ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಇಂದು ಬೃಹತ್ ಬೆಂಗಳೂರು ಬಜೆಟ್ ಮಂಡನೆಯಾಗಲಿದೆ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ। ಹರೀಶ್ ಕುಮಾರ್ ಬರೋಬ್ಬರಿ 20,000 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿ, ಆರೋಗ್ಯ, ಮೂಲಸೌಕರ್ಯ, ರಸ್ತೆ, ಫ್ಲೈವರ್, ಸ್ಕೈಡೆಕ್ ಸೇರಿದಂತೆ ದೂರದೃಷ್ಟಿ ಯೋಜನೆಗಳು ಈ ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿಯಲ್ಲಿ ಸೇರಿದೆ. ಬೆಂಗಳೂರು ಬಜೆಟ್, ಕರ್ನಾಟಕದ ರಾಜಕೀಯ ಬೆಳವಣಿಗೆ ಸೇರಿದಂತೆ ಇಂದಿನ ಪ್ರತಿಕ್ಷಣದ ಸುದ್ದಿ ಅಪ್‌ಡೇಟ್ ಇಲ್ಲಿದೆ.

10:33 PM (IST) Mar 29
ಕೇರಳ ಹೈಕೋರ್ಟ್ ವಿಚ್ಛೇದನ ತೀರ್ಪನ್ನು ಎತ್ತಿಹಿಡಿದಿದೆ. ಗಂಡನ ಅತಿಯಾದ ಆಧ್ಯಾತ್ಮಿಕ ಚಟುವಟಿಕೆಗಳು, ಕೌಟುಂಬಿಕ ಜೀವನದ ನಿರ್ಲಕ್ಷ್ಯ ಮತ್ತು ತನ್ನ ನಂಬಿಕೆಗಳನ್ನು ಹೆಂಡತಿಯ ಮೇಲೆ ಹೇರಲು ಪ್ರಯತ್ನಿಸುವುದು ಮಾನಸಿಕ ಹಿಂಸೆಯಾಗುತ್ತದೆ ಎಂದು ಹೇಳಿದೆ.
10:14 PM (IST) Mar 29
ಇಲ್ಲಿಯವರೆಗಿನ ಅತಿದೊಡ್ಡ ಸಾಫ್ಟ್‌ವೇರ್ ಅಪ್‌ಗ್ರೇಡ್ ಆಗಿ ಐಒಎಸ್ 19 ಅನ್ನು ಆ್ಯಪಲ್ 2025ರಲ್ಲಿ ಬಿಡುಗಡೆ ಮಾಡಲಿದೆ.
ಪೂರ್ತಿ ಓದಿ09:02 PM (IST) Mar 29
ಬಾಲಿವುಡ್ ನಟ ಸಲ್ಮಾನ್ ಖಾನ್ ರಾಮ ಜನ್ಮಭೂಮಿ ಎಡಿಷನ್ ವಾಚ್ ಧರಿಸಿದ್ದು ಇಸ್ಲಾಂನಲ್ಲಿ ನಿಷೇಧಿತ ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ. ಸಲ್ಮಾನ್ ಖಾನ್ ಮುಂಬರುವ ಚಿತ್ರ ಸಿಕಂದರ್ ಪ್ರಚಾರದ ವೇಳೆ ಈ ವಾಚ್ ಧರಿಸಿದ್ದರು. ಈ ವಾಚ್ ಬೆಲೆ 34 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪೂರ್ತಿ ಓದಿ08:39 PM (IST) Mar 29
ಬೆಂಗಳೂರಿನಲ್ಲಿ ವಾಣಿಜ್ಯ ಡ್ರೋನ್ ಡೆಲಿವರಿ ಸೇವೆ ಆರಂಭವಾಗಿದೆ. ಕೋಣನಕುಂಟೆ ಮತ್ತು ಕನಕಪುರ ರಸ್ತೆ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದ್ದು, ಕೆಲವೇ ನಿಮಿಷಗಳಲ್ಲಿ ವಸ್ತುಗಳನ್ನು ತಲುಪಿಸಬಹುದು.
