‘ಭಾರತದ ಅನೇಕ ಭಾಷೆಗಳು ದೇಶದ ದೌರ್ಬಲ್ಯವಲ್ಲ’ ರಾಹುಲ್ ಟ್ವಿಟ್ ವೈರಲ್

By Web DeskFirst Published Sep 16, 2019, 10:36 PM IST
Highlights

ವೈರಲ್ ಆಯ್ತು ರಾಹುಲ್ ಗಾಂಧಿ ಟ್ವೀಟ್/ 23 ಭಾಷೆಗಳ ಉಲ್ಲೇಖ ಮಾಡಿದ ಕಾಂಗ್ರೆಸ್ ನಾಐಕ/ ಪರೋಕ್ಷವಾಗಿ ಹಿಂದಿ ಹೇರಿಕೆಗೆ ಟಾಂಗ್ ಕೊಟ್ಟ ನಾಯಕ

ನವದೆಹಲಿ[ಸೆ. 16]  ದೇಶದೆಲ್ಲೆಡೆ ಹಿಂದಿ ಹೇರಿಕೆ ವಿಚಾರ ದೊಡ್ಡ ಚರ್ಚೆಯಲ್ಲಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಟ್ವೀಟ್ ಒಂದು ಸಖತ್ ವೈರಲ್ ಆಗಿದೆ.

ಭಾರತದ ಅನೇಕ ಭಾಷೆಗಳು ಭಾರತ ಮಾತೆಯ ದೌರ್ಬಲ್ಯ ಅಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಕನ್ನಡವನ್ನೂ  ಸೇರಿಸಿ 23 ಭಾರತೀಯ ಭಾಷೆಗಳನ್ನು ಉಲ್ಲೇಖಿಸಿ ಈ ಮಾತನ್ನು ರಾಹುಲ್ ಹೇಳಿದ್ದಾರೆ.

ಹಿಂದಿಯಲ್ಲಿ ಹೇಳಿದ ಅಮಿತ್ ಶಾಗೆ ಪರೋಕ್ಷವಾಗಿ ಕನ್ನಡದಲ್ಲಿ ಗೋವಿಂದ ಕಾರಜೋಳ ಟಾಂಗ್

15 ಸಾವಿರಕ್ಕೂ ಅಧಿಕ ಜನರು ಈ ಟ್ಟೀಟ್‌ ಲೈಕ್‌ ಮಾಡಿದ್ದು, 4 ಸಾವಿರಕ್ಕೂ ಹೆಚ್ಚು ಜನರು ರೀ ಟ್ಟೀಟ್‌ ಮಾಡಿದ್ದಾರೆ. ಹಲವರು ಅವರ ಟ್ಟೀಟ್‌ನ್ನು ಮೆಚ್ಚಿಕೊಂಡಿದ್ದಾರೆ. ಅನೇಕರು ರಾಹುಲ್ ಅವರ ಕಾಲೆಳೆದಿದ್ದಾರೆ.

ದೇಶದ ಎಲ್ಲ ಭಾಷೆಗಳನ್ನು ಉಲ್ಲೇಖ ಮಾಡಿ ರಾಹುಲ್ ಕೇಂದ್ರ ಸರ್ಕಾರಕ್ಕೆ ಸರಿಯಾದ ತಿರುಗೇಟನ್ನು ಕೊಟ್ಟಿದ್ದಾರೆ.  ಈ ಮೂಲಕ ವಿವಿಧತೆಯ ದೇಶವನ್ನು ಕೊಂಡಾಡಿದ್ದಾರೆ. 

🇮🇳Oriya 🇮🇳 Marathi
🇮🇳 Kannada 🇮🇳Hindi 🇮🇳Tamil
🇮🇳English 🇮🇳Gujarati
🇮🇳Bengali 🇮🇳Urdu 🇮🇳Punjabi 🇮🇳 Konkani 🇮🇳Malayalam
🇮🇳Telugu 🇮🇳Assamese
🇮🇳Bodo 🇮🇳Dogri 🇮🇳Maithili 🇮🇳Nepali 🇮🇳Sanskrit
🇮🇳Kashmiri 🇮🇳Sindhi
🇮🇳Santhali 🇮🇳Manipuri...

India’s many languages are not her weakness.

— Rahul Gandhi (@RahulGandhi)
click me!