
ಬೆಂಗಳೂರು (ಮೇ. 22 )ಕಿಂಗ್ಸ್ ಇಲೆವೆನ್ ಪಂಜಾಬ್ ಒಡತಿ ಪ್ರೀತಿ ಜಿಂಟಾ, ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅವರ ಕುರಿತ ಆಡಿದ ಮಾತು ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಟ್ವಿಟರ್ ನಲ್ಲಿ ಅಭಿಮಾನಿಯೋರ್ವ ವಿರಾಟ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ವಿರಾಟ್ ಇಸ್ ಜಸ್ಟ್ ಆಸಮ್’ ಎನ್ನುವ ಮೂಲಕ ಗಮನ ಸೆಳೆದಿದ್ದಾರೆ. ವಿರಾಟ್ ಓರ್ವ ಪ್ರತಿಭಾವಂತ ಕ್ರಿಕೆಟಿಗ ಎಂದಿರುವ ಪ್ರೀತಿ, ಅವರ ಆಟ ನೋಡುವುದೇ ಚೆಂದ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಪ್ರಸಕ್ತ ಐಪಿಎಲ್ ನಲ್ಲಿ ಪಂಜಾಬ್ ತಂಡದ ಪ್ರದರ್ಶನದ ಕುರಿತು ಬೇಸರ ವ್ಯಕ್ತಪಡಿಸಿರುವ ಪ್ರೀತಿ, ಆರಂಭದಲ್ಲಿ ಸತತ ಗೆಲುವಿನ ಮೂಲಕ ಗಮನ ಸೆಳೆದಿದ್ದ ತಂಡ, ಪ್ಲೇ ಆಫ್ ಗೆ ಅರ್ಹತೆ ಪಡೆಯದಿರುವುದಕ್ಕೆ ಖೇದವಿದೆ ಎಂದಿದ್ದಾರೆ. ಆದರೆ ಮುಂದಿನ ಐಪಿಎಲ್ ಟೂರ್ನಿಯಲ್ಲಿ ತಂಡ ಉತ್ತಮವಾಗಿ ಪ್ರದರ್ಶನ ತೋರಲಿದೆ ಎಂದು ಅವಾರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ಲೇ ಆಫ್ ಹಂತಕ್ಕೆ ಏರದ ಮುಂಬೈ ಇಂಡಿಯನ್ಸ್ ತಂಡದ ಕುರಿತು ಪ್ರೀತಿ ಆಡಿರುವ ಮಾತುಗಳು ಹಲವರನ್ನು ಕೆರಳಿಸಿದೆ. ದೆಹಲಿ ತಂಡದ ವಿರುದ್ದ ಮುಂಬೈ ತಂಡ ಸೋತಿದ್ದಕ್ಕೆ ಪ್ರೀತಿ ಹರ್ಷ ವ್ಯಕ್ತಪಡಿಸಿದ್ದರು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಮುಂಬೈ ತಂಡ ಸೋತ ಪರಿಣಾಮ ಕಿಂಗ್ಸ್ ತಂಡಕ್ಕೆ ಮತ್ತೊಂದು ಅವಕಾಶ ಸಿಕ್ಕಿದ್ದಕ್ಕೆ ಹಾಗೆ ಹೇಳಿದ್ದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.