ಪಠ್ಯದಲ್ಲಿನ್ನು ಲಿವ್‌ಇನ್‌, ಸಲಿಂಗ, ಸಿಂಗಲ್‌ಪೇರೆಂಟ್‌ಗೂ ಕುಟುಂಬ ವ್ಯವಸ್ಥೆ ಸ್ಥಾನ!

By Web DeskFirst Published Jul 30, 2019, 1:58 PM IST
Highlights

ಪಠ್ಯದಲ್ಲಿನ್ನು ಲಿವ್‌ಇನ್‌, ಸಲಿಂಗ, ಸಿಂಗಲ್‌ಪೇರೆಂಟ್‌ಗೂ ಕುಟುಂಬ ವ್ಯವಸ್ಥೆ ಸ್ಥಾನ!| ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಈ ಪಟ್ಟಿಗೆ ಇನ್ನಷ್ಟುಕೌಟುಂಬಿಕ ಪದ್ಧತಿಗಳನ್ನು ಸೇರಿಸಲು ನಿರ್ಧಾರ

ಮುಂಬೈ[ಜು.30]: ಕುಟುಂಬ ವ್ಯವಸ್ಥೆ ಬಗ್ಗೆ ಇರುವ ಪಾಠಗಳಲ್ಲಿ ಏಕಪೋಷಕ ಕುಟುಂಬ, ಅವಿಭಕ್ತ ಕುಟುಂಬ ಎಂಬ ಮಾಹಿತಿ ಇರುವುದು ಸಹಜ. ಅದರೆ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಈ ಪಟ್ಟಿಗೆ ಇನ್ನಷ್ಟುಕೌಟುಂಬಿಕ ಪದ್ಧತಿಗಳನ್ನು ಸೇರಿಸಲು ನಿರ್ಧರಿಸಿದೆ.

ಅದರನ್ವಯ 11ನೇ ತರಗತಿಯ ಪಠ್ಯಪುಸ್ತಕದಲ್ಲಿ ಲಿವ್‌ಇನ್‌, ಸಿಂಗಲ್‌ ಪೇರೆಂಟ್‌, ಸಲಿಂಗಿಗಳನ್ನೂ ಕುಟುಂಬ ವ್ಯವಸ್ಥೇ ಭಾಗ ಎಂದು ಗುರುತಿಸಲಾಗುವುದು. ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿನ ವಿಷಯವನ್ನು ಮಾತ್ರ ಕಲಿಯದೇ, ಪ್ರಸ್ತುತ ಸಮಾಜದಲ್ಲಿನ ವ್ಯವಸ್ಥೆಯ ಬಗ್ಗೆಯೂ ಅರಿವು ಹೊಂದಬೇಕು ಎಂಬ ಕಾರಣಕ್ಕಾಗಿ ಈ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ ಎಂದು ಪಠ್ಯಪುಸ್ತಕ ರಚನೆ ಸಮಿತಿ ಅಧ್ಯಕ್ಷರಾದ ವೈಶಾಲಿ ದಿವಾಕರ್‌ ಅವರು ಸಮರ್ಥಿಸಿಕೊಂಡಿದ್ದಾರೆ.

click me!