
ಬೆಂಗಳೂರು[ಜು. 11] ಅತೃಪ್ತ ಶಾಸಕರ ರಾಜೀನಾಮೆ ವಿಚಾರಣೆ ನಂತರ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಹಾಗಾದರೆ ರಮೇಶ್ ಕುಮಾರ್ ಸುದ್ದಿಗೋಷ್ಠಿಯ ಹೈಲೈಟ್ಸ್ ಏನು?
ಈಗ ರಾಜೀನಾಮೆ ಕೊಟ್ಟ 11 ಶಾಸಕರ ಬಗ್ಗೆ ನಿರ್ಧಾರ ಆಗಿಲ್ಲ. ಇಡೀ ರಾತ್ರಿ ನಾನು ಯೋಚನೆ ಮಾಡಿ ನಿರ್ಧಾರ ಮಾಡುತ್ತೇನೆ. ನನಗೆ ಮನವರಿಕೆ ಆದ ಬಳಿಕವೇ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದು ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟ ಮಾಡಿಲ್ಲ. ಈ ಮೂಲಕ ದೋಸ್ತಿ ಸರಕಾರಕ್ಕೆ ಮತ್ತಷ್ಟು ಆಕ್ಸಿಜನ್ ನೀಡಿದ್ದಾರೆ.
ಸ್ಪೀಕರ್ ವಿಚಾರಣೆಗೆ ಹಾಜರಾದ 11 ಶಾಸಕರ ಪಟ್ಟಿ.. ನಿಮ್ಮವರಿದ್ದಾರಾ?
ಶಾಸಕರ ರಾಜೀನಾಮೆ ಸ್ವಇಚ್ಛೆಯಿಂದಲೋ, ಸ್ವಯಂಪ್ರೇರಣೆಯೋ ಗೊತ್ತಾಗಬೇಕಿದೆ. ಸುಪ್ರೀಂ ಕೋರ್ಟ್ ಯಾವುದಾದರೂ ಒಂದು ತೀರ್ಮಾನ ಮಾಡಲು ಹೇಳಿದೆ. ಸುಪ್ರೀಂಕೋರ್ಟ್ ನನಗೆ ಹೀಗೆಯೇ ಮಾಡಿ ಎಂದು ಹೇಳಿಲ್ಲ. ನಾನು ಏನು ಮಾಡ್ತೇನೆ ಎಂದು ಸುಪ್ರೀಂಗೆ ತಿಳಿಸುತ್ತೇನೆ. ಜತೆಗೆ ಇಂದಿನ ಎಲ್ಲ ಘಟನಾವಳಿಗಳನ್ನು ವಿಡಿಯೋ ರೇಕಾರ್ಡ್ ಮಾಡಿದ್ದೇನೆ.
ನಿಯಮ ಮತ್ತು ಸಂವಿಧಾನವನ್ನು ಬಿಟ್ಟು ನಾನು ಹಿಂದೆ ಸರಿಯುವುದಿಲ್ಲ. ಸಕಲ ವಿಚಾರಗಳು ನನಗೆ ಮನವರಿಕೆಯಾದ ಮೇಲೆ ತೀರ್ಮಾನ ಮಾಡುತ್ತೇನೆ ಎನ್ನುವ ಮೂಲಕ ರಾಜೀನಾಮೆ ಅಂಗೀಕಾರ ಆಗಿದೆಯೋ? ಇಲ್ಲವೋ? ಎಂದು ವಾರದಿಂದ ಚರ್ಚೆ ಆಗುತ್ತಿದ್ದ ಪ್ರಶ್ನೆಯನ್ನು ಹಾಗೆ ಉಳಿಸಿದರು. ಈ ಪ್ರಕರಣ ಮತ್ತೆ ಸುಪ್ರೀಂನಲ್ಲಿ ನಾಳೆ ಅಂದರೆ ಜುಲೈ 12 ರಂದು ವಿಚಾರಣೆಗೆ ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.