ಪೂರ್ತಿ ಓದಿ08:22 PM (IST) Mar 29
ಈ ಸಂಗತಿಯೀಗ ವಿವಾದ ಸ್ವರೂಪ ಪಡೆದುಕೊಂಡು ಸದ್ದು ಮಾಡುತ್ತಿದೆ. ಈ ವಾದ-ಪ್ರತಿವಾದದ ನಡುವೆ ಭಾರತದ ಖ್ಯಾತ ಗೀತ ರಚನೆಕಾರ ಹಾಗು ಚಿತ್ರಕಥೆಗಾರ ಜಾವೇದ್ ಅಖ್ತರ್ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ, ಅದೀಗ ಉರಿಯೋ ಬೆಂಕಿಗೆ ತುಪ್ಪ..
ಪೂರ್ತಿ ಓದಿ07:53 PM (IST) Mar 29
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಅಜೇಯ 30 ರನ್ ಗಳಿಸಿದರೂ, ಚೆನ್ನೈ ಸೋತಿತು. ಸೋಲುವ ಹಂತದಲ್ಲಿ ಧೋನಿ ಸಿಕ್ಸರ್ ಹೊಡೆದರೂ, ಗೆಲುವಿನ ಆಸೆಯಿದ್ದಾಗ ರನ್ ಗಳಿಸಿಲ್ಲ ಎಂಬ ಅಂಕಿ ಅಂಶಗಳು ಬಹಿರಂಗವಾಗಿವೆ.
ಪೂರ್ತಿ ಓದಿ07:13 PM (IST) Mar 29
ಇತ್ತೀಚಿನ ಅಧ್ಯಯನದ ಪ್ರಕಾರ ಭಾರತೀಯರು ಸೋಶಿಯಲ್ ಮೀಡಿಯಾ, ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗಾಗಿ ದಿನಕ್ಕೆ 5 ಗಂಟೆಗಳ ಕಾಲ ಮೊಬೈಲ್ ಬಳಸುತ್ತಾರೆ. ಕೈಗೆಟಕುವ ಇಂಟರ್ನೆಟ್‌ನಿಂದಾಗಿ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ವೇದಿಕೆಗಳು ಟೆಲಿವಿಷನ್ ಅನ್ನು ಹಿಂದಿಕ್ಕಿವೆ.
ಪೂರ್ತಿ ಓದಿ06:39 PM (IST) Mar 29
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರವು ಬ್ಯಾಂಕ್‌ಗಳನ್ನು ಕಲೆಕ್ಷನ್ ಏಜೆಂಟ್‌ಗಳನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ. ಕನಿಷ್ಠ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ₹ 43,500 ಕೋಟಿ ಸಂಗ್ರಹಿಸಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಕೂಡ ಕೋಟ್ಯಾಧಿಪತಿ ಸ್ನೇಹಿತರ ಸಾಲ ಮನ್ನಾ ಮಾಡಿದ್ದಾರೆಂದು ಟೀಕಿಸಿದ್ದಾರೆ.
ಪೂರ್ತಿ ಓದಿ06:26 PM (IST) Mar 29
ಉಡುಪಿಯಲ್ಲಿ ಕ್ರೈಸ್ತ ಯುವತಿಯನ್ನು ಮುಸ್ಲಿಂ ಯುವಕ ಕಿಡ್ನಾಪ್ ಮಾಡಿರುವ ಆರೋಪ ಕೇಳಿಬಂದಿದೆ. ಯುವತಿಯ ಪೋಷಕರು ಉಡುಪಿಯ ಕರಂಬಳ್ಳಿಯ ಮೊಹಮ್ಮದ್ ಅಕ್ರಂ ಎಂಬಾತನ ವಿರುದ್ಧ ಕಿಡ್ನಾಪ್ ದೂರು ದಾಖಲಿಸಿದ್ದಾರೆ.
