ್‌ನ ಇತ್ತೀಚಿನ ಕಟು ಎಚ್ಚರಿಕೆಗೆ ತಿರುಗೇಟು ನೀಡಿರುವ ಖಾಪ್‌ ಮುಖಂಡರೊಬ್ಬರು, ನಮ್ಮ ಸಂಪ್ರದಾಯದಲ್ಲಿ ಮಧ್ಯಪ್ರವೇಶಕ್ಕೆ ಯತ್ನಿಸಿದರೆ ಹೆಣ್ಣು ಮಕ್ಕಳು ಜನಿಸುವುದನ್ನೇ ತಡೆಯುವ ಮೂಲಕ ಸಮಾಜವನ್ನು ಅಸ್ಥಿರಗೊಳಿಸುವುದಾಗಿ ಖಾಪ್‌ ಮುಖಂಡರು ಬೆದರಿಕೆ ಹಾಕಿದ್ದಾರೆ.

ಮೇರಠ್‌: ವಯಸ್ಕರ ವಿವಾಹದಲ್ಲಿ ಖಾಪ್‌ ಪಂಚಾಯತ್‌ ಸೇರಿದಂತೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಮಧ್ಯಪ್ರವೇಶ ಮಾಡುವಂತಿಲ್ಲ ಎಂಬ ಸುಪ್ರೀಂಕೋರ್ಟ್‌ನ ಇತ್ತೀಚಿನ ಕಟು ಎಚ್ಚರಿಕೆಗೆ ತಿರುಗೇಟು ನೀಡಿರುವ ಖಾಪ್‌ ಮುಖಂಡರೊಬ್ಬರು, ನಮ್ಮ ಸಂಪ್ರದಾಯದಲ್ಲಿ ಮಧ್ಯಪ್ರವೇಶಕ್ಕೆ ಯತ್ನಿಸಿದರೆ ಹೆಣ್ಣು ಮಕ್ಕಳು ಜನಿಸುವುದನ್ನೇ ತಡೆಯುವ ಮೂಲಕ ಸಮಾಜವನ್ನು ಅಸ್ಥಿರಗೊಳಿಸುವುದಾಗಿ ಖಾಪ್‌ ಮುಖಂಡರು ಬೆದರಿಕೆ ಹಾಕಿದ್ದಾರೆ.

‘ನಾವು ಸುಪ್ರೀಂಕೋರ್ಟ್‌ ಅನ್ನು ಗೌರವಿಸುತ್ತೇವೆ. ಆದರೆ, ತಲೆತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವ ನಮ್ಮ ಸಂಪ್ರದಾಯದಲ್ಲಿ ಮಧ್ಯಪ್ರವೇಶಿಸಿದರೆ ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಒಂದು ವೇಳೆ ಸುಪ್ರೀಂಕೋರ್ಟ್‌ ಈ ರೀತಿಯ ಆದೇಶ ಹೊರಡಿಸಿದರೆ, ನಾವು ಹೆಣ್ಣು ಮಗುವಿನ ಜನನವನ್ನು ತಡೆಹಿಡಿಯುತ್ತೇವೆ. ಹೆಣ್ಣು ಮಕ್ಕಳು ತಮ್ಮ ನಿರ್ಧಾರ ಕೈಗೊಳ್ಳುವ ಮಟ್ಟಿಗೆ ವಿದ್ಯಾಭ್ಯಾಸ ಮಾಡಲು ಬಿಡುವುದಿಲ್ಲ. ಸಮಾಜದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾದರೆ ಏನಾಗಲಿದೆ ಎನ್ನುವುದನ್ನು ಊಹಿಸಿಕೊಳ್ಳಿ’ ಎಂದು ಬಲ್ಯಾನ್‌ನ ಖಾಪ್‌ ಮುಖಂಡ ನರೇಶ್‌ ಟಿಕಾಯಿತ್‌ ಹೇಳಿದ್ದಾರೆ.

ಸ್ವಗೋತ್ರದಲ್ಲಿ ಮದುವೆಯಾಗಿದ್ದಕ್ಕೆ ಉತ್ತರ ಭಾರತದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಪ್‌ ಪಂಚಾಯತ್‌ಗಳನ್ನು ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌, ಖಾಪ್‌ ಪಂಚಾಯುತ್‌ಗೆ ಎಚ್ಚರಿಕೆ ನೀಡಿತ್ತು.

click me!