ಚಿಲ್ಲರೆ ಸಾಲ ಪಡೆಯುವುದರಲ್ಲೂ ಕರ್ನಾಟಕ ಮುಂದು!

By Web DeskFirst Published Sep 25, 2018, 11:52 AM IST
Highlights

ಚಿಲ್ಲರೆ ಸಾಲದಲ್ಲಿ ಪಡೆಯುವುದರಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತಮಿಳುನಾಡು ಶೇ. 40 ರಷ್ಟು ಪಾಲು ಹೊಂದಿದೆ | ಟಾಪ್‌ 10 ರಾಜ್ಯಗಳು ಒಟ್ಟಾರೆ ಚಿಲ್ಲರೆ ಸಾಲದಲ್ಲಿ ಶೇ.76 ರಷ್ಟುಪಾಲು ಹೊಂದಿವೆ 

ಮುಂಬೈ (ಸೆ. 25): ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ದೇಶದ ಶೇ.20 ರಷ್ಟುಜನರನ್ನು ಮಾತ್ರ ಪ್ರತಿನಿಧಿಸುತ್ತವೆಯಾದರೂ, ಚಿಲ್ಲರೆ ಸಾಲ ಪಡೆಯುವುದರಲ್ಲಿ ಶೇ.40 ರಷ್ಟುಪಾಲು ಹೊಂದಿವೆ.

ಆರ್ಥಿಕ ಅಭಿವೃದ್ಧಿ ಮತ್ತು ನಗರೀಕರಣ ಟ್ರಾನ್ಸ್‌ಯುನಿಯನ್‌ ಸಿಬಿಲ್‌ ಎಂಬ ವರದಿಯಲ್ಲಿ ಈ ಅಂಶಗಳಿವೆ. ಜೂನ್‌ ಅಂತ್ಯದ ವೇಳೆಗೆ ಮಹಾರಾಷ್ಟ್ರ 5,50,200 ಕೋಟಿ ರು., ತಮಿಳುನಾಡು 2,77,400 ಕೋಟಿ, ಕರ್ನಾಟಕ 2,74,900 ಕೋಟಿ ರು. ಸಾಲ ಪಡೆದಿದ್ದವು. ಆಟೋ, ಹಳೆ ಕಾರು, ಗೃಹ, ಆಸ್ತಿ ಸಾಲ, ವೈಯಕ್ತಿಕ, ಗೃಹಬಳಕೆ ವಸ್ತುಗಳ ಖರೀದಿ, ಶಿಕ್ಷಣ ಸಾಲವನ್ನು ಚಿಲ್ಲರೆ ಸಾಲ ಎಂದು ಕರೆಯಲಾಗುತ್ತದೆ.

ಇನ್ನು ಟಾಪ್‌ 10 ರಾಜ್ಯಗಳು ಒಟ್ಟಾರೆ ಚಿಲ್ಲರೆ ಸಾಲದಲ್ಲಿ ಶೇ.76ರಷ್ಟುಪಾಲು ಹೊಂದಿವೆ ಎಂದು ವರದಿ ಹೇಳಿದೆ.

click me!