ವಿಟಮಿನ್ ಎ, ಡಿ ಹೊಂದಿರುವ ನಂದಿನ ಹಾಲು ಮಾರುಕಟ್ಟೆಗೆ

Published : Jul 30, 2019, 01:58 PM IST
ವಿಟಮಿನ್ ಎ, ಡಿ ಹೊಂದಿರುವ ನಂದಿನ ಹಾಲು ಮಾರುಕಟ್ಟೆಗೆ

ಸಾರಾಂಶ

ವಿಟಮಿನ್ ಎ ಮತ್ತು ವಿಟಮಿನ್ ಡಿ ಒಳಗೊಂಡಂತಹ ನಂದಿನಿ ಹಾಲು ಇನ್ನು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ವಿಟಮಿನ್ ಸಾರವರ್ಧನೆಯ ಜೊತೆ ಸಿರಿಧಾನ್ಯ ಲಡ್ಡು, ಹಾಗೂ ಸಿರಿಧಾನ್ಯ ಶಕ್ತಿ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು(ಜು.30): ವಿಟಮಿನ್ ಎ ಮತ್ತು ವಿಟಮಿನ್ ಡಿ ಒಳಗೊಂಡಂತಹ ನಂದಿನಿ ಹಾಲು ಇನ್ನು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ನಂದಿನ ಹಾಲಿನಲ್ಲಿ ವಿಟಮಿನ್ ಎ ಹಾಗೂ ಡಿ ಇರಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.  ಕೆಎಂಎಫ್, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ಟಾಟಾ ಟ್ರಸ್ಟ್ ಸಹಯೋಗದಲ್ಲಿ ವಿಟಮಿನ್ ಕೂಡಿದ ಹಾಲು ಮಾರುಕಟ್ಟೆಗೆ ಬರುತ್ತಿದೆ.

ಹಾಲಿನ ದರದಲ್ಲಿ ವ್ಯತ್ಯಾಸವಿಲ್ಲ:

ಜಯದೇವ ಅಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಅವರು ವಿಟಮಿನ್ ಒಳಗೊಂಡ ನಂದಿನಿ ಹಾಲನ್ನು ಬಿಡುಗಡೆ ಮಾಡಿದ್ದಾರೆ. ಈಗಿನ ನಂದಿನಿ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ವಿಟಮಿನ್ ಯುಕ್ತ ಹಾಲು ಮಾರುಕಟ್ಟೆಗೆ ಬಿಡಲಾಗುತ್ತಿದ್ದು, ವಿಟಮಿನ್ ಸಾರವರ್ಧನೆಗೆ ಒಂದು ಪ್ಯಾಕೆಟ್‌ಗೆ‌ ಮೂರರಿಂದ ನಾಲ್ಕು ಪೈಸೆ ಹೆಚ್ಚುವರಿ ಹೊರೆಯಾಗತ್ತದೆ.

ಕಣ್ಣಿನ ದೃಷ್ಟಿ ಸುಧಾರಿಸುತ್ತದೆ:

ಆದರೆ ಜನರಿಗೆ ಹೊರೆಯಾಗದಂತೆ ಮೊದಲಿನ ದರದಲ್ಲೇ ವಿಟಮಿನ್ ಸಾರವರ್ಧನೆಯ ಹಾಲು ಲಭ್ಯವಾಗಲಿದೆ. ವಿಟಮಿನ್ ಎ ಕೊರತೆ ಇಂದ ಇರುಳುಗಣ್ಣು ಉಂಟಾಗುತ್ತದೆ, ಆದರೆ ವಿಟಮಿನ್ ಎ ಇಂದ ಕೂಡಿದ‌ ನಂದಿನಿ ಹಾಲು ಸೇವನೆ ಇಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

ನಂದಿನಿಯಲ್ಲಿನ್ನು ಸಿಗುತ್ತೆ ದೇಸಿ ತಳಿ ಹಾಲು : ದರವೆಷ್ಟು..?

ಸಿರಿಧಾನ್ಯ ಲಡ್ಡು ಸೇರಿ ಹಲವು ಉತ್ಪನ್ನ ಮಾರುಕಟ್ಟೆಗೆ:

ವಿಟಮಿನ್ ಡಿ ಇಂದ ಕೂಡಿದ ನಂದಿನಿ‌ ಹಾಲು ಸೇವನೆ ಇಂದ ಮೂಳೆ ಹಾಗೂ ಕೀಲುಗಳ ಸಮಸ್ಯೆ ‌ಸುಧಾರಿಸುತ್ತದೆ. ವಿಟಮಿನ್ ಸಾರವರ್ಧನೆಯ ಜೊತೆ ಸಿರಿಧಾನ್ಯ ಲಡ್ಡು, ಹಾಗೂ ಸಿರಿಧಾನ್ಯ ಶಕ್ತಿ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