ಪೂರ್ತಿ ಓದಿ06:13 PM (IST) Mar 29
ಯಾವ್ದೋ ಹಾರುತ್ತಾ ಇರೋ ವಿಮಾನದ ಬಗ್ಗೆ ತಲೆ ಕೆಡಿಸ್ಕೋಬಾರ್ದು.. ಅದೂ ಕೂಡ ಯಾವುದೋ ಒಂದು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತೆ..' ಎಂದಿದ್ದಾರೆ ಕಿಚ್ಚ ಸುದೀಪ್. ಅವರಾಡಿರುವ ಮಾತುಗಳ ಬಗ್ಗೆ ಹಲವರು..
ಪೂರ್ತಿ ಓದಿ06:12 PM (IST) Mar 29
ಮಹಾರಾಷ್ಟ್ರ ಶಿವಸೇನೆ ವಿರುದ್ಧ ವ್ಯಂಗ್ಯವಾಡಿ ಬಂಧನದ ಭೀತಿ ಎದುರಿಸುತ್ತಿರುವ ಕಮಿಡಿಯನ್ ಕುನಾಲ್ ಕಮ್ರಾ, ಇದೀಗ ನಾರಾಯಣ ಮೂರ್ತಿ- ಸುಧಾ ಮೂರ್ತಿ ಕುರಿತು ವಿವಾದ ಸೃಷ್ಟಿಸಿಕೊಂಡಿದ್ದಾರೆ. ಆಗಿದ್ದೇನು?
06:01 PM (IST) Mar 29
ಏಪ್ರಿಲ್ 2 ರಂದು ಊಟಿಗೆ ಹೋಗುವ ಪ್ರವಾಸಿಗರು ಗಮನಿಸಿ. ಇ-ಪಾಸ್ ಕಡ್ಡಾಯ ವಿರೋಧಿಸಿ ನೀಲಗಿರಿ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರಿಕೆ ವಹಿಸಿ.
ಪೂರ್ತಿ ಓದಿ05:42 PM (IST) Mar 29
ಇತ್ತ ಯುವಕರು ಒಂದು ಮದುವೆಯಾಗಲು ಹುಡುಗಿಯೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದರೆ, ಅತ್ತ ಲವ್ ಫೇಲ್ಯೂರ್ ಆದ ಯುವಕನೊಬ್ಬ ಕೊನೆಗೆ ಇಬ್ಬರನ್ನು ಲವ್ ಮಾಡಿ ಇಬ್ಬರನ್ನೂ ಮದ್ವೆಯಾಗಿದ್ದಾನೆ. ವಿಡಿಯೋ ವೈರಲ್ ಆಗಿದೆ.
05:24 PM (IST) Mar 29
2025ರ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಚೆಪಾಕ್‌ನಲ್ಲಿ 17 ವರ್ಷಗಳ ಬಳಿಕ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದ್ದು, ವಿರಾಟ್ ಕೊಹ್ಲಿ ಸಂಭ್ರಮಿಸಿದ್ದಾರೆ.
ಪೂರ್ತಿ ಓದಿ05:24 PM (IST) Mar 29
ಕರ್ನಾಟಕದಲ್ಲಿ NREGA ಯೋಜನೆಯಲ್ಲಿ 669.92 ಕೋಟಿ ರೂ. ದುರುಪಯೋಗವಾಗಿದೆ ಎಂದು ಸಾಮಾಜಿಕ ಲೆಕ್ಕಪರಿಶೋಧನಾ ವರದಿ ಬಹಿರಂಗಪಡಿಸಿದೆ. ಮೃತ ವ್ಯಕ್ತಿಗಳ ಹೆಸರಿನಲ್ಲಿ ಹಣ ವಿತರಣೆ ಮತ್ತು ದಾಖಲೆಗಳಿಲ್ಲದ ಖರ್ಚುಗಳು ಸೇರಿವೆ.
