
ಮಂಗಳೂರು(ಜೂ.14): ಭಾರತದ ವೃದ್ದರ ನಿಂದನೆ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರಿಗೆ ಪ್ರಥಮ ಸ್ಥಾನ ಲಭಿಸಿದೆ. ಶೇ. ೪೭ ರಷ್ಟು ವೃದ್ದ ನಿಂದನೆ ಪ್ರಕರಣಗಳು ಮಂಗಳೂರಿನಲ್ಲಿ ಕಂಡುಬಂದಿವೆ ಎಂಬ ಆಘಾತಕಾರಿ ಅಂಶವನ್ನು ಸರ್ವೆಯೊಂದು ಬಹಿರಂಗಪಡಿಸಿದೆ.
ಹೆಲ್ಪ್ಏಜ್ ಇಂಡಿಯಾ ಎಂಬ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಶೇ. 47ರಷ್ಟು ವೃದ್ದ ನಿಂದನೆ ಪ್ರಕರಣಗಳು ಮಂಗಳೂರು ನಗರದಲ್ಲಿ ದಾಖಲಾಗುವ ಮೂಲಕ, ಇಡೀ ಭಾರತದಲ್ಲಿ ಅತೀ ಹೆಚ್ಚು ವೇದ್ದ ನಿಂದನೆ ಪ್ರಕರಣ ದಾಖಲಾಗುವ ಅಪಖ್ಯಾತಿಗೆ ಗುರಿಯಾಗಿದೆ. ಹೆಲ್ಪ್ಏಜ್ ಇಂಡಿಯಾ ನಡೆಸಿದ ಸರ್ವೆಯಲ್ಲಿ ನಂತರದ ಸ್ಥಾನವನ್ನು ಅಹಮದಾಬಾದ್(ಶೇ.46). ಭೋಪಾಲ್(ಶೇ.39), ಅಮೃತಸರ್(ಶೇ.35) ಮತ್ತು ನವದೆಹಲಿ(ಶೇ.33) ನಗರಗಳು ಪಡೆದುಕೊಮಡಿವೆ.
ವೃದ್ದ ನಿಂದನೆ ಪ್ರಕರಣಗಳಲ್ಲಿ ಹಿರಿಯ ಪೋಷಕರ ಗಂಡು ಮಕ್ಕಳು(ಶೇ.52), ಸೊಸೆಯಂದಿರು(ಶೇ.34) ಪಾಲು ಅಧಿಕವಾಗಿದೆ ಎಂದು ಹೆಲ್ಪ್ಏಜ್ ಇಂಡಿಯಾ ಸರ್ವೆ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಹೆಲ್ಪ್ಏಜ್ ಇಂಡಿಯಾ ಸಂಸ್ಥೆಯ ಸಿಇಒ ಮ್ಯಾಥ್ಯೂ ಚೆರಿಯಾನ್, ಹಿರಿಯರು ಅತೀಯಾಗಿ ನಂಬುವ ಮಕ್ಕಳಿಂದಲೇ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಶೇ.82 ರಷ್ಟು ವೃದ್ದ ನಿಂದನೆ ಪ್ರಕರಣಗಳು ಕುಟುಂಬದ ಗೌರವದ ಪ್ರಶ್ನೆ ಕಾರಣಕ್ಕೆ ದಾಖಲಾಗುವುದೇ ಇಲ್ಲ ಎಂದು ಹೆಲ್ಪ್ಏಜ್ ಇಂಡಿಯಾ ಸರ್ವೆ ತಿಳಿಸಿದೆ. ಇನ್ನು ವೃದ್ದ ನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತ ಕಠಿಣ ಕಾನೂನಿಗೆ ಆಗ್ರಹಿಸಿ ಹೆಲ್ಪ್ಏಜ್ ಇಂಡಿಯಾ ಸಂಸ್ಥೆ ಮತ್ತು 300 ಜನ ಹಿರಿಯ ನಾಗರಿಕರು ನಾಳೆ ಸಂಸತ್ತಿನವರೆಗೆ ಮೊಂಬತ್ತಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.