ಇದಪ್ಪಾ ಸುದ್ದಿ.. ರಾಜ್ಯಪಾಲರೇ ದಂಡ ಪಾವತಿಸಿದರು!

Published : Jul 05, 2018, 10:12 PM ISTUpdated : Jul 05, 2018, 10:14 PM IST
ಇದಪ್ಪಾ ಸುದ್ದಿ.. ರಾಜ್ಯಪಾಲರೇ ದಂಡ ಪಾವತಿಸಿದರು!

ಸಾರಾಂಶ

ಸಂಚಾರಿ ನಿಯಮ ಉಲ್ಲಂಘಿಸುವುದಲ್ಲದೇ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿಯುವ ಹಲವಾರು ಪ್ರಕರಣ ಪ್ರತಿದಿನ ಕಾಣುತ್ತೇವೆ. ಆದರೆ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ನಿಯಮ ಪರಿಪಾಲನೆ ತಪ್ಪಿದ್ದಕ್ಕೆ ದಂಡ ಪಾವತಿ ಮಾಡಿದ್ದಾರೆ.  

ತಿರುವನಂತಪುರ[ಜು.5]  ತಮ್ಮ ಅಧಿಕೃತ ವಾಹನ ವೇಗ ಮಿತಿ  ಉಲ್ಲಂಘಿಸಿದ್ದಕ್ಕೆ ಕೇರಳ ರಾಜ್ಯಪಾಲರು 400 ರೂ. ದಂಡ ಪಾವತಿಸಿದ್ದಾರೆ. ಕೇರಳ ರಾಜ್ಯಪಾಲ ಪಿ ಸದಾಶಿವಂ ದಂಡ ಪಾವತಿಸಿದ್ದು ಮಾದರಿ ವರ್ತನೆ ತೋರಿದ್ದಾರೆ.

ಏಪ್ರಿಲ್‌ 7ರಂದು ರಾಜ್ಯಪಾಲರ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘನೆ ಮಾಡಿತ್ತು. ಆ ಕಾರಣಕ್ಕಾಗಿ ದಂಡ ಹೇರಲಾಗಿತ್ತು. ಈ ದಂಡ ಮೊತ್ತವನ್ನು ಪಾವತಿಸುವಂತೆ ರಾಜ್ಯಪಾಲರು ತನ್ನ ಕಾರ್ಯಾಲಯದ ಅಧಿಕಾರಿಗೆ ಸೂಚಿಸಿದ್ದರು.  

ನ್ಯಾಯಮೂರ್ತಿಯಾಗಿದ್ದ ಸದಾಶಿವಂ ಅವರು ಟ್ರಾಫಿಕ್‌ ನಿಯಮ ಉಲ್ಲಂಘನೆ  ವಾಹನದಲ್ಲಿ ಇರಲಿಲ್ಲ. ಕೇವಲ ಪ್ರಕರಣ ದಾಖಲಾಗಿದ್ದು ಸಂದೇಶ ರಾಜ್ಯಪಾಲರನ್ನು ತಲುಪಿತ್ತು.  ಹಾಗಿದ್ದರೂ ದಂಡ ಪಾವತಿಯ ಆದೇಶವನ್ನು ಪಾಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