ಸುಪ್ರೀಂ ನಿರ್ದೇಶನದಲ್ಲಿ ಸ್ಪೀಕರ್‌ಗೆ ಅರ್ಥವಾಗದ ಅದೊಂದು ಆಂಗ್ಲ ಶಬ್ದ!

By Web DeskFirst Published Jul 11, 2019, 8:50 PM IST
Highlights

ರಾಜೀನಾಮೆ ಕೊಟ್ಟಿರುವ ಅತೃಪ್ತ ಶಾಸಕರು ಮುಂಬೈನಿಂದ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರ ಎದುರು ಹಾಜರಾಗಿ ತೆರಳಿದ್ದಾರೆ. ಇದಾದ ಮೇಲೆ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಕೊಟ್ಟ ನಿರ್ದೇಶನದಲ್ಲಿ ಒಂದು ಶಬ್ದ ಅರ್ಥವಾಗಿಲ್ಲ ಎಂದಿದ್ದಾರೆ. ಹಾಗಾದರೆ ಆ ಶಬ್ದ ಯಾವುದು?

ಬೆಂಗಳೂರು[ಜು. 11] ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿದಾಗ ಶಾಸಕರ ರಾಜೀನಾಮೆ ಅಂಗಿಕಾರ ಮಾಡಿದ್ದೇನೆ ಅಥವಾ ಇಲ್ಲ ಎಂದು ಹೇಳುತ್ತಾರೆ ಎಂದು ಬಹುತೇಕರು ಭಾವಿಸಿದ್ದರು.

ಆದರೆ ಅದೊಂದು ಶಬ್ದವನ್ನು ಇಟ್ಟುಕೊಂಡು ರಮೇಶ್ ಕುಮಾರ್ ಸರಕಾರಕ್ಕೆ ಆಕ್ಸಿಜನ್ ನೀಡಿದರು. ಸುಪ್ರೀಂ ಕೋರ್ಟ್ ಕೊಟ್ಟ ನಿರ್ದೇಶನದಲ್ಲಿ forthwith ಎಂಬ ಆಂಗ್ಲ ಶಬ್ದ ಇತ್ತು.  ಈ ಶಬ್ದಕ್ಕೆ ವಿವರಣೆ ನನಗೆ ಗೊತ್ತಾಗಲಿಲ್ಲ ಎನ್ನುತ್ತಲೆ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿಗೆ ಮುಕ್ತಾಯ ಹಾಡಿದರು. 

ಹಾಗಾದರೆ ಅಷ್ಟಕ್ಕೂ forthwith ಶಬ್ದ ಅರ್ಥವಾದರೂ ಏನು?  immediately, at once, instantly, directly, right away, straight away ಎಂಬಿತ್ಯಾದಿ ಅರ್ಥಗಳನ್ನು ಗೂಗಲ್ ಮತ್ತು ನಿಘಂಟು ನೀಡುತ್ತದೆ. ಅಂದರೆ ತ್ವರಿತವಾಗಿ, ತತ್ ಕ್ಷಣ ಎಂಬ ಅರ್ಥ ಬರುತ್ತದೆ. ಆದರೆ ಈ ಶಬ್ದ ಸ್ಪೀಕರ್ ಅವರಿಗೆ ಅರ್ಥವಾಗಿಲ್ಲ ಎಂದು ಅವರೇ ಹೇಳಿದ್ದಾರೆ.

click me!