ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಚಕ್ಕರ್... ದೋಸ್ತಿಗೆ ಕೊಟ್ರಾ ಠಕ್ಕರ್?

By Web DeskFirst Published Dec 5, 2018, 5:00 PM IST
Highlights

ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಭಿನ್ನಮತದ ಮಾತುಗಳು ಕೇಳಿ ಬರುತ್ತಿರಿವುದು..ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳೆ ಮತ್ತೆ ಮತ್ತೆ ಗೈರಾಗುತ್ತಿರುವುದಕ್ಕೆ ಸಂಬಂಧ  ಇದೆಯೇ?

ಬೆಂಗಳೂರು[ಡಿ.05]  ರಮೇಶ್ ಜಾರಕಿಹೊಳಿಗೆ ಸ್ಕಾರದ ಮೇಲೆ ಉಂಟಾಗಿರುವ ಮುನಿಸು ಕಡಿಮೆ ಆದಂತೆ ಕಾಣುತ್ತಿಲ್ಲ. ಸಿಎಂ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಗೆ ಜಾರಕೊಹೊಳಿ ಗೈರಾಗಿದ್ದಾರೆ.

ಕಳೆದ ಸಾರಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ಇದ್ದ ಕಾರಣ ಬಲವಂತಕ್ಕೆ ಸಂಪುಟ ಸಭೆಗೆ ಬಂದಿದ್ದ ಜಾರಕಿಹೊಳಿ ಬಂದಿದ್ದರು. ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವ ಜಾರಕಿಹೊಳಿಯವರ ಮೇಲೆ ಬಾಕಿ ಪಾವತಿ ಒತ್ತಡವೂ ಇತ್ತು.

"

‘ಸ್ವಯಂ ಘೋಷಿತ ಮಣ್ಣಿನ ಮಕ್ಕಳೆ, ರೈತರಿಗೆ ಮಣ್ಣು ತಿನ್ನಿಸ್ತಿದ್ದಾರೆ’

ಒಂದು ಕಡೆ ಮಾತನಾಡುತ್ತ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕರ್ನಾಟಕ ರಾಜಕಾರಣದಲ್ಲಿ ಕಂಪನ ಆಗಲಿದೆ ಎನ್ನುತ್ತಾರೆ, ರಮೇಶ್ ಜಾರಕಿಹಪಳಿ ಸಹೋದರ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಓಡಾಡ ಮಾಡುತ್ತ ರೆಸಾರ್ಟ್ ಒಂದನ್ನು ಪರಿಶೀಲನೆ ಮಾಡಿಕೊಂಡು ಬರುತ್ತಾರೆ. ಈ ಮಧ್ಯೆ ಶ್ರೀರಾಮಲು ಆಪ್ತ ಎನ್ನಲಾದ ವ್ಯಕ್ತಿ ದುಬೈ ಮೂಲದ ಉದ್ಯಮಿಯೊಬ್ಬರ ಜತೆ ಆಪರೇಶನ್ ಕಮಲದ ವಿಚಾರ ಮಾತನಾಡಿರುವ ಆಡಿಯೋ ಮಾಧ್ಯಮಗಳ ಕೈಗೆ ಸಿಗುತ್ತದೆ.

ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಯಾರಿಗೂ ಗೊತ್ತಾಗದ ಏನೋ ಒಂದು ಚಟುವಟಿಕೆ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಇನ್ನೊಂದು ಕಡೆ ಸಚಿವ ಸಂಪುಟ ವಿಸ್ತರಣೆಯೂ ಸಮಸ್ಯೆಯಾಗಿದ್ದು ಕಾಂಗ್ರೆಸ್‌ಗೆ ತನ್ನ ಪಟ್ಟಿ ಅಂತಿಮಮ ಮಾಡಲು ಸಾಧ್ಯವಾಗುತ್ತಿಲ್ಲ. ಸಂಪುಟ ಸಭೆಗೆ ಗೈರಾಗುವುದು ಮಾತ್ರವಲ್ಲ ಸರ್ಕಾರಿ ಕಾರು ಬಳಕೆಯನ್ನು ರಮೇಶ್ ಜಾರಕಿಹೊಳಿ ನಿಲ್ಲಿಸಿದ್ದಾರೆ. 

 

 

 

click me!