ಸಿಬಿಐ ತನಿಖೆ ತಪ್ಪಿಸಿ ಕಾರ್ತಿ ಚಿದಂಬರಂ ವಿದೇಶಕ್ಕೆ ಹೋಗುವಂತಿಲ್ಲ:ಸುಪ್ರೀಂ

By Suvarna Web DeskFirst Published Aug 14, 2017, 4:25 PM IST
Highlights

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕಾರ್ತಿ ಚಿದಂಬರಂ ಸಿಬಿಐ ತನಿಖೆಯನ್ನು ಎದುರಿಸಲೇಬೇಕು. ಸಿಬಿಐ ವಿಚಾರಣೆಗೆ ಹಾಜರಾಗುವ ಮುನ್ನ ಯಾವುದೇ ಕಾರಣಕ್ಕೂ ವಿದೇಶಕ್ಕೆ ಹಾರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.

ನವದೆಹಲಿ (ಆ.14): ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕಾರ್ತಿ ಚಿದಂಬರಂ ಸಿಬಿಐ ತನಿಖೆಯನ್ನು ಎದುರಿಸಲೇಬೇಕು. ಸಿಬಿಐ ವಿಚಾರಣೆಗೆ ಹಾಜರಾಗುವ ಮುನ್ನ ಯಾವುದೇ ಕಾರಣಕ್ಕೂ ವಿದೇಶಕ್ಕೆ ಹಾರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.

ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ  ನೀಡಿರುವ ಲುಕೌಟ್ ನೋಟಿಸ್’ಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ನನ್ನ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪವು ರಾಜಕೀಯ ಪ್ರೇರಿತವಾದದ್ದು ಎಂದು ಕಾರ್ತಿ ಚಿದಂಬರಂ ಆರೋಪಿಸಿದ್ದರು. ಮೇ.18 ಮತ್ತು ಜು.21 ರಂದು ಸಿಬಿಯ ಸಮನ್ಸ್ ಕೂಡಾ ನೀಡಿತ್ತು. ಇದನ್ನು ಪ್ರಶ್ನಿಸಿ ಕಾರ್ತಿ ಚಿದಂಬರಂ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದ ತೀರ್ಪು ಬರುವವರೆಗೆ ಸಿಬಿಐ ಕಾಯಬೇಕು, ತನಿಖೆಗೆ ಮುಂದಾಗಬಾರದು ಎಂದು ಕೋರ್ಟ್’ಗೆ ಕೋರಿದ್ದರು.

ನನಗೆ ವಿದೇಶಕ್ಕೆ ಹೋಗುವ ಯೋಚನೆಯಿಲ್ಲ. ವಿಚಾರಣೆ ಚೆನ್ನೈ ಅಥವಾ ದೆಹಲಿ ಎಲ್ಲೇ ನಡೆಯಲಿ, ನಾನು ಭಾಗವಹಿಸುತ್ತೇನೆ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ. ಹಿಂದೊಮ್ಮೆ ನಾವು ಕೆಲವರಿಗೆ ವಿದೇಶಕ್ಕೆ ಹೋಗಲು ಅನುಮತಿ ನೀಡಿದ್ದೆವು. ಆದರೆ ವಾಪಸ್ಸಾಗಲೇ ಇಲ್ಲ. ಹಾಗಾಗಿ ಈ ಬಾರಿ ಅಂತಹ ತಪ್ಪನ್ನು ಮಾಡುವುದಿಲ್ಲ ಎಂದು ಮುಖ್ಯ ನ್ಯಾ. ಜೆಎಸ್ ಖೇಹರ್ ಹೇಳಿದ್ದಾರೆ.

click me!