ನಿಫಾಹ್ ವೈರಸ್ ಗೆ ನರ್ಸ್ ಬಲಿ: ಕಂಬನಿ ಮಿಡಿದ ಕೇರಳ

First Published May 22, 2018, 4:57 PM IST
Highlights

ಕೇರಳದಲ್ಲಿ ನಿಫಾಹ್ ವೈರಾಣು ಸೋಂಕಿಗೆ ತುತ್ತಾಗಿ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಕೊಯಿಕ್ಕೋಡ್ ನ ಪೆರೆಮ್ರಾ ತಾಲೂಕು ಆಸ್ಪತ್ರೆಯ ನರ್ಸ್ ಲಿನಿ ಎಂಬುವರು ಮೃತಪಟ್ಟಿದ್ದಾರೆ. ನಿಫಾಹ್ ಸೋಂಕು ತಗುಲಿದ್ದ ರೋಗಿಯೋರ್ವನ ಶುಶ್ರೂಷೆಯಲ್ಲಿ ನಿರತವಾಗಿದ್ದಾಗ ಲಿನಿ ಅವರಿಗೂ ಈ ಮಾರಕ ಸೋಂಕು ತಗುಲಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಮಧ್ಯೆ ಲಿನಿ ಅವರ ಕರ್ತವ್ಯ ಪ್ರಜ್ಞೆಯನ್ನು ಕೊಂಡಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರಿಗೆ ರಾಜ್ಯ ಸರ್ಕಾರ ಗೌರವ ಸೂಚಿಸಲಿದೆ ಎಂದು ಹೇಳಿದ್ದಾರೆ. ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸದಾ ಸ್ಮರಿಸುತ್ತದೆ  ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ವೈರಸ್ ಹರಡುವ ಭೀತಿಯಿಂಧ ಲಿನಿ ಅವರ ಅಂತ್ಯಕ್ರೀಯೆಯನ್ನು ಆಸ್ಪತ್ರೆ ಸಿಬ್ಬಂದಿ ತರಾತುರಿಯಲ್ಲಿ ಮಾಡಿದ್ದಾರೆ. ಲಿನಿ ಅವರ ಮಕ್ಕಳು ಮತ್ತು ಆಕೆಯ ತಂದೆ ಬರುವಿಕೆಗೆ ಕಾಯದೇ ಕೇವಲ ಪತಿ ಉಪಸ್ಥಿತಿಯಲ್ಲಿ ಅಂತ್ಯಕ್ರೀಯೆ ನಡೆಸಲಾಗಿದೆ.

ಸಾವಿಗೂ ಮುನ್ನ ಲಿನಿ ತಮ್ಮ ಪತಿಗೆ ಪತ್ರ ಬರೆದಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದಾರೆ. ಲಿನಿ ಅವರ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಕೂಡ ಕಂಬನಿ ಮಿಡಿದಿದ್ದು, ಸಾವಿಗೂ ಅಂಜದೆ ತಮ್ಮ ಕರ್ತವ್ಯ ನಿರ್ವಹಿಸಿದ ಲಿನಿ ನಮಗೆ ಸದಾ ಸ್ಪೂರ್ತಿ ಎಂದು ಹೇಳಿದ್ದಾರೆ.

click me!