ಹಿಂದೆಂದೂ ಆಗಿಲ್ಲ..ಪ್ರಮಾಣದೊಂದಿಗೆ ಜಗದೀಶ್ ಶೆಟ್ಟರ್ ಅಪರೂಪದ ದಾಖಲೆ

Published : Aug 20, 2019, 10:27 PM ISTUpdated : Aug 20, 2019, 10:39 PM IST
ಹಿಂದೆಂದೂ ಆಗಿಲ್ಲ..ಪ್ರಮಾಣದೊಂದಿಗೆ ಜಗದೀಶ್ ಶೆಟ್ಟರ್ ಅಪರೂಪದ ದಾಖಲೆ

ಸಾರಾಂಶ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಅಳೆದು -ತೂಗಿ ಲೆಕ್ಕ ಹಾಕಿರುವ ಸಂಪುಟದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪ್ರಮಾಣ ವಚನ ತೆಗೆದುಕೊಂಡು ಹೊಸ ದಾಖಲೆ ಬರೆದಿದ್ದಾರೆ. ಹಾಗಾದರೆ ದಾಖಲೆ ಏನು?

ಬೆಂಗಳೂರು[ಆ. 20]  ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ 17 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಧಾರವಾಡದ ಜಗದೀಶ್ ಶೆಟ್ಟರ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದಾರೆ. ಜತೆಗೆ ದಾಖಲೆಯೊಂದನ್ನು ಬರೆದಿದ್ದಾರೆ.

ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಇದೇ ಮೊದಲ ಸಾರಿ ಮಾಜಿ ಸಿಎಂ ಒಬ್ಬರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ತೆಗೆದುಕೊಂಡು ಕೆಲಸ ಮಾಡಲಿದ್ದಾರೆ.

ಬಿಎಸ್‌ವೈ ಸೇನೆ: ಯಾವ ಜಿಲ್ಲೆಗೆ ದಕ್ಕಿಲ್ಲ ಮಂತ್ರಿ ಭಾಗ್ಯ?

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದಾಗ ನಂತರ ಬದಲಾದ ರಾಜಕಾರಣದ ವಾತಾವರಣದಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಲಗಿಳಿದ ಮೇಲೆ ಸದಾನಂದ ಗೌಡ ಸಿಎಂ ಆದರು. ಇದಾದ ಮೇಲೆ ಮತ್ತೆ ರಾಜಕಾರಣದ ಗೊಂದಲ ಉಂಟಾದಾಗ ಜಗದೀಶ್ ಶೆಟ್ಟರ್ ಸಿಎಂ ಆದರು.

ಬಿಎಸ್ ಯಡಿಯೂರಪ್ಪ ನಮ್ಮ ಪರಮೋಚ್ಛ ನಾಯಕರು ಅವರ ಅಡಿಯಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಶೆಟ್ಟರ್ ಹಿಂದೊಮ್ಮೆ ಹೇಳಿದ್ದರು. ಅದರಂತೆ ಇದೀಗ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ.  ಪಕ್ಕದ ತಮಿಳುನಾಡಿನಲ್ಲಿ ಈ ರೀತಿ ಮಾಜಿ ಸಿಎಂ ಆಗಿದ್ದವರು ಮತ್ತೆ ಸಚಿವರಾದ ಉದಾಹರಣೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!
ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