ಜಲ್ಲಿಕಟ್ಟು ಸ್ಪರ್ಧಿಗೆ 2 ಲಕ್ಷ ಮೌಲ್ಯದ ವಿಮೆ

By Web DeskFirst Published Jan 15, 2019, 12:04 PM IST
Highlights

ಜಲ್ಲಿಕಟ್ಟು ಕ್ರೀಡಾಳುಗಳಿಗೆ ಮದುರೈ ಜಿಲ್ಲಾಡಳಿತದಿಂದ 2 ಲಕ್ಷ ಮೌಲ್ಯದ ವಿಮೆ | ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಜೀವವಿಮೆಯನ್ನು ಮಾಡಿಸಲೇಬೇಕೆಂದು ಆದೇಶ 

ಮದುರೈ (ಜ.15): ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಜೀವವಿಮೆಯನ್ನು ಮಾಡಿಸಲೇಬೇಕು ಎಂದು ತಮಿಳುನಾಡಿನ ಮದುರೈ ಜಿಲ್ಲಾಡಳಿತ ಸೂಚನೆ ನೀಡಿದೆ.

ಜೀವದ ಹಂಗು ತೊರೆದು ಹೋರಿಯನ್ನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಇದೇ ಮೊದಲ ಬಾರಿಗೆ ಇಂಥ ಸುರಕ್ಷತಾ ಪಾಲಿಸಿ ಮಾಡಿಸಲಾಗುತ್ತಿದೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯಡಿ ವಿಮೆ ಮಾಡಿಸಲೇಬೇಕು.

ಈ ಪಾಲಿಸಿಯು 2 ಲಕ್ಷ ರು. ಅಪಘಾತ ವಿಮೆಯನ್ನು ಒಳಗೊಂಡಿರುತ್ತದೆ. ಒಂದು ವೇಳೆ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಸ್ಪರ್ಧಾಳು ಮೃತರಾದರೆ, ಈ ವಿಮೆಯನ್ನು ಅವರ ಕುಟುಂಬಸ್ಥರು ಕ್ಲೇಮ್‌ ಮಾಡಿಕೊಳ್ಳಬಹುದು.

click me!