ಪೂರ್ತಿ ಓದಿ05:20 PM (IST) Mar 29
ದರ್ಶನ್ ತೂಗುದೀಪ ಆಪ್ತ ಧನ್ವೀರ್ ಗೌಡ ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟ ಧನ್ವೀರ್ ಗೌಡ ಅವರು ನಟ ದರ್ಶನ್ ಸದ್ಯದ ಪರಿಸ್ಥಿತಿ ಹಾಗೂ ಜೀವನದ ದೃಷ್ಟಿಕೋನದ ಬಗ್ಗೆ ಮಾತನ್ನಾಡಿದ್ದಾರೆ. ತುಂಬಾ ಕುತೂಹಲಕರ ವಿಷಯವನ್ನೂ ಸಹ ಧನ್ವೀರ್ ಗೌಡ..
ಪೂರ್ತಿ ಓದಿ05:01 PM (IST) Mar 29
ಬ್ಯಾಂಕಾಕ್ನಲ್ಲಿ ಭೂಕಂಪ ಉಂಟಾದ ಸಮಯದಲ್ಲಿ ಈಜುಕೊಳದಲ್ಲಿ ಮೈಮರೆತಿದ್ದ ಪ್ರೇಮಿಗಳು ಜಸ್ಟ್ ಎಸ್ಕೇಪ್ ಆಗಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
04:50 PM (IST) Mar 29
ಕರ್ನಾಟಕದಲ್ಲಿ ಹೈ-ಸೆಕ್ಯುರಿಟಿ ನೋಂದಣಿ ಫಲಕ (HSRP) ಅಳವಡಿಕೆಯ ಗಡುವು ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. ಆದರೆ, ಕೇವಲ 29% ವಾಹನಗಳಿಗೆ ಮಾತ್ರ ಅಳವಡಿಸಲಾಗಿದ್ದು, ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ04:06 PM (IST) Mar 29
ಚೆನ್ನೈ ಕ್ರೀಡಾಂಗಣದಲ್ಲಿ 17 ವರ್ಷಗಳ ನಂತರ ಆರ್‌ಸಿಬಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್‌ಗಳಿಂದ ಜಯಗಳಿಸಿತು, ಇದು ಟೂರ್ನಿಯಲ್ಲಿ ಆರ್‌ಸಿಬಿಯ ಸತತ 2ನೇ ಗೆಲುವಾಗಿದೆ.
ಪೂರ್ತಿ ಓದಿ04:06 PM (IST) Mar 29
ರೈಲ್ವೆ ಕೌಂಟರ್‌ನಲ್ಲಿ ಪಡೆದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಬಹುದು. ಆದರೆ, ಹಣ ಪಡೆಯಲು ರಿಸರ್ವೇಷನ್ ಕೌಂಟರ್‌ಗೆ ತೆರಳುವುದು ಕಡ್ಡಾಯ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.
ಪೂರ್ತಿ ಓದಿ03:41 PM (IST) Mar 29
ಕರುನಾಡಿನಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಪೂರ್ತಿ ಓದಿ03:34 PM (IST) Mar 29
ರಶ್ಮಿಕಾ ಮಂದಣ್ಣ ಅವರನ್ನು ವೈಯಕ್ತಿಕ ಸಂಗತಿಗಳಿಗೆ ಟ್ರೋಲ್ ಮಾಡುತ್ತಲೇ ಇರುತ್ತಾರೆ, ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟಕೆಟ್ಟ ಕಾಮೆಂಟ್‌ಗಳು ಬರುತ್ತಲೇ ಇರುತ್ತವೆ. ಆದರೆ, ಅವರು ಕನ್ನಡ ಬಿಟ್ಟು ಬಾಲಿವುಡ್ ಸೇರಿದಂತೆ ಇಡೀ ಭಾರತದ ಲೆವಲ್‌ಗೆ..
ಪೂರ್ತಿ ಓದಿ03:19 PM (IST) Mar 29
ಕನ್ಯತ್ವ ಪರೀಕ್ಷೆಗಳನ್ನು ನಡೆಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ಹೇಳಿದೆ. ಇದು ಹೆಣ್ಣಿನ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದಿದೆ. ಕೋರ್ಟ್ ಕನ್ಯತ್ವ ಪರೀಕ್ಷೆ ಕುರಿತು ಈ ಆದೇಶ ಹೊರಡಿಸಿದ್ದೇಕೆ?
