ಜೆಡಿಯುನಲ್ಲಿ ಮುಂದುವರಿದ ಉಚ್ಛಾಟನಾ ಸರಣಿ

By Suvarna Web DeskFirst Published Aug 14, 2017, 3:58 PM IST
Highlights

ನಿತೀಶ್ ಕುಮಾರ್ ಮಹಾಮೈತ್ರಿಯನ್ನು ತ್ಯಜಿಸಿ ಎನ್’ಡಿಏ ಸೇರಿದ ಬಳಿಕ ಪಕ್ಷದಲ್ಲಿ ಉಚ್ಚಾಟನಾ ಸರಣಿ ಮುಂದುವರೆದಿದ್ದು, ಇದೀಗ 21 ಮಂದಿ ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಉಚ್ಛಾಟಿಸಲಾಗಿದೆ.

ನವದೆಹಲಿ: ನಿತೀಶ್ ಕುಮಾರ್ ಮಹಾಮೈತ್ರಿಯನ್ನು ತ್ಯಜಿಸಿ ಎನ್’ಡಿಏ ಸೇರಿದ ಬಳಿಕ ಪಕ್ಷದಲ್ಲಿ ಉಚ್ಚಾಟನಾ ಸರಣಿ ಮುಂದುವರೆದಿದ್ದು, ಇದೀಗ 21 ಮಂದಿ ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಉಚ್ಛಾಟಿಸಲಾಗಿದೆ.

ಕಳೆದ ವಾರ ಪಕ್ಷದ ಹಿರಿಯ ನಾಯಕ ಶರದ್ ಯಾದವರನ್ನು ರಾಜ್ಯಸಭೆಯಲ್ಲಿ ಸಭಾನಾಯಕನ ಸ್ಥಾನದಿಂದ ಹಾಗೂ ಸಂಸದ ಅಲೀ ಅನ್ವರ್’ರನ್ನು ಪಕ್ಷವಿರೋಧಿ ಚಟುವಟಿಕೆಗಳ ಕಾರಣ ನೀಡಿ ಸಂಸದೀಯ ಮಂಡಳಿಯಿಂದ ವಜಾಗೊಳಿಸಲಾಗಿತ್ತು.

ಮಹಾಮೈತ್ರಿಯನ್ನು ತೊರೆದು ಎನ್’ಡಿಏ ಸೇರುವ ನಿತೀಶ್ ನಿರ್ಧಾರವನ್ನು ಶರದ್ ಯಾದವ್ ಹಾಗೂ ಅನ್ವರ್ ಟೀಕಿಸಿದ್ದರು.

ಬಿಜೆಪಿಯನ್ನು ಸೋಲಿಸಲು ಬಿಹಾರದ ಜನರು ಮಹಾಮೈತ್ರಿಗೆ ಜನಾದೇಶ ನೀಡಿರುವ ಹಿನ್ನೆಲೆಯಲ್ಲಿ, ಮಹಾಮೈತ್ರಿಯಿಂದ ಹೊರಹೋಗಿ ಎನ್’ಡಿಏ ಸೇರುವುದು ಜನರಿಗೆ ದ್ರೋಹ ಬಗೆದಂತಾಗುವುದು ಎಂದು ಶರದ್ ಯಾದವ್ ಅಭಿಪ್ರಾಯಪಟ್ಟಿದ್ದರು.

click me!