ದೇವೇಗೌಡ ಘೋಷಿಸಿದ್ದ 2ನೇ ಸೇತುವೆ ಮೋದಿಯಿಂದ ಉದ್ಘಾಟನೆ!

By Web DeskFirst Published Dec 5, 2018, 5:24 PM IST
Highlights

ದೇಶದ ಅತೀ ಉದ್ದದ ರೈಲು ಸೇತುವೆ ಉದ್ಘಾಟಿಸಲಿರುವ ಮೋದಿ! ಡಿ.25ರಂದು ಬೋಗಿಬೀಲ್ ರೈಲು ಸೇತುವೆ ಉದ್ಘಾಟನೆ! ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಡುವಿನ 4.9 ಕಿ.ಮೀ ಉದ್ದದ ರೈಲು ಸೇತುವೆ! ಮಾಜಿ ಪ್ರಧಾನಿ ದೇವೇಗೌಡರ ಸಮಯದಲ್ಲಿ ಅನುಮೋದನೆ ಸಿಕ್ಕಿದ್ದ ಸೇತುವೆ
 

ದೀಸಪುರ್(ಡಿ.05): ದೇಶದ ಅತೀ ಉದ್ದದ ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇದೇ ಡಿ.25ರಂದು ಉದ್ಘಾಟಿಸಲಿದ್ದಾರೆ. ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಡುವೆ ಬ್ರಹ್ಮಪುತ್ರ ನದಿ ಮೇಲೆ ಈ ರೈಲು ಸೇತುವೆಯನ್ನು ನಿರ್ಮಿಸಲಾಗಿದೆ.

ಡಿ.25 ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಈ ದಿನವನ್ನು ಸರ್ಕಾರ ‘ಗುಡ್ ಗರ್ವನನ್ಸ್ ಡೇ’ ಆಗಿ ಆಚರಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ದೇಶದ ಅತೀ ಉದ್ದದ ರೈಲು ಸೇತುವೆಯನ್ನು ಮೋದಿ ಈ ದಿನದಂದೇ ಉದ್ಘಾಟಿಸಲಿದ್ದಾರೆ.

ಒಟ್ಟು 4.9 ಕಿ.ಮೀ ಉದ್ದದ ಈ ರೈಲು ಸೇತುವೆ ಅಸ್ಸಾಂ ಮತ್ತು ಅರುಣಾಚಲಪ್ರದೇಶದ ನಡುವಿನ ಬೋಗಿಬೀಲ್ ಬಳಿ ನಿರ್ಮಿಸಲಾಗಿದ್ದು, ಇದೇ ಕಾರಣಕ್ಕೆ ಈ ಸೇತುವೆಗೆ ಬೋಗಿಬೀಲ್ ಸೇತುವೆ ಎಂದೇ ಹೆಸರಿಸಲಾಗಿದೆ.

ಬೋಗಿಬೀಲ್ ರೈಲು ಸೇತುವೆ ನಿರ್ಮಿಸಲು ಮಾಜಿ ಪ್ರಧಾನಿ ದೇವೇಗೌಡ ಅವರ ಆಡಳಿತದ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಈ ರೈಲು ಸೇತುವೆಗೆ ಹಣವನ್ನೂ ಮೀಸಲಿಡಲಾಗಿತ್ತು. ಮುಂದೆ ಮಾಜಿ ಪ್ರಧಾನಿ ಅಡಲ್ ಬಿಹಾರಿ ವಾಜಪೇಯಿ ಇದರ ಶಂಕುಸ್ಥಾಪನೆ ನೆರವೇರಿಸಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಈ ಸೇತುವೆಯನ್ನು ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ದೇವೇಗೌಡರು ಅನುಮೋದಿಸಿದ್ದ ಎರಡನೇ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದಂತಾಗುತ್ತದೆ. ಈ ಹಿಂದೆ ದೇವೇಗೌಡರ ಕಾಲದಲ್ಲೇ ಘೋಷಿಸಲಾಗಿದ್ದ ಅಸ್ಸಾಂ ಮತ್ತು ಅರುಣಾಚಲಪ್ರದೇಶವನ್ನು ಸಂಪರ್ಕಿಸುವ ಸುಮಾರು 9 ಕಿ.ಮೀ. ಉದ್ದದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

click me!