
ನವದೆಹಲಿ(ಜ.15): ಒಂದು ಕಡೆ ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದರೆ, ರಾಜ್ಯ ಬಿಜೆಪಿ ನಾಯಕರ ಲಕ್ಷ್ಯ ಇದ್ದುದು ಮಾತ್ರ ಜಾರಕಿಹೊಳಿ ಕ್ಯಾಂಪ್ ಮೇಲೆ. ಎಷ್ಟುಶಾಸಕರು ಕಾಂಗ್ರೆಸ್‌ನಿಂದ ಹೊರಗೆ ಬರಲು ತಯಾರಾಗಿದ್ದಾರೆ ಎಂದು ಹಿರಿಯ ನಾಯಕರನ್ನು ಕೇಳುತ್ತಲೇ ಓಡಾಡುತ್ತಿದ್ದ ಬಿಜೆಪಿ ಶಾಸಕರು, ‘ಮುಂಬೈಯಲ್ಲಿ 8 ಇದ್ದಾರಂತೆ, 12 ಆಯ್ತಂತೆ ಹೌದಾ?’ ಎಂದು ಪದೇ ಪದೇ ಪತ್ರಕರ್ತರನ್ನು ಪಕ್ಕಕ್ಕೆ ಕರೆದು ಉತ್ಸಾಹದಿಂದ ಕೇಳುತ್ತಿದ್ದರು.
ಇದನ್ನೂ ಓದಿ: ಅಖಾಡಕ್ಕಿಳಿದ ‘ಶಾ’ಕಮಾಂಡ್? ಇಲ್ಲಿದೆ ಆಪರೇಷನ್ ಸಂಕ್ರಾಂತಿ ಟಾಪ್ ಸೀಕ್ರೆಟ್!
ಆದರೆ ನಿಜ ಏನಪ್ಪ ಎಂದರೆ ಯಡಿಯೂರಪ್ಪ, ಅರವಿಂದ ಲಿಂಬಾವಳಿ ಹೊರತು ಪಡಿಸಿದರೆ ಉಳಿದ ಯಾವುದೇ ನಾಯಕರಿಗೂ ಜಾರಕಿಹೊಳಿ ಕ್ಯಾಂಪ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ, ಇನ್ನೂ ಎರಡು ಮೂರು ದಿನ ಕಾಯಿರಿ ಶುಭ ಸುದ್ದಿ ಕೊಡುತ್ತೇವೆ ಎಂದು ಕೆಲ ಜಿಲ್ಲೆಯ ಶಾಸಕರಿಗೆ ಯಡಿಯೂರಪ್ಪನವರೇ ಹೇಳಿರುವುದರಿಂದ ಸರ್ಕಾರ ರಚನೆಯ ಉತ್ಸಾಹ ಬಿಜೆಪಿ ಶಾಸಕರಲ್ಲಿ ಮೇರೆ ಮೀರಿದೆ.
ಇದನ್ನೂ ಓದಿ: ಐ ಆ್ಯಮ್ ಗೂಳಿಹಟ್ಟಿ, ನಾನು ಸೇಲ್‌ಗೆ ಇಲ್ಲ: ಕುತೂಹಲ ಮೂಡಿಸಿದ ಶಾಸಕರ ಸ್ಟೇಟಸ್!
ಆದರೆ ಹೇಗೆ, ಏನು, ಯಾವಾಗ, ಎಲ್ಲಿ ಎಂಬ ಪ್ರಶ್ನೆಗೆ ಯಾರ ಬಳಿಯೂ ಸ್ಪಷ್ಟಉತ್ತರವಿಲ್ಲ. ಒಬ್ಬ ಹಿರಿಯ ಬಿಜೆಪಿ ನಾಯಕ ಪತ್ರಕರ್ತರ ಬಳಿ ಬಂದು, ‘ನಿಜಕ್ಕೂ ಏನು ನಡೀತಾ ಇದೆ ಎಂದು ನಮಗೆ ಗೊತ್ತಿಲ್ಲ. ಆದರೆ ಜೂನಿಯರ್ ಶಾಸಕರ ಬಳಿ ಹಾಗೆ ಹೇಳೋಕಾಗತ್ತಾ. ಯಡಿಯೂರಪ್ಪನವರು ಚಪ್ಪಾಳೆ ತಟ್ಟಿಎಂದಿದ್ದಾರೆ, ನಾವು ಜೋರಾಗಿ ತಟ್ಟುತ್ತಿದ್ದೇವೆ’ ಎಂದು ಹೇಳಿಕೊಳ್ಳುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.