ಕೆಬಿಸಿಯಲ್ಲಿ ಕೋಟಿ ಗೆದ್ದ ಬಬಿತಾಗೆ ಅವಕಾಶಗಳ ಸರಮಾಲೆ| ಬಿಸಿಯೂಟ ತಯಾರಿಸುತ್ತಿದ್ದ ಬಬಿತಾರಿಗೆ ಸಿಕ್ತು ಬಂಪರ್ ಆಫರ್!
ಅಮರಾವತಿ[ಅ.03]: ‘ಕೌನ್ ಬನೇಗಾ ಕರೋಡ್‌ಪತಿ’ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಒಂದು ಕೋಟಿ ರು. ಗೆದ್ದ ಬಬಿತಾ ತಾಡೆ ಅವರನ್ನು ಮಹಾರಾಷ್ಟ್ರ ಚುನಾವಣಾ ಆಯೋಗ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ.
ಉತ್ತರ ಗೊತ್ತಿದ್ರೂ ಏಳು ಕೋಟಿ ಜಸ್ಟ್ ಮಿಸ್!
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮರಾವತಿ ಜಿಲ್ಲೆಯಲ್ಲಿ ಮತಯಂತ್ರ ಮತ್ತು ಮತ ಜಾಗೃತಿ ಅಭಿಯಾನಕ್ಕೆ ಬಬಿತಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಗೊತ್ತಿದ್ರೂ ಏಳು ಕೋಟಿ ಜಸ್ಟ್ ಮಿಸ್!
ಬಬಿತಾ ಅವರು ಅಮರಾವತಿ ಜಿಲ್ಲೆಯ ಅಂಜನಗಾಂವ್ ಸುರ್ಜಿ ಹಳ್ಳಿಯ ನಿವಾಸಿಯಾಗಿದ್ದು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದು ಕೋಟಿ ರು. ಗೆದ್ದುಕೊಂಡಿದ್ದರು.