ಕಾಶ್ಮೀರ ಪಾಕಿಸ್ತಾನದ ಕುತ್ತಿಗೆ ನರ ಇದ್ದಂತೆ: ಇಮ್ರಾನ್‌ ಖಾನ್‌

By Web DeskFirst Published Sep 7, 2019, 11:46 AM IST
Highlights

ಕಾಶ್ಮೀರ ಪಾಕಿಸ್ತಾನದ ಕುತ್ತಿಗೆ ನರ ಇದ್ದಂತೆ: ಇಮ್ರಾನ್‌ ಖಾನ್‌| 1965ರ ಭಾರತ- ಪಾಕ್‌ ಯುದ್ಧದ ವರ್ಷಾಚರಣೆಯ ಅಂಗವಾಗಿ ರಕ್ಷಣೆ ಮತ್ತು ಹುತಾತ್ಮ ದಿನದ ಸಂದೇಶ

ಇಸ್ಲಾಮಾಬಾದ್‌[ಸೆ.07]: ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮೊಂಡುತನ ಮುಂದುವರಿಸಿದ್ದಾರೆ.

ಕಾಶ್ಮೀರವು ಪಾಕಿಸ್ತಾನದ ‘ಕುತ್ತಿಗೆಯ ನರ’ ಇದ್ದಂತೆ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಮಾಡಿದ್ದು ದೇಶದ ಭದ್ರತೆ ಮತ್ತು ಸಮಗ್ರತೆಗೆ ಸವಾಲಾಗಿದೆ ಎಂದು ಇಮ್ರಾನ್‌ ಖಾನ್‌ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಯುದ್ಧದ ಕನವರಿಕೆಯಿಂದ ಹೊರಬಂದ ಪಾಕ್ ಪ್ರಧಾನಿ: ನಾಲಿಗೆ ಮೇಲೆ ಶಾಂತಿಯ ಹೊಸ ಕಹಾನಿ!

1965ರ ಭಾರತ- ಪಾಕ್‌ ಯುದ್ಧದ ವರ್ಷಾಚರಣೆಯ ಅಂಗವಾಗಿ ರಕ್ಷಣೆ ಮತ್ತು ಹುತಾತ್ಮ ದಿನದ ಸಂದೇಶ ನೀಡಿದ ಇಮ್ರಾನ್‌ ಖಾನ್‌, ಕಾಶ್ಮೀರದ ವಿಷಯವಾಗಿ ತಮ್ಮ ಸರ್ಕಾರ ಜಾಗತಿಕ ವೇದಿಕೆಗಳಲ್ಲಿ ರಾಜತಾಂತ್ರಿಕ ಅಭಿಯಾನ ಆರಂಭಿಸಿದೆ. ಒಂದು ವೇಳೆ ಭಾರತದ ಅಣ್ವಸ್ತ್ರ ಶಸ್ತ್ರಾಗಾರದ ಬಗ್ಗೆ ಗಮನ ನೀಡದೇ ಇದ್ದರೆ, ಮುಂದಾಗುವ ದುರಂತಕ್ಕೆ ಅಂತಾರಾಷ್ಟ್ರೀಯ ಸಮುದಾಯವೇ ಹೊಣೆಯಾಗಲಿದೆ ಎಂದು ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.

click me!