ಪೂರ್ತಿ ಓದಿ02:34 PM (IST) Mar 29
ಚೆನ್ನೈನಲ್ಲಿ RCB ಐತಿಹಾಸಿಕ ಜಯ ಸಾಧಿಸಿದೆ, 17 ವರ್ಷಗಳ ನಂತರ CSK ವಿರುದ್ಧ ಗೆಲುವು ದಾಖಲಿಸಿದೆ. ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದಕ್ಕೆ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.
ಪೂರ್ತಿ ಓದಿ01:54 PM (IST) Mar 29
ಒಬ್ಬಳು ಸಂಬಂದ ಬ್ರೇಕ್ ಆದಾಗ ಮತ್ತೊಬ್ಬಳ ಪ್ರೀತಿಸಿದ್ದಾನೆ. ಮದುವೆ ತಯಾರಿ ನಡೆಯುತ್ತಿದ್ದಂತೆ ಎಕ್ಸ್ ಗರ್ಲ್‌ಫ್ರೆಂಡ್ ಪ್ರತ್ಯಕ್ಷಳಾಗಿದ್ದಾಳೆ.ಇದು ಸಿನಿಮಾ ಅಲ್ಲ ನಿಜ ಜೀವನ, ನೀವಂದುಕೊಂಡಂತೆ ಇಲ್ಲಿ ರಂಪಾಟ ನಡೆದಿಲ್ಲ. ಇದಕ್ಕೆ ಕಾರಣ ಸಿಂಪಲ್ ಆಗಿರೋ ಒಂದು ಪರಿಹಾರ ಸೂತ್ರ. ಮುಂದೇನಾಯ್ತು?
01:43 PM (IST) Mar 29
ಒಂದು ಸಂದರ್ಶನದಲ್ಲಿ ಚಂದನ್ ಶೆಟ್ಟಿಯವರಿಗೆ 'ನಿಮ್ಮ ಅಮ್ಮನಿಗೆ ನಿಮ್ಮ ವಿಚ್ಛೇದನದ ಬಗ್ಗೆ ಗೊತ್ತಾದಾಗ ಏನು ಅಂದ್ರು?' ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಚಂದನ್ ಶೆಟ್ಟಿ 'ಅಮ್ಮನಿಗೆ ಡಿವೋರ್ಸ್ ವಿಷಯ ಗೊತ್ತಾಗಿದ್ದು ಮೊದಲಲ್ಲ..
ಪೂರ್ತಿ ಓದಿ01:03 PM (IST) Mar 29
ಇದೊಂದು ಮರ್ಡರ್ ಮಿಸ್ಟ್ರಿ. ಒಂದು ಕೊಲೆ ನಡೆಯುತ್ತದೆ. ಅದರ ಬೆನ್ನು ಹತ್ತಿದಾಗ ಮತ್ತೊಂದಷ್ಟು ಕೊಲೆಗಳು. ಅಲ್ಲೆಲ್ಲೋ ಒಂದು ತಿರುವು ಮತ್ತಿನ್ನೆಲ್ಲೋ ಕರೆದೊಯುತ್ತದೆ. ಮರ್ಡರ್ ಮಿಸ್ಟ್ರಿಗೆ ಇರಬೇಕಾದ ಮೂಲಗುಣ ನಿಗೂಢತೆ ಮತ್ತು ಅನೂಹ್ಯತೆ.
ಪೂರ್ತಿ ಓದಿ12:59 PM (IST) Mar 29
ಪ್ರಧಾನಿ ನರೇಂದ್ರ ಮೋದಿಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊಂಡಾಡಿದ್ದಾರೆ. ಮೋದಿ ತುಂಬಾ ಸ್ಮಾರ್ಟ್ ಎಂದಿದ್ದಾರೆ. ಪ್ರಮುಖವಾಗಿ ಟಾರಿಫ್, ಆಮದು ಸುಂಕ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತು ಟ್ರಂಪ್, ಪ್ರಧಾನಿ ಮೋದಿಯನ್ನು ಹೊಗಳಿದ್ದೇಕೆ?
