
ಬೆಂಗಳೂರು[ಡಿ.05] ಸಿಎಂ ಕುಮಾರಸ್ವಾಮಿ ದೇವರಾಜ್ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಯುಸಿಯಾಗಿದ್ದರು. ಇದಾದ ಮೇಲೆ ಸಚಿವ ಸಂಪುಟ ಸಭೆ ನಡೆಯಬೇಕಾಗಿತ್ತು.
ಆದರೆ ಇದ್ದಕ್ಕಿದಂತೆ ರೇವಣ್ಣ ತಮ್ಮ ಬಾಲ್ಯದ ದಿನ ನೆನಪು ಮಾಡಿಕಂಡರೋ ಗೊತ್ತಿಲ್ಲ. ವಾಸ್ತು, ರಾಹು ಕಾಲ ಎಲ್ಲವೂ ರೇವಣ್ಣ ಅವರನ್ನು ಕಟುಕಲು ಶುರುಮಾಡಿತೋ ಎನೋ...ಕುಮಾರಸ್ವಾಮಿ ಅವರ ಕೈ ಹಿಡಿದು ಎಳೆಯಲು ಆರಂಭಿಸಿದ್ದರು.
ಸುದ್ದಿಗೋಷ್ಠೀಯಲ್ಲಿ ಬಜ್ಜಿ ತಿಂದು ಕಣ್ಣೀರಿಟ್ಟ ರೇವಣ್ಣ... ಸಖತ್ ಫನ್ನಿ
ಭುಜ ಮುಟ್ಟಿ ಕರೆದು ರಾಹು ಕಾಲ ಶುರುವಾಗಿಬಿಡುತ್ತೆ, ಬೇಗ ಸಚಿವ ಸಂಪುಟ ಸಭೆ ಆರಂಭ ಮಾಡಿ ಬಿಡೋಣ ಎಂದು ರೇವಣ್ಣ ಹೇಳುತ್ತಿದ್ದರು. ಆದರೆ ಸ್ವಲ್ಪ ಸಮಯ ಕಾಯುವಂತೆ ಕುಮಾರಸ್ವಾಮಿ ಸನ್ನೆಯಲ್ಲಿ ತಿಳಿಸಿದರು. ಆದರೂ ಸಿಎಂ ಹಿಂದೆಯೇ ಚಡಪಡಿಸುತ್ತ ರೇವಣ್ಣ ಓಡಾಡುತ್ತಿದ್ದರು. ಒಟ್ಟಿನಲ್ಲಿ ರೇವಣ್ಣ ಇದ್ದಲ್ಲಿ ಎಲ್ಲವೂ ವಾಸ್ತು ಪ್ರಕಾರವೇ ಆಗಬೇಕು ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.