
ಬೀದರ್(ಮಾ.02): ತೆಲಂಗಾಣ-ಛತ್ತೀಸ್‌ಘಡ್ ಗಡಿಯಲ್ಲಿ ನಡೆದ ನಕ್ಸ'ಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಜ್ಯದ ಯೋಧನೊಬ್ಬ ಹುತಾತ್ಮನಾಗಿದ್ದಾನೆ.
ಬೀದರ್'ನ ಯೋಧ ಸುಶೀಲ್ ಕುಮಾರ್ ಹುತಾತ್ಮ ಯೋಧ. ನಕ್ಸಲ್ ನಿಗ್ರಹ ದಳದ ಕಮಾಂಡೋ'ಗಳು ತಡಪಲಗುಟ್ಟ-ಪೂಜಾರಿ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಕ್ಸ'ಲ್ ವಿರುದ್ಧ ಕೈಗೊಂಡ ದಾಳಿ ಕೈಗೊಂಡಿದ್ದರು. ಈ ಘರ್ಷಣೆಯಲ್ಲಿ 12 ಮಂದಿ ಮಾವೋಗಳು ಹತ್ಯೆಯಾಗಿದ್ದರು.
2004ರ ಬ್ಯಾಚ್'ನವರಾದ ಯೋಧ ಸುಶೀಲ್ ಕುಮಾರ್ ಹುತಾತ್ಮರಾಗಿರುವುದು ಯೋಧನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹತ್ಯೆಯಾದವರಲ್ಲಿ ಸಿಪಿಐ ಮಾವೋದ ತೆಲಂಗಾಣ ರಾಜ್ಯ ಸಮಿತಿಯ ಕಾರ್ಯದರ್ಶಿ, ಕರೀಂ'ನಗರ ಜಿಲ್ಲಾ ವಿಭಾಗೀಯ ಸಮಿತಿ ಕಾರ್ಯದರ್ಶಿ ಸೇರಿದ್ದಾರೆ. ಉಳಿದವರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ. ಕಳೆದ 3 ದಿನಗಳಿಂದ 150ಕ್ಕೂ ಹೆಚ್ಚು ಮಾವೂ ಉಗ್ರರು ಸಭೆ ಸೇರಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.