ಪೂರ್ತಿ ಓದಿ12:47 PM (IST) Mar 29
ತ್ರಿಕೋನ ಪ್ರೇಮಕತೆಯಂತೆ ಸಾಗುವ ಕತೆಯಲ್ಲಿ ಪ್ರೇಮವನ್ನು ಸ್ಥಾಯಿ ಭಾವವಾಗಿ ಇಟ್ಟುಕೊಂಡು ದಂತಕತೆ, ಇತಿಹಾಸ, ಆರ್ಕಿಯಾಲಜಿ, ಕೋಟೆ ಕೊತ್ತಲು, ಆದಿವಾಸಿ, ಅಲೋಪಥಿ, ಆಯುರ್ವೇದ ಹೀಗೆ ಬಹಳಷ್ಟು ವಿಚಾರಗಳನ್ನು ಜೋಡಿಸಿದ್ದಾರೆ.
ಪೂರ್ತಿ ಓದಿ12:41 PM (IST) Mar 29
ಶಾಲಾ ಶಿಕ್ಷಣ ಸಚಿವರ ಭೇಟಿಗೆ ಬಂದ ಪೋಷಕರನ್ನು ಮಾಧ್ಯಮದೊಂದಿಗೆ ಬಂದ ಕಾರಣಕ್ಕೆ ಸಚಿವರು ಸಿಡಿಮಿಡಿಗೊಂಡಿದ್ದಾರೆ. ವಯೋಮಿತಿ ಗೊಂದಲದಿಂದ ನೊಂದ ಪೋಷಕರು ಸಚಿವರ ಬೇಜವಾಬ್ದಾರಿ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ12:21 PM (IST) Mar 29
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ರಾಜಕೀಯ ಉದ್ದೇಶವಿದ್ದಿದ್ದರೆ ಮುಸುಕು ಹಾಕಿಕೊಂಡು ಗೌಪ್ಯವಾಗಿ ಭೇಟಿಯಾಗುತ್ತಿದ್ದೆವು.
ಪೂರ್ತಿ ಓದಿ12:01 PM (IST) Mar 29
156 ಹೆಲಿಕಾಪ್ಟರ್‌ಗಳನ್ನು ಭಾರತೀಯ ಸೇನೆ (90 ಹೆಲಿಕಾಪ್ಟರ್‌ಗಳು) ಮತ್ತು ಭಾರತೀಯ ವಾಯು ಸೇನೆಯ (66 ಹೆಲಿಕಾಪ್ಟರ್‌ಗಳು) ನಡುವೆ ಹಂಚಿಕೆ ಮಾಡಲಾಗುತ್ತದೆ. ಈ ಹೆಲಿಕಾಪ್ಟರ್‌ಗಳನ್ನು ಕರ್ನಾಟಕದ ತುಮಕೂರಿನಲ್ಲಿರುವ ಎಚ್ಎಎಲ್ ಘಟಕದಲ್ಲಿ ನಿರ್ಮಿಸಲಾಗುತ್ತದೆ.
11:59 AM (IST) Mar 29
ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಅಹಮದಾಬಾದ್‌ನಲ್ಲಿ ಸೆಣಸಲಿದ್ದಾರೆ. ಉಭಯ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡಿವೆ. ರೋಹಿತ್, ಸೂರ್ಯಕುಮಾರ್ ಮಿಂಚಬೇಕಿದೆ.
ಪೂರ್ತಿ ಓದಿ11:36 AM (IST) Mar 29
ಹಂಪಿ ವಿಠ್ಠಲ ಮಂಟಪದಲ್ಲಿನ ಕಲ್ಲಿನ ಕಂಬಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತ ನಾದ ಕೇಳಿ ಬರುವಂತೆಯೇ ಸಂಗೀತ ನಾದ ಮೊಳಗಿಸುವ ಕಲ್ಲುಗಳನ್ನು ಹೊಸಪೇಟೆ ಧರ್ಮಸಾಗರ ಗ್ರಾಮದ ಸಮೀಪದಲ್ಲಿರುವ ದೇವಲಾಪುರದ ಕರೆಕಲ್ಲು ಗುಡ್ಡದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಿದೆ.
