ಪೆನ್ ಖರೀದಿಸುವುದಕ್ಕೂ ತನಗೆ ಅಧಿಕಾರವಿಲ್ಲ ಎಂದ ಕೇಜ್ರಿವಾಲ್

Published : Sep 14, 2016, 09:57 AM ISTUpdated : Apr 11, 2018, 12:42 PM IST
ಪೆನ್ ಖರೀದಿಸುವುದಕ್ಕೂ ತನಗೆ ಅಧಿಕಾರವಿಲ್ಲ ಎಂದ ಕೇಜ್ರಿವಾಲ್

ಸಾರಾಂಶ

ನನಗೆ ಪೆನ್ ಖರೀದಿಸುವುದಕ್ಕೂ ಅಧಿಕಾವಿಲ್ಲ, ಜನರು ಏನೇ ಕೇಳುವುದಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೆಫ್ಟಿನೆಂಟ್ ಗೌರ್ನರ್ ನ್ನು ಪ್ರಶ್ನಿಸಲಿ ಎಂದು ಟ್ವೀಟ್​ ಮಾಡಿದ್ದರು.

ದೆಹಲಿ (ಸೆ.14): ದೆಹಲಿಯಲ್ಲಿ ಡೆಂಘೀ ಹಾಗೂ ಚಿಕನ್ ಗುನ್ಯಾ ತಾಂಡವವಾಡ್ತಿದೆ. ಈಗಾಗಲೇ 4 ಮಂದಿ ಸಾಂಕ್ರಾಮಿಕ ಕಾಯಿಲೆಗೆ ಸಾವನ್ನಪ್ಪಿದ್ದಾರೆ. ಆದ್ರೆ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಿಎಂ ಕೇಜ್ರಿವಾಲ್​ ಪ್ರಧಾನಿಯನ್ನು ಕೇಳಿ ಎಂದಿದ್ದಾರೆ.

ನನಗೆ ಪೆನ್ ಖರೀದಿಸುವುದಕ್ಕೂ ಅಧಿಕಾವಿಲ್ಲ, ಜನರು ಏನೇ ಕೇಳುವುದಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೆಫ್ಟಿನೆಂಟ್ ಗೌರ್ನರ್ ನ್ನು ಪ್ರಶ್ನಿಸಲಿ ಎಂದು ಟ್ವೀಟ್​ ಮಾಡಿದ್ದರು. ದೆಹಲಿ ಸಿಎಂ ಆಗಲಿ ಸಚಿವರಾಗಲಿ ಯಾವುದೇ ಆಪ್​ ಸಚಿವರೂ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಡೆಂಘೀ, ಚಿಕನ್ ಗುನ್ಯಾ ನಿಯಂತ್ರಿಸುವುದರಲ್ಲಿ ನಿಮ್ಮ ಜವಾಬ್ದಾರಿ ಇಲ್ಲವೆಂದಾದರೆ ರಾಜೀನಾಮೆ ನೀಡಿ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ದೆಹಲಿ ಸಿಎಂ ಹಾಗೂ ಅವರ ಸಚಿವರು ಕೇವಲ ಕುರುಕಲು ತಿಂಡಿಗಳಿಗಾಗಿ 546 ಕೋಟಿ ರೂ  ಖರ್ಚು ಮಾಡುತ್ತಾರೆ. ಆದರೆ ಪೆನ್ ಖರೀದಿ ಮಾಡುವುದಕ್ಕೂ ತಮಗೆ ಅಧಿಕಾರ ಇಲ್ಲ ಎಂದು ಹೇಳುತ್ತಾರೆ ಎಂದು ಕುಟುಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Davanagere By-election 2026: ದಾವಣಗೆರೇಲಿ ಪಕ್ಷ ವಿರೋಧಿ ನಡೆಗೆ ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ತಲೆದಂಡ,
Delhi Karnataka Sangha Election: ದೆಹಲಿ ಕರ್ನಾಟಕ ಸಂಘಕ್ಕೆ ಇಂದು ಚುನಾವಣೆ, ಚುನಾವಣೆಗೆ ಮೊದಲೇ ಕುಸ್ತಿ, ಏನಿದು ಜೂಮ್ ಮೀಟಿಂಗ್ ವಿವಾದ?