ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಾದ ಆಕಾಂಕ್ಷಿಗಳು : ದಿನೇಶ್ ಮೇಲೆ ಪರಂಗೆ ಮುನಿಸೆ ?

First Published Jun 14, 2018, 6:19 PM IST
Highlights
  • ಹರಿಪ್ರಸಾದ್ ಹಾಗೂ  ಕೆ.ಹೆಚ್. ಮುನಿಯಪ್ಪ ಅವರ ಮೇಲೆ ಪರಂಗೆ ಒಳವು
  • ಲೋಕಸಬಾ ಚುನಾವಣಾ ದೃಷ್ಟಿಯಿಂದ ಅಹಿಂದಕ್ಕೆ ಪಾತಿನಿದ್ಯ ನೀಡಲು ಪ್ರಸ್ತಾವ 

ಬೆಂಗಳೂರು[ಜೂ.14]: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ರಾಜ್ಯದ ನಾಯಕರು ತಮ್ಮ ಪರ ಒಲವಿರುವ  ಮತ್ತಷ್ಟು ನಾಯಕರ ಹೆಸರನ್ನು ಹೈಕಮಾಂಡ್'ನಲ್ಲಿ ತೇಲಿಬಿಟ್ಟಿದ್ದಾರೆ. 

ಹೈಕಮಾಂಡ್  ದಿನೇಶ್ ಗುಂಡೂರಾವ್ ಅವರ ಬಗ್ಗೆ ಹೆಚ್ಚು ಒಲವು ವ್ಯಕ್ತವಾಗಿದ್ದರೂ ಹಾಲಿ ಅಧ್ಯಕ್ಷ ಜಿ.ಪರಮೇಶ್ವರ್ ಬಿ.ಕೆ.ಹರಿಪ್ರಸಾದ್ ಹಾಗೂ ಕೆ.ಹೆಚ್.ಮುನಿಯಪ್ಪ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರು ದಿನೇಶ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ದಿನೇಶ್ ಅವರನ್ನೇ ಅಂತಿಮಗೊಳಿಸಲು ಆಸಕ್ತಿವಹಿಸಿದ್ದರು.

ಕಳೆದ ಎರಡು ಮೂರು ದಿನಗಳಿಂದ ಹಾಲಿ ಕೆಪಿಸಿಸಿ ಅಧ್ಯಕ್ಷರು ಹರಿಪ್ರಸಾದ್ ಹಾಗೂ  ಕೆ.ಹೆಚ್. ಮುನಿಯಪ್ಪ ಅವರ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದು ಇವರಿಬ್ಬರಲ್ಲಿ ಒಬ್ಬರನ್ನು ನೇಮಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿ.ಕೆ. ಹರಿಪ್ರಸಾದ್ ಹಿಂದುಳಿದ ವರ್ಗಕ್ಕೆ ಸೇರಿದರೆ, ಕೆ.ಹೆಚ್. ಮುನಿಯಪ್ಪ ದಲಿತ ಎಡಗೈ ಸಮುದಾಯದವರಾಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಂಪುಟದಲ್ಲಿ ಇವೆರಡು ಸಮುದಾಯಕ್ಕೆ ಹೆಚ್ಚು ಪ್ರಾತಿನಿದ್ಯ ನೀಡಲಾಗಿಲ್ಲ. ಈ ಕಾರಣದಿಂದ ಇವರಲ್ಲಿ ಯಾರಾದರೊಬ್ಬರನ್ನು ನೇಮಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಗೆಲ್ಲಬಹುದೆಂಬ ಮಾಹಿತಿಯನ್ನು ಹೈಕಮಾಂಡ್'ಗೆ ರವಾನಿಸಿದ್ದಾರೆ ಎನ್ನಲಾಗಿದೆ.

click me!