ಪೂರ್ತಿ ಓದಿ11:00 AM (IST) Mar 29
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸ್ತುತ ಹೇಳತೀರದ ಆರ್ಥಿಕ ಸಂಕಷ್ಟದಲ್ಲಿದ್ದು, ಬರುವ ಜೂನ್‌ನಿಂದ ವಿಶ್ವವಿದ್ಯಾಲಯದ 1800 ನಿವೃತ್ತ ನೌಕರರಿಗೆ ಪಿಂಚಣಿ ಸ್ಥಗಿತಗೊಂಡರೂ ಅಚ್ಚರಿ ಇಲ್ಲ!
ಪೂರ್ತಿ ಓದಿ10:58 AM (IST) Mar 29
ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಖರೀದಿಸಿ ಬಳಿಕ ಎಕ್ಸ್ ಆಗಿ ಬದಲಿಸಿದ್ದರು. ಇದೀಗ ಉದ್ಯಮಿ ಎಲಾನ್ ಮಸ್ಕ್ ಇದೀಗ ಬರೋಬ್ಬರಿ 33 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಎಕ್ಸ್ ಮಾರಾಟ ಮಾಡಿದ್ದಾರೆ. ಆದರೆ ಎಲಾನ್ ಮಸ್ಕ್ 44 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಖರೀದಿಸಿದ್ದರು.
ಪೂರ್ತಿ ಓದಿ10:37 AM (IST) Mar 29
‘ಫೋಟೋಅಕೂಸ್ಟಿಕ್ಸ್ ಸೆನ್ಸಿಂಗ್’ ಮೂಲಕ ಸಕ್ಕರೆ ಪ್ರಮಾಣ ಅಳೆಯುವ ಸಂಶೋಧನೆಯನ್ನು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ‘ಇನ್‌ಸ್ಟ್ರುಮೆಂಟೇಷನ್ ಆ್ಯಂಡ್ ಅಪ್ಲೈಡ್ ಫಿಸಿಕ್ಸ್’ (ಐಎಪಿ) ವಿಭಾಗ ಮಾಡಿದೆ.
ಪೂರ್ತಿ ಓದಿ10:11 AM (IST) Mar 29
‘ಹೋಟೆಲ್‌ಗಳಲ್ಲಿ ತಿಂಡಿ, ತಿನಿಸು, ಊಟದ ಬಿಲ್‌ಗಳ ಮೇಲಿನ ಸೇವಾ ಶುಲ್ಕ (ಸರ್ವೀಸ್ ಚಾರ್ಜ್) ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವಲ್ಲ. ಅದು ಸ್ವಯಂಪ್ರೇರಿತ. ಹೋಟೆಲ್‌ಗಳು ಈ ಶುಲ್ಕವನ್ನು ಗ್ರಾಹಕರ ಮೇಲೆ ಕಡ್ಡಾಯವಾಗಿ ವಿಧಿಸುವಂತಿಲ್ಲ’ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಪೂರ್ತಿ ಓದಿ09:49 AM (IST) Mar 29
ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧದ ವಿಚಾರಣೆಗೆ ಯುಗಾದಿ ಹಬ್ಬದ ನಂತರ ಹಾಜರಾಗುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಿಐಡಿ ಅಧಿಕಾರಿಗಳಿಗೆ ವಿನಂತಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೂರ್ತಿ ಓದಿ09:45 AM (IST) Mar 29
ಯಶ್ ಅಭಿಮಾನಿಗಳಿಗೆ ಹಬ್ಬ, ಯಶ್ ಅಭಿನಯದ ಟಾಕ್ಸಿಕ್ ಬಿಡುಗಡೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಇದರ ಜೊತೆಗೆ ಬಾಲಿವುಡ್ ಸಿನಿಮಾ ರಾಮಾಯಣ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಎರಡು ಸಿನಿಮಾ ಬಿಡುಗಡೆ ಯಾವಾಗ?
ಪೂರ್ತಿ ಓದಿ