ಕರ್ನಾಟಕದಲ್ಲಿ ಸರ್ಕಾರ ರಚನೆ ಯತ್ನಕ್ಕೆ ಕೊನೆಗೂ ಅಮಿತ್‌ ಶಾ ಎಂಟ್ರಿ!

By Web DeskFirst Published Jan 15, 2019, 12:14 PM IST
Highlights

ಕಾಂಗ್ರೆಸ್‌ನ ಅತೃಪ್ತ ಶಾಸಕರು ಸಂಖ್ಯೆ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದ್ದಂತೆ ಜೆಡಿಎಸ್ ವರಿಷ್ಠ ದೇವೇ ಗೌಡರು ಇದೀಗ ಅಖಾಡಕ್ಕೆ ಇಳಿದಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರ ಸುಗಮ ಹಾದಿಯಲ್ಲಿ ಇಲ್ಲ ಅನ್ನೋದು ಖಚಿವಾಗುತ್ತಿದೆ. ಇದರ ಬೆನ್ನಲೇ ಬಿಜೆಪಿ ಹೈಕಮಾಂಡ್ ಅಮಿತ್ ಶಾ ಕೂಡ ಇದೀಗ ಎಂಟ್ರಿ ಕೊಟ್ಟಿರೋದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ನವದೆಹಲಿ(ಜ.15): ಸಂಪುಟ ವಿಸ್ತರಣೆ ನಂತರ ರಮೇಶ್‌ ಜಾರಕಿಹೊಳಿ ದಿಲ್ಲಿಗೆ ಬಂದು ಕುಳಿತಿದ್ದರೂ ಅವರೊಡನೆ ನೇರವಾಗಿ ಕುಳಿತು ಮಾತನಾಡಲು ತಯಾರಾಗದ ಅಮಿತ್‌ ಶಾ, ಕಳೆದ ಒಂದು ವಾರದ ಈಚೆಗೆ ಮಾತ್ರ ‘18 ಶಾಸಕರು ತಯಾರಾದರೆ ಸರ್ಕಾರ ರಚನೆಗೆ ನಮ್ಮ ಅಡ್ಡಿ ಇಲ್ಲ’ ಎಂದು ಯಡಿಯೂರಪ್ಪನವರಿಗೆ ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ: ಶೀಘ್ರದಲ್ಲೇ ಕೆಲ ಜಿಲ್ಲೆಯ ಶಾಸಕರಿಗೆ ಶುಭಸುದ್ದಿ: ಬಿ.ಎಸ್.ಯಡಿಯೂರಪ್ಪ!

ಅಗತ್ಯಬಿದ್ದಲ್ಲಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್ ಸಹಾಯ ಪಡೆದುಕೊಳ್ಳಿ ಎಂದು ಕೂಡ ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ 20 ಲೋಕಸಭಾ ಸೀಟ್‌ ಗೆಲ್ಲಬಹುದು ಎಂಬ ಅಭಿಪ್ರಾಯವಿದ್ದು, ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರವಿದ್ದರೆ ಬಿಜೆಪಿ 10-12ಕ್ಕಿಂತ ಜಾಸ್ತಿ ಗೆಲ್ಲುವುದು ಕಷ್ಟಎಂಬ ಅನಿಸಿಕೆಯಿದೆ. ಹೀಗಾಗಿ ಸರ್ಕಾರ ರಚನೆ ಎಂದಕೂಡಲೇ ಹೈಕಮಾಂಡ್‌ ಕೂಡ ಉತ್ಸಾಹದಲ್ಲಿದೆ.

ಇದನ್ನೂ ಓದಿ: ಬಿಎಸ್‌ವೈ ಲವಲವಿಕೆಯ ಗುಟ್ಟೇನು?

ಇಷ್ಟು ದಿನ ಸೈಲೆಂಟ್ ಆಗಿದ್ದ ಬಿಜೆಪಿ ಹೈಕಮಾಂಡ್ ಇದೀಗ ಅಖಾಡಕ್ಕೆ ಇಳಿದಿದ್ದಾರೆ.  ಅಮಿತ್ ಶಾ ಎಂಟ್ರಿ ಕೊಡುತ್ತಿದ್ದಂತೆ ರಾಜ್ಯ ರಾಜ್ಯಕಾರಣದಲ್ಲಿ ಸಂಚಲನ ಮೂಡಿದೆ. ಇಷ್ಟೇ ಅಲ್ಲ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಕನಸು ಬಿಜೆಪಿ ಪಾಳಯದಲ್ಲಿ ಬಲಗೊಳ್ಳುತ್ತಿದೆ.

click me!