ನಟ ದರ್ಶನ್ ಮನೆ ಒತ್ತುವರಿ ವಿಚಾರ ದೊಡ್ಡ ಸಂಗತಿಯೇ ಅಲ್ಲವಂತೆ! ಮೇಯರ್ ಮಂಜುನಾಥ್ ರೆಡ್ಡಿ ಉಡಾಫೆಯ ಉತ್ತರ!

Published : Sep 14, 2016, 09:56 AM ISTUpdated : Apr 11, 2018, 12:46 PM IST
ನಟ ದರ್ಶನ್ ಮನೆ ಒತ್ತುವರಿ ವಿಚಾರ ದೊಡ್ಡ ಸಂಗತಿಯೇ ಅಲ್ಲವಂತೆ! ಮೇಯರ್ ಮಂಜುನಾಥ್ ರೆಡ್ಡಿ ಉಡಾಫೆಯ ಉತ್ತರ!

ಸಾರಾಂಶ

ಬೆಂಗಳೂರು(ಸೆ.14): ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ನಿವಾಸ ರಾಜಕಾಲುವೆಗೆ ಒತ್ತುವರಿಯಾಗಿದೇಯಾ? ಎಂಬ ಪ್ರಶ್ನಗೆ ಬಿಬಿಎಂಪಿಯ ಮೇಯರ್​ ಮಂಜುನಾಥ್ ರೆಡ್ಡಿ ಉಡಾಫೆಯ ಉತ್ತರ ನೀಡಿದ್ದಾರೆ. 

ಸ್ಯಾಂಡಲ್​ವುಡ್​ನ ಬಾಕ್ಸ್​ ಆಫೀಸ್​ ಸುಲ್ತಾನ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪರ ಮನೆ ರಾಜಕಾಲುವೆ ಒತ್ತುವರಿಯಾಗಿದೆ ಅದನ್ನು ಕೆಡವಲು ಯಾಕೆ ನಿಧಾನವಾಗುತ್ತಿದೆ ಎಂದ ಪ್ರಶ್ನೆಗೆ ಮೇಯರ್​ ಮಂಜುನಾಥ್ ರೆಡ್ಡಿ, ದರ್ಶನ್ ಮನೆ ಒತ್ತುವರಿ ವಿಚಾರ ದೊಡ್ಡ ಸಂಗತಿಯೇ ಅಲ್ಲ ಎಂದಿದ್ದಾರೆ. 

ಸುಮ್ಮನೆ ಮಾಧ್ಯಮದವರು ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿರುವಿರಿ ಎನ್ನುವ ಮೂಲಕ ಮಾಧ್ಯಮದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಅದು 20 ಅಡಿ ಆಳತೆಯ ಜಾಗ ಅದಕ್ಕೆ ಅಸ್ಟೋಂದು ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ. 

ಬಡವರ ಮನೆ ಒಡೆಯಬೇಕಾದರೆ ಸಣ್ಣದು ದೊಡ್ಡದು ನೋಡದ ಮೇಯರ್ ಸಾಹೇಬರು ಈಗ ದೊಡ್ಡವರ ಮನೆ ಕಂಡಾಗ ಮಾತ್ರ 20 ಅಡಿ ಅಳತೆ ಜಾಗ ಚಿಕ್ಕದು ಎನ್ನುತ್ತಿದ್ದಾರೆ. ದೊಡ್ಡವರ ಮನೆ ಒಡೆಯ ಬೇಕಾದ ಸಂದರ್ಭದಲ್ಲಿ ಮಾತ್ರ ದಾಖಲೆಗಳು ಲಭ್ಯವಾಗಿಲ್ಲ ಎನ್ನುವ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ.
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುವ ನಿಧಿ ಯೋಜನೆ: 3.62 ಲಕ್ಷ ನಿರುದ್ಯೋಗಿಗಳ ನೋಂದಣಿ, 2,326 ಮಂದಿಗೆ ಸಿಕ್ಕಿದೆ ಕೆಲಸ!
ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್