ಕುವೈತ್ ನಲ್ಲಿ ಮೃತಪಟ್ಟ ಕಾರವಾರದ ಹುಡುಗ/ ಮೃತದೇಹ ತರಲಾರದೆ ತಾಯಿಯ ಪರದಾಟ/ ಕುಟುಂಬಕ್ಕೆ ಬೇಕಿದೆ ಭಾರತೀಯ ಧೂತವಾಸದ ನೆರವು
ಕಾರವಾರ[ಸೆ. 16] ಕಾರವಾರ ಮೂಲದ ಕುವೈತ್ ನಲ್ಲಿ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಮೃತದೇಹ ತವರಿಗೆ ತರಲು ಯುವಕನ ತಾಯಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.
ಬಡತನದ ಹಿನ್ನಲೆಯಲ್ಲಿ ಭಾರತಕ್ಕೆ ಮೃತದೇಹ ತರಲಾಗದೇ ತಾಯಿ ಜಿಲ್ಲಾಧಿಕಾರಿಗಳ ಮೂಲಕ ಕುವೈತಿನ ಭಾರತೀಯ ಧೂತಾವಾಸದ ನೆರವು ಕೇಳಿದ್ದಾರೆ. ಕಡವಾಡದ ಕ್ರಿಶ್ಚಿಯನ್‌ವಾಡಾದ ನಿವಾಸಿ ರೊಬಿನಸನ್ ಫ್ರಾನ್ಸಿಸ್ ರುಜಾರಿಯೋ ಎಂಬ ಯುವಕ ಕುವೈಟ್ ನ ಫರ್ವಾನಿಯ ಎಂಬ ನಗರದಲ್ಲಿ ರವಿವಾರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾನೆ.
ಸಂಪರ್ಕಕ್ಕೆ ಸಿಕ್ಕಿದ್ರು ನಾಪತ್ತೆಯಾದ ಪೊಲೀಸ್ ಅಧಿಕಾರಿಗಳು! ಬಿಚ್ಚಿಟ್ರು ‘ಬೆಚ್ಚಿ ಬೀಳಿಸುವ’ ಕಾರಣ
ಆತನ ಮೃತದೇಹವನ್ನು ಕಾರವಾರಕ್ಕೆ ಗೋವಾ ವಿಮಾನ ನಿಲ್ದಾಣದ ಮೂಲಕ ತರಬೇಕಾಗಿದ್ದು, ಆತನ ತಾಯಿ ಮೇರಿ ಫ್ರಾನ್ಸಿಸ್ ರುಜಾರಿಯೋ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತನ್ನ ಮಗ ಕುವೈತಿನ ದಜೀಜ ಎಂಬ ನಗರದಲ್ಲಿ ಕುವೈತ್ ಫುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಆರ್ಥಿಕ ಮುಗ್ಗಟ್ಟು ಇರುವ ಕಾರಣ ತನ್ನ ಮಗನ ಮೃತ ದೇಹವನ್ನು ಭಾರತಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕುವೈತಿನ ಭಾರತೀಯ ಧೂತಾವಾಸದ ಜೊತೆ ಚರ್ಚಿಸಿ ತನ್ನ ಮಗನ ಶವವನ್ನು ಗೋವಾ ಮೂಲಕ ಕಾರವಾರಕ್ಕೆ ತರಿಸಬೇಕಾಗಿ ಆಕೆ ಮೊರೆ ಇಟ್ಟಿದ್ದಾಳೆ. ಈ ಬಗ್ಗೆ ಜಿಲ್ಲಾಡಳಿತ ವಿದೇಶಾಂಗ ವ್ಯವಹಾರಗಳ ಇಲಾಖೆಯ ಗಮನ ಸೆಳೆದಿದೆ ಎನ್ನಲಾಗಿದೆ.