ಸ್ಪೀಕರ್ ತೀರ್ಪು :  ರಾಣೆಬೆನ್ನೂರು ಶಾಸಕ ಆರ್. ಶಂಕರ್ ಅನರ್ಹ, ಪಟ್ಟಿ ಬೆಳೆಯಲಿದೆ..

By Web Desk  |  First Published Jul 25, 2019, 8:25 PM IST

ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡ ನಂತರ ಸೈಲೆಂಟ್‌ ಆಗಿದ್ದ ರಾಜ್ಯ ರಾಜಕೀಯ ಸ್ಪೀಕರ್ ರಮೇಶ್ ಕುಮಾರ್‌ ಅವರ ಸುದ್ದಿಗೋಷ್ಠಿ ನಂತರ ಮತ್ತಷ್ಟು ವೇಗ ಪಡೆದುಕೊಂಡಿದೆ. ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ರಮೇಶ್ ಕುಮಾರ್ ರಾಜೀನಾಮೆ ಕೊಟ್ಟ ಶಾಸಕರಿಗೆ ಶಾಕ್ ನೀಡಿದ್ದಾರೆ. ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.


ಬೆಂಗಳೂರು[ಜು. 25] ದೋಸ್ತಿ ಸರ್ಕಾರದ ಅವಸಾನದ ಸರಿಯಾಗಿ 48 ಗಂಟೆಗಳ ನಂತರ ಸ್ಪೀಕರ್ ಶಾಕ್ ನೀಡಿದ್ದಾರೆ.  ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಿದಾಗ ರಾಜೀನಾಮೆ ಕೊಟ್ಟು ಹಾರಿರುವ ಶಾಸಕರು ಗೈರಾಗಿದ್ದರು.

ಕಠಿಣ ನಿರ್ಧಾರ ತೆಗೆದುಕೊಂಡಿರುವ ಸ್ಪೀಕರ್ ರಮೇಶ್ ಕುಮಾರ್ ಆರ್. ಶಂಕರ್ ಅವರನ್ನು ಅನರ್ಹ ಮಾಡಿದ್ದಾರೆ.  ವಿಧಾನಸಭೆ ಅವಧಿ ಮುಗಿಯುವವರೆಗೆ 5 ವರ್ಷದ ಕಾಲ ಅನರ್ಹ ಮಾಡಲಾಗಿದೆ.

Tap to resize

Latest Videos

ರಾಜೀನಾಮೆ ಕೊಟ್ಟಿದ್ದ ಶಾಸಕರು
1. ಆನಂದ್​ ಸಿಂಗ್​, ಹೊಸಪೇಟೆ [ಕಾಂಗ್ರೆಸ್]
2. ರಮೇಶ್ ಜಾರಕಿಹೊಳಿ, ಗೋಕಾಕ್​ [ಕಾಂಗ್ರೆಸ್]
3. ಮಹೇಶ್ ಕುಮಟಳ್ಳಿ, ಅಥಣಿ [ಕಾಂಗ್ರೆಸ್]
4. ಎಚ್‌. ವಿಶ್ವನಾಥ್​​, ಹುಣಸೂರು [ಜೆಡಿಎಸ್‌]
5. ಪ್ರತಾಪ್ ಗೌಡ ಪಾಟೀಲ್​, ಮಸ್ಕಿ​ [ಕಾಂಗ್ರೆಸ್]
6. ಬಿ.ಸಿ. ಪಾಟೀಲ್​​, ಹಿರೆಕೇರೂರು [ಕಾಂಗ್ರೆಸ್]
7. ಶಿವರಾಂ ಹೆಬ್ಬಾರ್​, ಯಲ್ಲಾಪುರ [ಕಾಂಗ್ರೆಸ್]
8. ನಾರಾಯಣಗೌಡ, ಕೆಆರ್​.ಪೇಟೆ [ಜೆಡಿಎಸ್‌]
9 ಎಸ್.ಟಿ. ಸೋಮಶೇಖರ್​​, ಯಶವಂತಪುರ [ಕಾಂಗ್ರೆಸ್]
10. ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್​ [ಜೆಡಿಎಸ್‌]
11. ಭೈರತಿ ಬಸವರಾಜ್​, ಕೆ.ಆರ್​.ಪುರಂ [ಕಾಂಗ್ರೆಸ್]
12. ಮುನಿರತ್ನ, ಆರ್​.ಆರ್​.ನಗರ [ಕಾಂಗ್ರೆಸ್]
13. ರೋಷನ್​ ಬೇಗ್​​, ಶಿವಾಜಿನಗರ [ಕಾಂಗ್ರೆಸ್]
14. ಎಂಟಿಬಿ ನಾಗರಾಜ್​, ಹೊಸಕೋಟೆ [ಕಾಂಗ್ರೆಸ್]
15. ಸುಧಾಕರ್​, ಚಿಕ್ಕಬಳ್ಳಾಪುರ [ಕಾಂಗ್ರೆಸ್]

ಕಲಾಪಕ್ಕೆ ಗೈರು
16. ಶ್ರೀಮಂತ್​ ಪಾಟೀಲ್​, ಕಾಗವಾಡ [ಕಾಂಗ್ರೆಸ್]
17. ನಾಗೇಂದ್ರ, ಬಳ್ಳಾರಿ ಗ್ರಾ. [ಕಾಂಗ್ರೆಸ್]
18. ನಾಗೇಶ್​, ಮುಳಬಾಗಿಲು [ಪಕ್ಷೇತರ]
19. ಶಂಕರ್​, ರಾಣೆಬೆನ್ನೂರು[ಪಕ್ಷೇತರ]
20. ಮಹೇಶ್ , ಕೊಳ್ಳೆಗಾಲ[BSP]

click me!