ಕಾಶ್ಮೀರ ಹಮಾರಾ ಹೈ: ಜಮೈತ್ ಉಲೆಮಾ-ಎ-ಹಿಂದ್ ಘರ್ಜನೆ!

Published : Sep 12, 2019, 03:37 PM ISTUpdated : Sep 12, 2019, 04:05 PM IST
ಕಾಶ್ಮೀರ ಹಮಾರಾ ಹೈ: ಜಮೈತ್ ಉಲೆಮಾ-ಎ-ಹಿಂದ್ ಘರ್ಜನೆ!

ಸಾರಾಂಶ

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದ ಜಮೈತ್ ಉಲೆಮಾ-ಎ-ಹಿಂದ್| ಜಮೈತ್ ಉಲೆಮಾ-ಎ-ಹಿಂದ್ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆ| ಭಾರತದೊಂದಿಗೆ ಕಣಿವೆಯ ಏಕೀಕರಣದಿಂದ ಕಾಶ್ಮೀರಿಗರ ಕಲ್ಯಾಣ ಸಾಧ್ಯ ಎಂದ ಮಂಡಳಿ| ನೆರೆ ದೇಶದ ದುಷ್ಟ ಶಕ್ತಿಗಳು ಕಾಶ್ಮೀರವನ್ನು ಹಾಳು ಮಾಡುತ್ತಿವೆ ಎಂದ ಮೌಲಾನಾ ಮೆಹಮೂದ್ ಮದನಿ| ಪ್ರತ್ಯೇಕತಾವಾದಿ ಚಳವಳಿ ದೇಶಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದು ಆರೋಪಿಸಿದ ಮದನಿ| 

ನವದೆಹಲಿ(ಸೆ.12): ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತದೊಂದಿಗೆ ಕಣಿವೆಯ ಏಕೀಕರಣದಿಂದ ಕಾಶ್ಮೀರಿಗರ ಕಲ್ಯಾಣ ಸಾಧ್ಯ ದೇಶದ ಉನ್ನತ ಮುಸ್ಲಿಂ ಮಂಡಳಿ ಜಮೈತ್ ಉಲೆಮಾ-ಎ-ಹಿಂದ್ ಹೇಳಿದೆ. 

ಜಮೈತ್ ಉಲೆಮಾ-ಎ-ಹಿಂದ್ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ನಿರ್ಣಯ ಹೊರಡಿಸಲಾಗಿದ್ದು, ನೆರೆಯ ಪಾಕಿಸ್ತಾನದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.

ನೆರೆ ದೇಶದ ದುಷ್ಟ ಶಕ್ತಿಗಳು ಇಲ್ಲಿನ ಜನರನ್ನು ಕತ್ತಿ, ಗುರಾಣಿಗಳಂತೆ ಬಳಸಿಕೊಂಡು ಕಾಶ್ಮೀರವನ್ನು ಹಾಳುಮಾಡುತ್ತಿವೆ ಎಂದು ಮಂಡಳಿ ಮುಖ್ಯಸ್ಥ ಮೌಲಾನಾ ಮೆಹಮೂದ್ ಮದನಿ ಹರಿಹಾಯ್ದಿದ್ದಾರೆ.

ಕಾಶ್ಮೀರ ಭಾರತಕ್ಕೆ ಸೇರಿದ್ದು. ಇಲ್ಲಿನ ಜನರ ಆಸೆ, ಆಕಾಂಕ್ಷೆಗಳು, ಅವರ ಆತ್ಮಗೌರವ, ಸಾಂಸ್ಕೃತಿಕ ಗುರತು ಇವೆಲ್ಲವೂ ಸಾಕಾರಗೊಳ್ಳಬೇಕಾದರೆ, ಅದು ಭಾರತದೊಂದಿಗೆ ಅವಿಭಾಜ್ಯ ಅಂಗವಾಗಿ ಸೇರಬೇಕು ಎಂದು ಮದನಿ ಅಭಿಪ್ರಾಯಪಟ್ಟಿದ್ದಾರೆ. 

ಕಾಶ್ಮೀರಿಗಳ ಕಲ್ಯಾಣ ಭಾರತದೊಂದಿಗಿನ ಏಕೀಕರಣದಲ್ಲಿದ್ದು, ಪ್ರತ್ಯೇಕತಾವಾದಿ ಚಳವಳಿ ದೇಶಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದು ಮದನಿ ಆರೋಪಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ NRC ಪ್ರಕ್ರಿಯೆಗೆ ಮುಂದಾದರೆ ಮಂಡಳಿ ಅದನ್ನು ಸ್ವಾಗತಿಸುವುದಾಗಿ ಮದನಿ ಸ್ಪಷ್ಟಪಡಿಸಿದ್ದಾರೆ. NRCಯಿಂದ ಯಾರು ಅಕ್ರಮ ವಲಸಗಿರು, ಯಾರು ನೈಜ ಭಾರತೀಯರು ಎಂಬುದು ತಿಳಿಯಲಿದೆ ಎಂದಾದರೆ ಮಂಡಳಿ NRCಯನ್ನು ಸ್ವಾಗತಿಸುತ್ತದೆ ಎಂದು ಮದನಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