ವ್ಯಾಲಂಟೈನ್ಸ್ ಡೇ ಬದಲಿಗೆ ಸಹೋದರಿಯರ ದಿನ ಆಚರಣೆ

By Web DeskFirst Published Jan 15, 2019, 11:20 AM IST
Highlights

ಪ್ರೇಮಿಗಳ ದಿನಾಚರಣೆಗೆ ವಿರೋಧ | ವ್ಯಾಲಂಟೈನ್ಸ್ ಡೇ ಬದಲಿಗೆ ಸಹೋದರಿಯರ ದಿನಾಚರಣೆ 

ಬೆಂಗಳೂರು (ಜ. 15): ಪ್ರತಿ ವರ್ಷ ಫೆ.14ರಂದು ವ್ಯಾಲಂಟೇನ್ಸ್‌ ಡೇ ಹೆಸರಲ್ಲಿ ಪ್ರೇಮಿಗಳ ದಿನ ಆಚರಿಸುವುದು, ಇದಕ್ಕೆ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸುವುದು ಭಾರತದಲ್ಲಿ ಸಾಮಾನ್ಯ. ಇದೀಗ ಇದೇ ಟ್ರೆಂಡ್‌ ಪಾಕಿಸ್ತಾನದಲ್ಲೂ ಕಾಣಿಸಿಕೊಂಡಿದೆ.

ಫೆ.14ರ ದಿನವನ್ನು ಪ್ರೇಮಿಗಳ ದಿನದ ಬದಲಾಗಿ ಸೋದರಿಯರ ದಿನವಾಗಿ ಆಚರಿಸಲು ಫೈಸಲಾಬಾದ್‌ನ ಕೃಷಿ ವಿವಿ ನಿರ್ಧರಿಸಿದೆ. ಅಂದು ಕಾಲೇಜಿನ ಹುಡುಗರು, ಕಾಲೇಜಿನ ಸೋದರಿಯರಿಗೆ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ಇಸ್ಲಾಂ ಸಂಪ್ರದಾಯವನ್ನು ಪ್ರೋತ್ಸಾಹಿಸುತ್ತದೆ ಎಂದು ವಿವಿಯ ಉಪಕುಲಪತಿ ಹೇಳಿದ್ದಾರೆ.

click me!